ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 17 ವರ್ಷಗಳಿಂದ ನಾವು ರಾಜ್ಯದ ಎಲ್ಲಾ ಗ್ರಾಮಪಂಚಾಯತ್ ಗಳಲ್ಲಿ ವಿಶೇಷ ಚೇತನರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸರಕಾರವು ನಮ್ಮನ್ನು ಗೌರವಧನದ ಆಧಾರದಲ್ಲಿ ನೇಮಿಸಿದ್ದು, ಸರಕಾರಿ ನೌಕರರಿಗೆ ಇರುವ ಎಲ್ಲಾ ನಿಯಮಗಳು ನಮಗೂ ಅನ್ವಯಿಸುತ್ತಿದೆ.
ಆದರೆ ಕಳೆದ 17 ವರ್ಷಗಳಿಂದ ಗ್ರಾಮಪಂಚಾಯತ್ ಗಳಲ್ಲಿ ದುಡಿಯುವ ನಮಗೆ ಕೇವಲ 9 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ಕಾರಣಕ್ಕಾಗಿ ಸರಕಾರ ನಮಗೂ ಕನಿಷ್ಟ ವೇತನ ಜಾರಿಗೊಳಿಸಬೇಕು. ನಮ್ಮ ಹುದ್ಧೆಯನ್ನೂ ಖಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ಸಂಬಂಧ ಈಗಾಗಲೇ ಹಲವು ಮನವಿಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಸರಕಾರಗಳಿಗೆ ನೀಡಿದ್ದು,ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.