ಬಂಟ್ವಾಳ ಸಮೀಪದ ಕನ್ಯಾನದಲ್ಲಿ ಬೈಕ್ ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಅನ್ಯಕೋಮಿನ ಯುವಕರಿಂದ ಹಿಂದು ಯುವಕನ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ
ಕನ್ಯಾನ ಕಾರಿನಲ್ಲಿದ್ದ ಅನ್ಯಕೋಮಿನ ಯುವಕರಿಂದ ಅಮಾಯಕ ಬೈಕ್ ಸವಾರನಿಗೆ ಹಲ್ಲೆ, ಹಿಂಜಾವೇ ಪ್ರಮುಖರು ಆಸ್ಪತ್ರೆಗೆ ಭೇಟಿನೀಡಿದ್ದಾರೆ.
ವಿಟ್ಲ ತಾಲೂಕಿನ ಕನ್ಯಾನ ಸಮೀಪದ ಓಡಿಯೂರು ITI ಕಾಲೇಜು ಬಳಿ ಪ್ರಕಾಶ್ ಎಂಬವರು ತನ್ನ ಬೈಕ್ ನಲ್ಲಿ ಬರುತ್ತಿರುವ ಸಂಧರ್ಭದಲ್ಲಿ ಕೇರಳ ನೊಂದಾಣೆಯ ಕಾರಿನಲ್ಲಿ ಬರುತ್ತಿದ್ದ ನಾಲ್ವರು ಅನ್ಯಕೋಮಿನ ಯುವಕರು ವಾಹನವನ್ನು ಹಿಂದಕ್ಕೆ ಮುಂದಾಕ್ಕೆ ಓವರ್ ಟೇಕ್ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿಯೇ ಅಡ್ಡ ಇಟ್ಟು ಪ್ರಕಾಶ್ (47) ಎಂಬವರಿಗೆ ಥಳಿಸಿ ಜಾತಿ ನಿಂದನೆಗೈದು ಬೆದರಿಕೆ ಹಾಕಿದ್ದು ಗಾಯಗೊಂಡ ಪ್ರಕಾಶ್ ಮಹಾವೀರ ಆಸ್ಪತ್ರೆ ಪುತ್ತೂರು ಇಲ್ಲಿ ದಾಖಾಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಹಿಂದು ಜಾಗರಣ ವೇದಿಕೆ ಪ್ರಮುಖರು ಭೇಟಿ ನೀಡಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಬೇಕಾಗಿ ಪೋಲಿಸ್ ಇಲಾಖೆಯ ಜೊತೆ ಮಾತುಕತೆ ನಡೆಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ಹಲ್ಲೆ ಮತ್ತು ಜಾತಿನಿಂದನೆ ಪ್ರಕರಣ ದಾಖಾಲಾಗಿದೆ ಎಂದು ತಿಳಿದು ಬಂದಿದೆ.