• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ನೋವಿನಿಂದ ಬರುವವರಿಗೆ ಸಾಂತ್ವನ ನೀಡಿ ಆರೋಗ್ಯ ರಕ್ಷಾ ಸಮಿತಿ ಪ್ರಥಮ ಸಭೆಯಲ್ಲಿ ವೈದ್ಯರುಗಳಿಗೆ ಸೂಚನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ

ನೋವಿನಿಂದ ಬರುವವರಿಗೆ ಸಾಂತ್ವನ ನೀಡಿ ಆರೋಗ್ಯ ರಕ್ಷಾ ಸಮಿತಿ ಪ್ರಥಮ ಸಭೆಯಲ್ಲಿ ವೈದ್ಯರುಗಳಿಗೆ ಸೂಚನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ

June 19, 2024
ಬೆಂಗಳೂರು : ಆಪರೇಷನ್ ಸಿಂಧೂರ್ ಯಶಸ್ವಿ ಮುಜರಾಯಿ ‌ಇಲಾಖೆಯ ದೇವಾಲಯದಲ್ಲಿ ‌ವಿಶೇಷ ಪ್ರಾರ್ಥನೆ ಸಲ್ಲಿಸಿಲು ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಆದೇಶ

ಬೆಂಗಳೂರು : ಆಪರೇಷನ್ ಸಿಂಧೂರ್ ಯಶಸ್ವಿ ಮುಜರಾಯಿ ‌ಇಲಾಖೆಯ ದೇವಾಲಯದಲ್ಲಿ ‌ವಿಶೇಷ ಪ್ರಾರ್ಥನೆ ಸಲ್ಲಿಸಿಲು ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಆದೇಶ

May 7, 2025
ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪಾಕ್‌ ಪ್ರಧಾನಿ

ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪಾಕ್‌ ಪ್ರಧಾನಿ

May 7, 2025
ಬಂಟ್ವಾಳ: ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಮಾಜಿ ಸಂಸದ ನಳೀನ್ ಕುಮಾರ್ ಬೇಟಿ  ವೈಯಕ್ತಿಕ ನೆಲೆಯಲ್ಲಿ ಒಂದು‌ ಲಕ್ಷ ಆರ್ಥಿಕ ಸಹಾಯ

ಬಂಟ್ವಾಳ: ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಮಾಜಿ ಸಂಸದ ನಳೀನ್ ಕುಮಾರ್ ಬೇಟಿ ವೈಯಕ್ತಿಕ ನೆಲೆಯಲ್ಲಿ ಒಂದು‌ ಲಕ್ಷ ಆರ್ಥಿಕ ಸಹಾಯ

May 7, 2025
ಜನಸಾಮಾನ್ಯರನ್ನೂ ಯುದ್ಧಕ್ಕೆ ಭಾರತ ಸರ್ಕಾರ ಅಣಿಗೊಳಿಸಲು : ಇಂದು ದೇಶಾದ್ಯಂತ ಮಾಕ್ ಡ್ರಿಲ್

ಜನಸಾಮಾನ್ಯರನ್ನೂ ಯುದ್ಧಕ್ಕೆ ಭಾರತ ಸರ್ಕಾರ ಅಣಿಗೊಳಿಸಲು : ಇಂದು ದೇಶಾದ್ಯಂತ ಮಾಕ್ ಡ್ರಿಲ್

May 7, 2025
ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ

ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ

May 7, 2025
ನೀರ ಸೆಲೆಗಳ ರಕ್ಷಿಸೋಣ ಮಣ್ಣು ನಮ್ಮ‌ಆತ್ಮ ಮಣ್ಣಿನ ಕುರಿತಾದ ಜಾಗೃತಿ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯಿಂದ : ಡಾ. ರಾಜೇಶ್ ಬೆಜ್ಜಂಗಳ

ನೀರ ಸೆಲೆಗಳ ರಕ್ಷಿಸೋಣ ಮಣ್ಣು ನಮ್ಮ‌ಆತ್ಮ ಮಣ್ಣಿನ ಕುರಿತಾದ ಜಾಗೃತಿ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯಿಂದ : ಡಾ. ರಾಜೇಶ್ ಬೆಜ್ಜಂಗಳ

May 6, 2025
ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ರಾಜಾರಾಮ ಭಟ್ ನಿಧನ!

ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ರಾಜಾರಾಮ ಭಟ್ ನಿಧನ!

