ಶಬರಿಮಲೆಯಲ್ಲಿ ಮಳೆ ಯಾತ್ರೆ ಮಾಡುವ ಸ್ವಾಮಿಗಳಿಗೆ ಮುನ್ನೆಚ್ಚರಿಕೆ
ಪ್ರತಿ ತಿಂಗಳ ಸಂಕ್ರಮಣ ಶಬರಿಮಲೆಗೆ ಭಕ್ತರು ಆಗಮಿಸಿ ಅಯ್ಯಪ್ಪನನ್ನು ಕಣ್ತುಂಬಿಕೊಂಡು ಪಾವನರಾಗುತ್ತಿದ್ದಾರೆ.ಅದರಂತೆ ಈ ತಿಂಗಳಲ್ಲಿ ಸ್ವಾಮಿ ದರುಶನ ಮಾಡಲು ತೆರಳುವ ಅಯ್ಯಪ್ಪ ಮಾಲಾಧಾರಿಗಳು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿದುಬಂದಿದೆ.
ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶ ಸನ್ನಿಹಿತವಾಗಿದ್ದು ಎರಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಪತ್ತನಂತಿಟ್ಟಂ ಮತ್ತು ಇಡುಕ್ಕಿಯ 2 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಆರೆಂಜ್ ಎಚ್ಚರಿಕೆ ನೀಡಲಾಗಿದೆ. ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಅಲ್ಲದೇ ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪ ಭಕ್ತರು ರಕ್ಷಣೆಗಾಗಿ ರೈನ್ ಕೋಟ್,ಇರುಮುಡಿ ಭದ್ರತೆಗಾಗಿ ಧರಿಸುವಂತೆ ಮುನ್ನೆಚ್ಚರಿಕೆ ವಹಿಸುವುದು ಒಳಿತು.ಅಲ್ಲದೇ ಪಂಪಾದಿಂದ ಸನ್ನಿಧಾನಕ್ಕೆ ಯಾತ್ರೆ ಮಾಡುವ ಭಕ್ತರು ಎಚ್ಚರಿಕೆ ವಹಸುವ ಅಗತ್ಯವಿದೆ.
ಅದಲ್ಲದೇ ಐದು ವರ್ಷಗಳ ಬಳಿಕೆ ಪಂಪಾದಲ್ಲಿ ಸಣ್ಣ ವಾಹನಗಳ ಪಾರ್ಕಿಂಗ್ ಪುನರಾಂಭಗೊಂಡಿದ್ದು ಭಕ್ತರಿಗೆ ಅನುಕೂಲವಾಗಲಿದೆ.