ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವರ್ಷಂಪ್ರತಿ ನಡೆಯುವ ಜಾತ್ರೋತ್ಸವ ಧ್ವಜಾರೋಹಣವು ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಮೊದಲ ದಿನದ ದೇವರ ಪೇಟೆ ಸವಾರಿಯು ಸಂಜೆ ಬಲಿ ಹೊರಟು ಉತ್ಸವ ಬೊಳುವಾರು ಶ್ರೀರಾಮ ಪೇಟೆ,ಕಾರ್ಜಾಲು,ರಕ್ತೇಶ್ವರಿ ದೇವಸ್ಥಾನ,ಕಲ್ಲೇಗ,ಕರ್ಮಲ ಭಾಗಕ್ಕೆ ತೆರಳಲಿದೆ.
ಕ್ಷೇತ್ರ ಅರ್ಚಕರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು,ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರುಗಳು,ಅರುಣ್ ಪುತ್ತಿಲ,ಮುರಳಿಕೃಷ್ಣ ಹಸಂತಡ್ಕ ಹಾಗೂ ಅಪಾರ ಭಕ್ತರು ಈ ಕ್ಷಣದಲ್ಲಿ ಸಾಕ್ಷಿಗಳಾದರು.