May 6, 2025
ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬ ಪಾತ್ರವಿಲ್ಲ ಎಂದ ಖಾದರ್ ರಾಜೀನಾಮೆ ನೀಡಬೇಕು   ವಕ್ಫ್ ಪ್ರತಿಭಟನೆಯ ಸಂದರ್ಭವೇ ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಬಗ್ಗೆ ಎಚ್ಚರಿಸಿದ್ದೇವು : ಅರುಣ್ ಕುಮಾರ್ ಪುತ್ತಿಲ

ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬ ಪಾತ್ರವಿಲ್ಲ ಎಂದ ಖಾದರ್ ರಾಜೀನಾಮೆ ನೀಡಬೇಕು ವಕ್ಫ್ ಪ್ರತಿಭಟನೆಯ ಸಂದರ್ಭವೇ ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಬಗ್ಗೆ ಎಚ್ಚರಿಸಿದ್ದೇವು : ಅರುಣ್ ಕುಮಾರ್ ಪುತ್ತಿಲ

May 4, 2025
ಮಂಗಳೂರು: ರೌಡಿ ಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ. ಪ್ರಕರಣದ ಎಂಟು ಮಂದಿ ಬಂಧನ

ಮಂಗಳೂರು: ರೌಡಿ ಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ. ಪ್ರಕರಣದ ಎಂಟು ಮಂದಿ ಬಂಧನ

May 3, 2025
ಬಿಜೆಪಿ ಪಕ್ಷದ ಪರವಾಗಿ ಸುಹಾಸ್ ಶೆಟ್ಟಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ: ಬಿವೈ ವಿಜಯೇಂದ್ರ

ಬಿಜೆಪಿ ಪಕ್ಷದ ಪರವಾಗಿ ಸುಹಾಸ್ ಶೆಟ್ಟಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ: ಬಿವೈ ವಿಜಯೇಂದ್ರ

May 2, 2025
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪೂರ್ವಯೋಜಿತ ಷಡ್ಯಂತ್ರ ಸುಮ್ಮನೆ ಬಿಡುವ ಮಾನಸಿಕತೆ ಯಾರಲ್ಲೂ ಇಲ್ಲ: ಸಿಟಿ ರವಿ ಎಚ್ಚರಿಕೆ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪೂರ್ವಯೋಜಿತ ಷಡ್ಯಂತ್ರ ಸುಮ್ಮನೆ ಬಿಡುವ ಮಾನಸಿಕತೆ ಯಾರಲ್ಲೂ ಇಲ್ಲ: ಸಿಟಿ ರವಿ ಎಚ್ಚರಿಕೆ

May 2, 2025
ಜನನಿಬಿಡ ರಸ್ತೆಯಲ್ಲಿ ಅಮಾನವೀಯವಾಗಿ ಮತ್ತು ಭೀಕರವಾಗಿ ಹತ್ಯೆ ಮಾಡಲಾಗಿದೆ ; ಶೋಭಾ ಕರಂದ್ಲಾಜೆ

ಜನನಿಬಿಡ ರಸ್ತೆಯಲ್ಲಿ ಅಮಾನವೀಯವಾಗಿ ಮತ್ತು ಭೀಕರವಾಗಿ ಹತ್ಯೆ ಮಾಡಲಾಗಿದೆ ; ಶೋಭಾ ಕರಂದ್ಲಾಜೆ

May 2, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, May 8, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬಂಟ್ವಾಳ: ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಮಾಜಿ ಸಂಸದ ನಳೀನ್ ಕುಮಾರ್ ಬೇಟಿ  ವೈಯಕ್ತಿಕ ನೆಲೆಯಲ್ಲಿ ಒಂದು‌ ಲಕ್ಷ ಆರ್ಥಿಕ ಸಹಾಯ

    ಬಂಟ್ವಾಳ: ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಮಾಜಿ ಸಂಸದ ನಳೀನ್ ಕುಮಾರ್ ಬೇಟಿ ವೈಯಕ್ತಿಕ ನೆಲೆಯಲ್ಲಿ ಒಂದು‌ ಲಕ್ಷ ಆರ್ಥಿಕ ಸಹಾಯ

    ನೀರ ಸೆಲೆಗಳ ರಕ್ಷಿಸೋಣ ಮಣ್ಣು ನಮ್ಮ‌ಆತ್ಮ ಮಣ್ಣಿನ ಕುರಿತಾದ ಜಾಗೃತಿ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯಿಂದ : ಡಾ. ರಾಜೇಶ್ ಬೆಜ್ಜಂಗಳ

    ನೀರ ಸೆಲೆಗಳ ರಕ್ಷಿಸೋಣ ಮಣ್ಣು ನಮ್ಮ‌ಆತ್ಮ ಮಣ್ಣಿನ ಕುರಿತಾದ ಜಾಗೃತಿ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯಿಂದ : ಡಾ. ರಾಜೇಶ್ ಬೆಜ್ಜಂಗಳ

    ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬ ಪಾತ್ರವಿಲ್ಲ ಎಂದ ಖಾದರ್ ರಾಜೀನಾಮೆ ನೀಡಬೇಕು   ವಕ್ಫ್ ಪ್ರತಿಭಟನೆಯ ಸಂದರ್ಭವೇ ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಬಗ್ಗೆ ಎಚ್ಚರಿಸಿದ್ದೇವು : ಅರುಣ್ ಕುಮಾರ್ ಪುತ್ತಿಲ

    ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬ ಪಾತ್ರವಿಲ್ಲ ಎಂದ ಖಾದರ್ ರಾಜೀನಾಮೆ ನೀಡಬೇಕು ವಕ್ಫ್ ಪ್ರತಿಭಟನೆಯ ಸಂದರ್ಭವೇ ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಬಗ್ಗೆ ಎಚ್ಚರಿಸಿದ್ದೇವು : ಅರುಣ್ ಕುಮಾರ್ ಪುತ್ತಿಲ

    ಆಧುನಿಕ ಸಮಾಜದಲ್ಲಿ ಹಿಂದೂ ಧರ್ಮದ ಮೇಲೆ ನಿರಂತರ ಹಲ್ಲೆ : ಮಕ್ಕಳಿಗೆ ಹಿಂದೂ ಧರ್ಮಶಿಕ್ಷಣ ಒದಗಿಸುವ ನೆಲೆಯಲ್ಲಿ ಗುರುಗಳು ಅಪ್ಪಣೆಕೊಡಿಸಿದ್ದಾರೆ

    ಆಧುನಿಕ ಸಮಾಜದಲ್ಲಿ ಹಿಂದೂ ಧರ್ಮದ ಮೇಲೆ ನಿರಂತರ ಹಲ್ಲೆ : ಮಕ್ಕಳಿಗೆ ಹಿಂದೂ ಧರ್ಮಶಿಕ್ಷಣ ಒದಗಿಸುವ ನೆಲೆಯಲ್ಲಿ ಗುರುಗಳು ಅಪ್ಪಣೆಕೊಡಿಸಿದ್ದಾರೆ

    ಇಂದು(ಏ.29) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವ.

    ಇಂದು(ಏ.29) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವ.

    ಸರ್ಕಾರಿ ಆಸ್ಪತ್ರೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಕಾನೂನಿನ ಪ್ರಕ್ರಿಯೆ ನಡೆಸಲು ಸೂಚಿಸಿದ್ದೇನೆ.  ಶಾಸಕ ಅಶೋಕ್‌ ರೈ

    ಸರ್ಕಾರಿ ಆಸ್ಪತ್ರೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಕಾನೂನಿನ ಪ್ರಕ್ರಿಯೆ ನಡೆಸಲು ಸೂಚಿಸಿದ್ದೇನೆ. ಶಾಸಕ ಅಶೋಕ್‌ ರೈ

    ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾಜ್ಯೋತಿಯವರ ಮೇಲೆ ಹಲ್ಲೆಗೆ ಯತ್ನ- ಆರೋಪಿಯನ್ನು ಬಂಧಿಸದೆ ಬಿಟ್ಟಿರುವ ಆರೋಪ-ಪೊಲೀಸರ ವಿರುದ್ಧ ಆಕ್ರೋಶ

    ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾಜ್ಯೋತಿಯವರ ಮೇಲೆ ಹಲ್ಲೆಗೆ ಯತ್ನ- ಆರೋಪಿಯನ್ನು ಬಂಧಿಸದೆ ಬಿಟ್ಟಿರುವ ಆರೋಪ-ಪೊಲೀಸರ ವಿರುದ್ಧ ಆಕ್ರೋಶ

    ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ನಿಂದ ಯುವತಿಗೆ ಲೈಂಗಿಕ ಕಿರುಕುಳ : ಆರೋಪಿ ಪೊಲೀಸ್ ವಶಕ್ಕೆ!.

    ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ನಿಂದ ಯುವತಿಗೆ ಲೈಂಗಿಕ ಕಿರುಕುಳ : ಆರೋಪಿ ಪೊಲೀಸ್ ವಶಕ್ಕೆ!.

