ಮುಡಿಪು: ಪ್ರಚೋದನಕಾರಿ ಶಕ್ತಿಯಲ್ಲಿರುವ ಯಾವುದೇ ಧರ್ಮ, ಜಾತಿ, ಭಾಷೆಯವರಿಗೆ ನಮ್ಮ ಸಹಕಾರವಿಲ್ಲ. ಶಾಂತಿ ಸುವ್ಯವಸ್ಥೆ ಸಾಮರಸ್ಯದಿಂದ ಬದುಕೋಣ. ಕೋಮುದ್ವೇಷದ ವಿಚಾರದಲ್ಲಿ ರಾಜಕೀಯ ಸಲ್ಲದು – ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ನಿನ್ನೆ ನರೇಂದ್ರ ಮೋದಿ ಪ್ರಮಾಣ ವಚನ ಸಂಧರ್ಭದಲ್ಲಿ ವಿಜಯೋತ್ಸವ ಆಚರಿಸಿ ಹಿಂತಿರುಗುವ ವೇಳೆ ಬೊಳಿಯಾರ್ ಬಳಿ ಇಬ್ಬರು ಹಿಂದು ಯುವಕರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ.
ಯಾವುದೇ ವಿಚಾರದಲ್ಲಿ ಕಾನೂನು ಕೈಗೆತ್ತೊಕೊಳ್ಳುವ ಹಕ್ಕು ಯಾರಿಗು ಇಲ್ಲ, ಇದರಲ್ಲಿ ಯಾವುದೇ ರಾಜಕೀಯ ನಡೆಸಬಾರದು. ಒಂದೊಮ್ಮೆ ನಾವುಗಳು ಸಹಕಾರ ನೀಡಿದರೆ ಸಾರ್ವಜನಿಕವಾಗಿ ತೊಂದರೆಯಾಗುತ್ತದೆ. ಬೊಳಿಯಾರ್ ಘಟನೆ ಯಾಕೆ ಮತ್ತು ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ತನಿಖೆಯಲ್ಲಿ ತಿಳಿಯುತ್ತದೆ ಅಲ್ಲಿಯ ತನಕ ಯಾರು ಸಂಯಮ ಕಳೆದುಕೊಳ್ಳಬಾರದು. ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಅದು ಯಾರೇ ಆಗಿರಲಿ ಶಿಕ್ಷೆ ನೀಡಿಯೇ ನೀಡುತ್ತೇವೆ ಎಂದ ಅವರು ಇಂತಹ ಸಂದರ್ಭದಲ್ಲಿ ರಾಜಕಾರಣಿಗಳು ಅಥವಾ ರಾಜಕೀಯ ಹಸ್ತಕ್ಷೇಪ ಮಾಡದೇ ತನಿಖೆಗೆ ಸಹಕರಿಸಬೇಕು, ಕಾನೂನಿಗೆ ಎಲ್ಲರೂ ಸಮಾನರು, ಸಮಾಜಘಾತುಕರನ್ನು ಮಟ್ಟ ಹಾಕಲು ಸರಕಾರ ಬದ್ದವಿದೆ ಎಂದರು.
ಈ ಪ್ರಕರಣದಲ್ಲಿ ಮೂರು ಜನರನ್ನು ಬಂಧಿಸಲಾಗಿದೆ ಯಾವ ಉದ್ದೇಶಕ್ಕೆ ನಡೆಸಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಈ ಸರಕಾರ ಬದ್ದವಿದೆ. ಗೃಹ ಸಚಿವರ ಚಿಂತನೆಯಿದೆ ಆ್ಯಂಟಿ ಕಾಮ್ಯುನಲ್ ವಿಂಗ್ ಅಸ್ತಿತ್ವಕ್ಕೆ ಬರುವ ಯೋಚನೆ ಇದೆ ಮುಂದಿನ ದಿನಗಳಲ್ಲಿ ಕಾರ್ಯರೂಪಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು ಈ ಸಂಧರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ , ಹರೀಶ್ ಕುಮಾರ್ ಜತೆಗಿದ್ದರು.