ವಿಧಾನಪರಿಷತ್ ಪದವೀಧರ ಕ್ಷೇತ್ರ ಚುನಾವಣೆ ಘೋಷಣೆಯಾಗಿದ್ದು ಎರಡು ಪಕ್ಷದಲ್ಲಿ ಬಂಡಾಯದ ಬಿಸಿ ತಾಗಿದೆ.
ಬಿಜೆಪಿ- ಜೆಡಿಎಸ್ ಮೈತ್ರಿ ಲಿಂಗಾಯತದ ಸಮುದಾಯ ಅಭ್ಯರ್ಥಿಯಾಗಿ ಧನಂಜಯ ಸರ್ಜಿ ಘೋಷಣೆಯಾದರೆ, ಕಳೆದ ಬಾರಿ ಬಿಜೆಪಿಯಿಂದ ಗೆದ್ದು ಬೀಗಿದ ಅಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈ ಅಭ್ಯರ್ಥಿ ಘೋಷಣೆಯ ನಂತರದ ಎರಡು ಪಕ್ಷದಲ್ಲಿ ಬಂಡಾಯ ಬೆಳವಣಿಗೆಯ ಮೂಲಕ ಎರಡು ಅಭ್ಯರ್ಥಿಗಳು ಸ್ಪರ್ಧಿಸಿದ ನಂತರ ರಾಜಕೀಯ ಪಡಸಾಲೆಯಲ್ಲಿ ಲೆಕ್ಕಾಚಾರಗಳು ಬದಲಾವಣೆಯಾಗಿದೆ.
ಅಯನೂರು ಅವರು ಈ ಹಿಂದೆ ಶಾಸಕರಾಗಿ ಮಾಡಿದ ಕೆಲಸ ಕೈ ಹಿಡಿಯಬಹುದೇ ಜೊತೆಗೆ ಬಿಜೆಪಿ ಮತ ಪಡೆಯಬಹುದೇ ಎಂಬ ಪ್ರಶ್ನೆ ಇರುವ ಮಧ್ಯೆ,ಕಾಂಗ್ರೆಸ್ ಗೆ ಬಂಡಾಯವಾಗಿ ಸಿ ಎಸ್ ದಿನೇಶ್, ಬಿಜೆಪಿಗೆ ಬಂಡಾಯವಾಗಿ ಮಾಜಿ ಶಾಸಕ ಅಭಿವೃದ್ಧಿ ಮೂಲಕ ಉಡುಪಿಯಲ್ಲಿ ಹೆಸರುವಾಸಿಯಾದ ರಘಪತಿ ಭಟ್ ಸ್ಪರ್ಧಿಸಿದ್ದರೆ.
ರಘಪತಿ ಭಟ್ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಕೈ ತಪ್ಪಿದರು ಪಕ್ಷಕ್ಕೆ ದುಡಿದು ಯಶ್ ಪಾಲ್ ಸುವರ್ಣ ಗೆಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಟಿಕೆಟ್ ಕೈ ತಪ್ಪಿದ ನಂತರ ಭಾವುಕಾರದ ರಘಪತಿ ನಾನು ಸತ್ತಾಗ ಬಿಜೆಪಿ ಧ್ವಜ ನನ್ನ ದೇಹದ ಮೇಲಿರಬೇಕು ಎಂಬ ಅತೀ ಸಂದೇಶ ನೀಡುವ ಮೂಲಕ ಪಕ್ಷವನ್ನು ಹಚ್ಚಿಗೊಂಡಿದ್ದಾರೆ ಎಂಬುದನ್ನು ಕಾಣಬಹುದು.ನಂತರದ ಬೆಳವಣಿಗೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ಅತೀ ಹೆಚ್ಚು ಮತ ಸೇರ್ಪಡೆಗೊಳಿಸುವ ಮೂಲಕ ಮತ್ತು ವರಿಷ್ಠರ ನಿರ್ದೇಶನದಂತೆ ಪದವೀಧರ ಕ್ಷೇತ್ರದ ಆಕಾಂಕ್ಷಿಯಾಗಿದ್ದರು ಮತ್ತೆ ಟಿಕೇಟ್ ಕೈ ತಪ್ಪಿದಾಗ ನೋವು ತೋಡಿಕೊಂಡ ಭಟ್ ಬಂಡಾಯ ಸ್ಪರ್ಧೆ ಮಾಡಿದ್ದಾರೆ.
ಇವುಗಳ ಮಧ್ಯೆ ಮತಯಾಚನೆಯಲ್ಲಿ ತೊಡಗಿರುವ ರಘಪತಿ ಭಟ್ ಅವರಿಗೆ ಶಾಸಕ,ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ 24 ಗಂಟೆ ಒಳಗೆ ನಿವೃತ್ತಿ ಘೋಷಣೆ ಮಾಡಬೇಕು ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಂದೇಶ ರವಾನಿಸಿದ್ದಾರೆ.ಆದರೆ ಇವುಗಳ ಮಧ್ಯೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿರಿಯ ಬಿಜೆಪಿ ನಾಯಕ,ಯಡಿಯೂರಪ್ಪ ಬಿಜೆಪಿ ಕಟ್ಟಿದ ಸಂಧರ್ಭದಲ್ಲಿ ಜೊತೆಯಾಗಿದ್ದ ಕೆ ಎಸ್ ಈಶ್ವರಪ್ಪ ಬಂಡಾಯ ಅಭ್ಯರ್ಥಿ ರಘಪತಿ ಭಟ್ ಗೆ ಬೆಂಬಲ ಸೂಚಿಸಿದ್ದಾರೆ.
ಶಿವಮೊಗ್ಗ ಭಾಗದ ಲಿಂಗಾಯತ ಅಭ್ಯರ್ಥಿ ಧನಂಜಯ ಸರ್ಜಿ ಘೋಷಣೆಯಾಗಿದ್ದರು ಸಹ ಕರಾವಳಿ ಅಂದರೆ ದಕ್ಷಿಣ ಕನ್ನಡ ಉಡುಪಿ ಭಾಗದಲ್ಲಿ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ರಘಪತಿ ಭಟ್ ಸ್ಪರ್ಧೆ ಗೆಲುವಿನ ಲೆಕ್ಕಾಚಾರ ಬುಡಮೇಲು ಮಾಡಬಹುದಾಗಿದೆ.
ಕಾಂಗ್ರೇಸ್ ನ ಬಂಡಾಯ ಸಿ ಎಸ್ ದಿನೇಶ್ ಕರಾವಳಿಗೆ ದೂರದವರಾಗಿದ್ದರು ಪದವೀಧರ ಮತದಾರರನ್ನು ಅಂಚೆ ಮೂಲಕ ಎರಡೆರಡು ಬಾರಿ ಸಂಪರ್ಕಿಸಿದ್ದು ಗುಣಾತ್ಮಕವಾಗಿದೆ.
ಇಲ್ಲಿ ರಘಪತಿ ಭಟ್ ಗೆದ್ದು ಬಿಗುತ್ತಾರೋ ಅಥವಾ ಬಿಜೆಪಿ ಸೋಲಿಸುತ್ತಾರೋ,ದಿನೇಶ್ ಸ್ಪರ್ಧೆ ಅಯನೂರು ಅವರಿಗೆ ಕಂಟಕವಾಗುವುದೇ ಎಂಬುದನ್ನು ವಿದ್ಯಾವಂತ ಮತದಾರ ನಿರ್ಧಾರ ಮಾಡುವ ತನಕ ಕಾದು ನೋಡಬೇಕಾಗಿದೆ.