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮರಥೋತ್ಸವ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮರಥೋತ್ಸವ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ನೋವಿನಿಂದ ಬರುವವರಿಗೆ ಸಾಂತ್ವನ ನೀಡಿ ಆರೋಗ್ಯ ರಕ್ಷಾ ಸಮಿತಿ ಪ್ರಥಮ ಸಭೆಯಲ್ಲಿ ವೈದ್ಯರುಗಳಿಗೆ ಸೂಚನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ

by ಪ್ರಜಾಧ್ವನಿ ನ್ಯೂಸ್
June 19, 2024
in ಪುತ್ತೂರು
0
ನೋವಿನಿಂದ ಬರುವವರಿಗೆ ಸಾಂತ್ವನ ನೀಡಿ ಆರೋಗ್ಯ ರಕ್ಷಾ ಸಮಿತಿ ಪ್ರಥಮ ಸಭೆಯಲ್ಲಿ ವೈದ್ಯರುಗಳಿಗೆ ಸೂಚನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ
19
SHARES
53
VIEWS
ShareShareShare

ಪುತ್ತೂರು: ಜನರು ನೊಂದು ನೋವಿನಲ್ಲಿ ಬರುವ ಜಾಗ ಅಂತ ಇದ್ರೆ ಅದು ಆಸ್ಪತ್ರೆ ಮತ್ತು ಪೊಲೀಸ್ ಸ್ಟೇಷನ್. ಆದರೆ ಪೊಲೀಸ್ ಠಾಣೆಗೆ ಹೆದರಿ ಹೋಗುವವರಿದ್ದಾರೆ. ಆಸ್ಪತ್ರೆಗೆ ನೋವು ತೆಗೆದು ಕೊಂಡು ಬರುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಸ್ಪಂಧನೆ ಸಿಗಬೇಕು. ಆಸ್ಪತ್ರೆಯ ಸಮಸ್ಯೆಯೂ ನನಗೆ ಗೊತ್ತಿದೆ. ಆದರೂ ನೊಂದು ಬಂದವರಿಗೆ ಮೊದಲ ಸ್ಪಂಧನೆ ನೀಡಿ ಶಾಸಕ ಅಶೋಕ್ ಕುಮಾರ್ ರೈ ಅವರು ಆಸ್ಪತ್ರೆಯ ವೈದ್ಯರುಗಳಿಗೆ ತಿಳಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಜೂ.18 ರಂದು ಸಂಜೆ ನಡೆದ ನೂತನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅಸ್ಪತ್ರೆಯ ಕಂದುಕೊರತೆಯ ಸಭೆ ನಡೆಸಿ ಮಾತನಾಡಿದರು. ಆಸ್ಪತ್ರೆಯ ವೈದ್ಯರನ್ನು ದೂರುವುದಿಲ್ಲ. ಅವರು ನಾಲ್ಕು ಜನ ವೈದ್ಯರ ಕೊರತೆ ಇದ್ದರೂ ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೂ ಕೆಲವೊಂದು ಪರಿಸ್ಥಿಯಲ್ಲಿ ಜನರಿಗೆ ಅರ್ಥ ಆಗದೆ ನಿಮ್ಮ ಮೇಲೆಯೇ ಕೋಪಗೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಅವರೊಂದಿಗೆ ಉತ್ತಮ ಸ್ಪಂಧನೆ ಕೊಡಿ. ಸಮಾಜದಲ್ಲಿ ಅರ್ಧ ವೈದ್ಯರ ಸಮಾಧಾನ ಮತ್ತು ಅರ್ಧ ವೈದ್ಯರು ನೀಡುವ ಔಷಧಿಯಿಂದ ರೋಗಿಯ ಖಾಯಿಲೆ ಗುಣಮುಖವಾಗುತ್ತದೆ. ಇದನ್ನು ಅರಿತು ನೀವು ಕೆಲಸ ಮಾಡಿ ಎಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿರುವುದು ಉತ್ತಮ ವಿಚಾರ. ಇದು ಗುಡ್ ಜಾಬ್ ಎಂದರು.

