ಪುತ್ತೂರು ತಾಲೂಕಿನ ಪಂಜಳ ಕುರಿಯ ಭಾಗದ ಕೊರುಂಗು ಎಂಬಲ್ಲಿ ರಸ್ತೆ ತೀರ ಹದಗೆಟ್ಟಿತು ಅಲ್ಲದೇ ಅಪಘಾತಗಳು ಸಂಭವಿಸಿತ್ತು. ಜೊತೆಗೆ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆಯೂ ಸರಿಯಾಗಿರಲಿಲ್ಲ ಇವುಗಳ ಬಗ್ಗೆ ಆಟೋ ಚಾಲಕ ಮಾಲಕರ ಸಂಘ ಕುರಿಯ ನೇತೃತ್ವದಲ್ಲಿ ಪುತ್ತೂರಿನ ಜನಪ್ರಿಯ ಶಾಸಕರಿಗೆ ಮನವಿ ನೀಡಲಾಯಿತು.
ಮನವಿ ನೀಡಿದ ತಕ್ಷಣ ಸ್ಪಂದಿಸಿದ ಶಾಸಕರು ತಾತ್ಕಾಲಿಕ ದುರಸ್ತಿ ಮಾಡುವಂತೆ ಸೂಚಿಸಿದ್ದು ಕೆಲಸ ಆರಂಭವಾಗಿದೆ.
ಮಳೆಗಾಲ ಮುಗಿದ ನಂತರ ಸಂಪೂರ್ಣ ರಸ್ತೆ ಅಭಿವೃದ್ಧಿಗೆ 5 ಲಕ್ಷ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಪ್ರಮುಖರು ತಿಳಿಸಿದ್ದಾರೆ.