ಮಂಗಳೂರು: ಬಹುಮಹಡಿ ಕಾಮಗಾರಿ ವೇಳೆ ಮಣ್ಣು ಕುಸಿತ
ಮಂಗಳೂರು ಬಲ್ಮಠ ಬಳಿಯ ಖಾಸಗಿ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದ ಘಟನೆ ವರದಿಯಾಗಿದೆ.
ಎರಡು ದಿನದಿಂದ ಸುರಿಯುತ್ತಿರುವ ವ್ಯಾಪಾಕ ಮಳೆಯಿಂದ ಮಣ್ಣು ಕುಸಿತವಾಗಿದೆ ಎಂದು ಶಂಕಿಸಲಾಗಿದೆ. ಮಣ್ಣು ಕುಸಿತದಲ್ಲಿ ಮಣ್ಣಿನಡಿಯಲ್ಲಿ ಕಾರ್ಮಿಕರು ಸಿಲುಕಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿದ್ದು. ಅಗ್ನಿಶಾಮಕ ಧಳ ಮಣ್ಣಿನಡಿಯಲ್ಲಿ ಸಿಲುಕಿರುವ ಕಾರ್ಮಿಕರಿಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.