ಪುತ್ತೂರು ಸರಕಾರಿ ಆಸ್ಪತ್ರೆಗೆ ಒಟ್ಟು ರೂ. 2 ಕೋಟಿ ಅನುದಾನ:
ಪುತ್ತೂರು ಸರಕಾರಿ ಆಸ್ಪತ್ರೆಗೆ ಒಟ್ಟು ರೂ. 2 ಕೋಟಿ ಅನುದಾನ ಬಂದಿದೆ. ಅನುದಾನ ಬೇರೆ ಬೇರೆ ರೀತಿಯಲ್ಲಿ ಬಂದಿರಬಹುದು. ಆದರೆ ನಮಗೆ ಅದು ಒಟ್ಟಾಗಿ ಕಾಣುತ್ತದೆ. ಈಗಾಗಲೇ ರೂ. 1.40 ಕೋಟಿ ಆಸ್ಪತ್ರೆಯ ಕಾಮಗಾರಿಗಳಿಗೆ ಬಂದಿದೆ. ಅದರಲ್ಲಿ ಆಸ್ಪತ್ರೆಯ ಎಲ್ಲಾ ದುರಸ್ಥಿ ಕಾರ್ಯಗಳು ನಡೆಯಬೇಕಾಗಿದೆ. ರೂ. 50 ಲಕ್ಷ ಲ್ಯಾಬ್ಗೆ ಬಂದಿದೆ. ಇದರಲ್ಲಿ ಲ್ಯಾಬ್ ಪರಿಪೂರ್ಣ ಆಗಬೇಕು. ಸ್ಕ್ಯಾನಿಂಗ್ ಮೆಷಿನ್ ಖರೀದಿಸಲು ರೂ. 27 ಲಕ್ಷ ಇದೆ. ರೆಡಿಯೋಲಿಜಿಸ್ಟ್ ರಾಧಿಕಾ ಅವರು ಕಂಪೆನಿಯಿಂದ ಈ ಕುರಿತು ಮಾಹಿತಿ ಪಡೆದುಕೊಳ್ಳಿ ಎಂದು ಶಾಸಕರು ಹೇಳಿದರಲ್ಲೆ ಆಸ್ಪತ್ರೆಯ ಬೇಡಿಕೆಯಂತೆ ತುರ್ತು ೫೦ ಬೆಡ್ ಹೆಚ್ಚುವರಿ ಮಾಡಲು ಪ್ರಸ್ತಾವನೆ ಕಳುಹಿಸಲು ತಿಳಿಸಿದರು.

ಪುತ್ತೂರಿಗೆ ಆಯುಷ್ ಆಸ್ಪತ್ರೆಗೆ ರೂ. 15 ಕೋಟಿ:
ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಗಾಗಿ ಈಗಾಗಲೇ ಎರಡು ಕಡೆ ಜಾಗ ನೋಡಿ ಅಗಿದೆ. ನಾಳೆಯೇ ಅದರ ಮುಖ್ಯ ಅಧಿಕಾರಿ ಬರುತ್ತಾರೆ. ಅದಕ್ಕೆ ಪ್ರಸ್ತಾವನೆ ತಕ್ಷಣ ಸಲ್ಲಿಸುವಕೆಲಸ ಆಗಬೇಕು. ರೂ. 15 ಕೋಟಿ ಅದಕ್ಕೆ ಮಂಜೂರು ಆಗುತ್ತದೆ. ಇದರಲ್ಲಿ 50 ಬೆಡ್ನ ಆಸ್ಪತ್ರೆಯೂ ಬರುತ್ತದೆ. ಮ್ಯಾನ್ ಪವರ್ ಬರುತ್ತದೆ ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.

ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ:
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮಾತನಾಡಿ ಅಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಯಲ್ಲಿ ತೊಂದರೆ ಆದಾಗ ಸಾರ್ವಜನಿಕರಿಗೆ ಸೌಮ್ಯದಿಂದ ಉತ್ತರ ಕೊಡಬೇಕಾಗುತ್ತದೆ. ಎನಾದರೂ ಸಮಸ್ಯೆ ಬಂದಾಗ ಗಮನಕ್ಕೆ ತನ್ನಿ. ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

Friends Beke

ಜಾಹೀರಾತು

ತುರ್ತು ಸಂದರ್ಭವೂ ಲ್ಯಾಬ್ ಚಾಲಿತ:
ಆಸ್ಪತ್ರೆಯ ಲ್ಯಾಬ್ ಸಂಜೆ ಗಂಟೆ 4.30 ಕ್ಕೆ ಬಂದ್ ಆಗುತ್ತದೆ. ರಾತ್ರಿ ಬಂದ ರೋಗಿಗಳಿಗೆ ಲ್ಯಾಬ್ ಸೌಲಭ್ಯ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಉತ್ತರಿಸಿದ ಆಸ್ಪತ್ರೆಯ ವೈದ್ಯಾಧಿಕಾರಿ ಲ್ಯಾಬ್ನಲ್ಲಿ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಲ್ಯಾಬ್ ಟೆಕ್ನೀಷಿಯನ್ ಕೊರತೆ ಇದೆ. ಹಾಗಾಗಿ ಸಂಜೆ ತುರ್ತು ಸಂದರ್ಭ ಅವರು ಬಂದು ಸಹಕಾರ ನೀಡುತ್ತಿದ್ದಾರೆ ಎಂದರು.

ಶವಗಾರ ಕೊಠಡಿ ಬಳಿ ದಾರಿ ದೀಪ:
ಶವಗಾರಕ್ಕೆ ಹೋಗುವ ದಾರಿಯಲ್ಲಿ ದಾರಿ ದೀಪದ ಸಮಸ್ಯೆ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಶಾಸಕರ ಗಮನಕ್ಕೆ ತಂದರು. ತಕ್ಷಣ ಶಾಸಕರು ಪೌರಾಯುಕ್ತರಿಗೆ ಸೂಚನೆ ನೀಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ನಾಳೆಯೇ ದಾರಿ ದೀಪ ಅಳವಡಿಸಿ ಕೊಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಒಬ್ಬರೆ ಇದ್ದು ಅವರಿಗೆ ತುಂಬಾ ಒತ್ತಡವಿದೆ ಎಂದು ಶಾಸಕರ ಗಮನಕ್ಕೆ ತರಲಾಯಿತು.

ಅನುಮತಿ ಪಡೆದು ಪ್ರವೇಶ:
ಆಸ್ಪತ್ರೆಗೆ ಅನೇಕ ಮಂದಿ ಹೊರಗಿನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯ ಸಹಿತ ಮಾತನಾಡಿಸಲು ಬರುತ್ತಾರೆ. ಆದರೆ ಅವರು ಗುಂಪು ಗುಂಪಾಗಿ ಬರುವಾಗ ರೋಗಿಳಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಿಂದ ಅನುಮತಿ ಪಡೆದು ಒಳಪ್ರವೇಶಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ನಾಮಫಲಕ ಅಳವಡಿಸುವ ಕಾರ್ಯಕ್ಕೂ ಅನುಮೋದನೆ ನೀಡಲಾಯಿತು.

ಗಲಾಟೆ ಮಾಡಿದರೆ ಪೊಲೀಸರಿಗೆ ದೂರು ನೀಡಿ:
ಆಸ್ಪತ್ರೆಗೆ ಬಂದು ವೈದ್ಯರ ಸಿಬ್ಬಂದಿಗಳ ಮತ್ತು ಇತರ ವಿಚಾರದಲ್ಲಿ ಸುಮ್ಮನೆ ಗಲಾಟೆ ಮಾಡಿದರೆ ಹಿಂದು ಮುಂದೆ ನೋಡದೆ ಪೊಲೀಸರಿಗೆ ದೂರು ನೀಡಿ. ಪೊಲೀಸರು ಕೂಡಾ ತಕ್ಷಣ ಆಸ್ಪತ್ರೆಯ ಸಮಸ್ಯೆ ವಿಚಾದಲ್ಲಿ ಸ್ಪಂಧನೆ ನೀಡಿ ಪರಿಹಾರ ಮಾಡಿ ಎಂದು ಇನ್ಸ್ಪಕ್ಟರ್ ಸತೀಶ್ ಜಿ.ಜೆ ಅವರಿಗೆ ಸೂಚಿಸಿದರು.

ಕನಿಷ್ಠ 50 ಬೆಡ್ ಆದರೂ ಬೇಕಾಗಿದೆ:
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾ ಜ್ಯೋತಿ ಅವರು ಆಸ್ಪತ್ರೆಯ ಕುಂದುಕೊರತೆಯ ಕುರಿತು ಮಾಹಿತಿ ನೀಡಿದರು. ತಾಲೂಕು ಮಟ್ಟದ ಆಸ್ಪತ್ರೆಯಾಗಿದ್ದು 15 ಮಂದಿ ವೈದ್ಯರು ಇಲ್ಲಿ ಬೇಕಿತ್ತು. ಆದರೆ ಈಗ 11 ಮಂದಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಾಲ್ಕು ಹುದ್ದೆ ಖಾಲಿ ಇದೆ. ಶಸ್ತ್ರಚಿಕಿತ್ಸೆ, ಕ್ಯಾಶುವಲಿಟಿ ವೈದ್ಯರು ಬೇಕಾಗಿದ್ದಾರೆ. ದಿನಕ್ಕೆ 600 ರಷ್ಟುಹೊರ ರೋಗಿಗಳು, 40 ರಿಂದ 70 ಒಳರೋಗಿಗಳು ಬರುತ್ತಾರೆ. ತಿಂಗಳಿಗೆ ಸುಮಾರು 80 ರಿಂದ ನೂರರಷ್ಟು ಹೆರಿಗೆ ಆಗುತ್ತಿದೆ. ನಮ್ಮಲ್ಲಿ ಒಳ್ಳೆಯ ಫಿಸಿಯೋಥೆರಪಿ ಇದೆ. ಅಲ್ಲಿಗೂ ಸುಮಾರು ದಿನಕ್ಕೆ 40 ಮಂದಿ ಬರುತ್ತಾರೆ. ಡಯಾಲಿಸಿಸ್ 13 ಮೆಷಿನ್ ವರ್ಕಿಂಗ್ ಇದೆ. ದಿನಕ್ಕೆ ೪೫ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಆಗುತ್ತಿದೆ. ವೈಟಿಂಗ್ ಲೀಸ್ಟ್ನಲ್ಲಿ ಯಾರು ಇಲ್ಲ. ಪ್ರತಿ 2 ನೇ ಮತ್ತು 4ನೇ ಶುಕ್ರವಾರ ವಿಕಲಚೇತನರ ಆರೋಗ್ಯ ತಪಾಸಣೆ, ಪ್ರತಿ ತಿಂಗಳ 2ನೇ ಮಂಗಳವಾರ ಮಾನಸಿಕ ರೋಗಿಗಳ ತಪಾಸಣೆ ನಡೆಯುತ್ತದೆ. ಆಸ್ಪತ್ರೆಯಲ್ಲಿ ಕ್ಯೂ ಕಡಿಮೆ ಮಾಡಲು ಟೋಕನ್ ವ್ಯವಸ್ಥೆ ಮಾಡಿದ್ದೇವೆ.

Padmashree 9980546864

ಜಾಹೀರಾತು

ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ ನಮಗೆ ಕನಿಷ್ಟ 50 ಬೆಡ್ ಆದರೂ ಹೆಚ್ಚುವರಿ ಬೇಕಾಗಿದೆ ಎಂದು ಹೇಳಿದರು. ಡಾ ಜಯದೀಪ್ ಅವರು 2023-24 ನೇ ವರ್ಷದ ಆದಾಯ ವೆಚ್ಚವನ್ನು ಸಭೆಗೆ ಮಂಡಿಸಿದರು. ಅಸ್ಪತ್ರೆಯ ಒಳರೋಗಿ ಹೊರ ರೋಗಿ, ಇತರ ಮೂಲದಿಂದ ಬರುವ ಹಣ ಕುರಿತು ಮಾಹಿತಿ ನೀಡಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮುಕೇಶ್ ಕೆಮ್ಮಿಂಜೆ ಅವರು ಮಾತನಾಡಿ ಜನನ ಪ್ರಮಾಣ ಪತ್ರ ತಿದ್ದುಪಡಿಯಲ್ಲಿ ತೊಂದರೆ ಆಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಅದನ್ನು ಸರಿ ಪಡಿಸುವ ಕುರಿತು ಶಾಸಕರು ಆಸ್ಪತ್ರೆಗೆ ಸೂಚಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ, ಅಸ್ಕರ್ ಆನಂದ್, ಸಿದ್ಸಿಕ್ ಸುಲ್ತಾನ್, ವಿಕ್ಟರ್ ಪಾಯಸ್, ಅನ್ವರ್ ಕಬಕ ವಿವಿಧ ಸಲಹೆ ನೀಡಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಐವಿ ತಾರಾನಾಥ ಕಾರ್ಯಕ್ರಮ ನಿರೂಪಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಆರೋಗ್ಯ ರಕ್ಷಾ ಸಮಿತಿ ಜಿಲ್ಲಾ ಸಮಿತಿ ಸದಸ್ಯ ದಾಮೋದರ್ ಮುರ, ಸರಕಾರಿ ಆಸ್ಪತ್ರೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ರಾಜೇಶ್, ಗುರುಪ್ರಸಾದ್, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರಕ್ಷಾ ಸಮಿತಿ ಸದಸ್ಯೆ ಅರುಣಾ ಡಿ ಗೈರಾಗಿದ್ದಾರು.

ಮೆಡಿಕಲ್ ಕಾಲೇಜಿಗೆ ಪ್ರಥಮ, ಆಸ್ಪತ್ರೆಗೆ ಅಪ್ಗ್ರೇಡ್ಗೆ ದ್ವೀತಿಯ ಆದ್ಯತೆ
ಪುತ್ತೂರು ಸರಕಾರಿ ಆಸ್ಪತ್ರೆಯನ್ನು 300 ಬೆಡ್ ನ ಮೇಲ್ದದರ್ಜೆಗೆ ಏರಿಸಲು ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ನಮಗೆ ಮೆಡಿಕಲ್ ಕಾಲೇಜು ಆದರೆ ಬೆಡ್ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮೇಲ್ದರ್ಜೆಗೆ ಏರಿಸಲು ಸ್ವಲ್ಪ ಗೊಂದಲವಿದೆ ಎಂದು ಶಾಸಕರು ಸೇಡಿಯಾಪು ಸಮೀಪ 40 ಎಕ್ರೆ ಜಾಗೆ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಮೀಸಲು ಇರಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ರೂ. 250 ಕೋಟಿ ಅನುದಾನ ಕೇಳಿದ್ದೇವೆ. ಮುಖ್ಯಮತ್ರಿಗಳಿಗೆ ಕಳೆದ ಬಜೆಟ್ನಲ್ಲಿ ಹೊಂದಾಣಿಕೆ ಮಾಡಲು ಆಗಿಲ್ಲ. ಈ ವರ್ಷದ ಬಜೆಟ್ನಲ್ಲಿ ಕೊಡುತ್ತೆವೆ ಎಂದು ಹೇಳಿದ್ದಾರೆ. ಹಾಗಾಗಿ 300 ಬೆಡ್ ಆಸ್ಪತ್ರೆಗೆ ಪ್ರಸ್ತಾವನೆ ಮಾಡುದಾ ಅಥವಾ ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಮಾಡುದೋ ಎಂಬುದು ಇಲ್ಲಿ ಮುಖ್ಯ. ನನ್ನ ಪ್ರಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಮೆಡಿಕಲ್ ಕಾಲೇಜು ಸಿಕ್ಕಿಲ್ಲ ಎಂದರೆ ಆಸ್ಪತ್ರೆಯನ್ನು ಮೇಲ್ದದರ್ಜೆಗೆ ಏರಿಸುವ 2ನೇ ಅಪ್ಷನ್ ಇಡೋಣ.

ಸಾಂತ್ವನ ಕೇಂದ್ರ ದುರಸ್ಥಿಗೆ ಶಾಸಕರ ಸೂಚನೆ
ಇದೇ ವೇಳೆ ಮಾತನಾಡಿದ ಶಾಸಕರು ಸಾಂತ್ವನ ಕೇಂದ್ರ ನಾದುರಸ್ಥಿಯಲ್ಲಿದೆ ಅದನ್ನು ಶೀಘ್ರವೇ ದುರಸ್ಥಿ ಮಾಡಬೇಕು. ಮಹಿಳಾ ಸಾಂತ್ವನ ಕೇಂದ್ರಕ್ಕೆ ಏನೆಲ್ಲಾ ವ್ಯವಸ್ಥೆಗಳು ಬೇಕೋ ಅದೆಲ್ಲವನ್ನೂ ಮಾಡಬೇಕು. ಆ ಕೇಂದ್ರದಲ್ಲಿ ಸಾಂತ್ವನ ನೀಡುವ ಮೂಲಕ ಯಾರಿಗಾದ್ರು ಒಬ್ಬರಿಗೆ ಒಳ್ಳೆಯದಾದರೂ ಅದು ನಮಗೆ ಅತ್ಯಂತ ಸಂತೋಷದ ವಿಚಾರವಾಗಿದೆ. ಇಲ್ಲಿ ಜನರಿಗೆ ಏನು ಬೇಕೋ ಅದೆಲ್ಲವನ್ನೂ ಅಗತ್ಯವಾಗಿ ವ್ಯವಸ್ಥೆ ಮಾಡಬೇಕು. ವ್ಯವಸ್ಥೆ ಇಲ್ಲದೆ ಬಡವರು ತೊಂದರೆಗೊಳಗಾಗಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಶಾಸಕರು ಸೂಚಿಸಿದರು. ನಗರಸಭಾ ಕಮಿಷನರ್ ರವರು ಸಾಂತ್ವನ ಕೆಂದ್ರ ದುರಸ್ತಿ ಮಾಡಿಸುವುದಾಗಿ ಸಭೆಗೆ ತಿಳಿಸಿದರು.

ಜಾಹೀರಾತು

SendShare8Share
Previous Post

ಅವಧಿ ಮೀರಿದ ಆಹಾರ ಪದಾರ್ಥ ಮಾರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ! ಸಿಎಂ ಎಚ್ಚರಿಕೆ

Next Post

ಉತ್ತರ ಪ್ರದೇಶದ ರಾಮ ಮಂದಿರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧ ಆತ್ಮಹತ್ಯೆ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..