ಕರ್ನಾಟಕ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ದೇವಾಲಯಗಳಿಗೆ ವ್ಯವಸ್ಥಾಪಕನ ಸಮಿತಿ ನಿರ್ಮಾಣ ಸುತ್ತೋಲೆ ನೀಡಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜೊತೆಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪಕ್ಕಳ ಉಪಸ್ಥಿತಿಯಲ್ಲಿ ಮೊದಲ ಸಭೆಯನ್ನು ನಡೆಸಲಾಗಿದೆ.
ಪ್ರಮುಖವಾಗಿ ಸಭೆಯಲ್ಲಿ ಹಲವಾರು ಚರ್ಚೆಗಳು ನಡೆದಿದೆ.
ವ್ಯವಸ್ಥಾಪನ ಸಮಿತಿಯ ಅವಧಿ ಮುಕ್ತಾಯಗೊಂಡಿರುವ ವರ್ಗ ಬಿ ಮತ್ತು ಸಿ ಗೆ ಸೇರಿದ ದೇವಸ್ಥಾನಗಳಿಗೆ ಹೊಸದಾಗಿ ವ್ಯವಸ್ಥಾಪನ ಸಮಿತಿ ರಚಿಸುವ ಕುರಿತು ನಿರ್ಣಯ ಅಂಗೀಕಾರವಾಗಿದೆ. ದೇವಸ್ಥಾನಗಳ ಹೆಸರು ಬದಲಾವಣೆ ಅಥವಾ ತಿದ್ದುಪಡಿಯಿದ್ದರೆ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನಗಳಿಗೆ ಮಾಹಿತಿ ನೀಡಿ ಮಾಹಿತಿ ಪಡೆದುಕೊಂಡು ಬದಲಾವಣೆ ಅಥವಾ ತಿದ್ದುಪಡಿ ಮಾಡುವುದಾಗಿ ಘೋಷಣೆಯಾಗಿದೆ.
ಮುಖ್ಯವಾಗಿ ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರು ಹಾಗೂ ಜಲದುರ್ಗಾ ದೇವಸ್ಥಾನ ಪೆರುವಾಜೆ ವರ್ಗ ಎ ಗೆ ಸೇರಿಸಲಿರುವ ಕಾರಣ ಸಮಿತಿ ರಚನೆಯಿಂದ ಹೊರಗಿಡಲಾಗಿದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಮುಂದೆ ಎ ಗ್ರೇಡ್ ಮಾನ್ಯತೆ ನಂತರ ಸಮಿತಿ ರಚನೆಯಾಗಲಿದೆ.
ಜಿಲ್ಲೆಯಲ್ಲಿ ಒಟ್ಟು 188 ದೇವಾಲಯಗಳ ಸಮಿತಿ ರಚನೆಗೆ ಸೂಚಿಸಲಾಗಿದ್ದು.
ವರ್ಗ ಬಿ ಗೆ ಸೇರಿದ 26 ದೇವಸ್ಥಾನ ಹಾಗೂ
ವರ್ಗ ಸಿ ಗೆ ಸೇರಿದ 126 ದೇವಸ್ಥಾನ
ಪುತ್ತೂರು ತಾಲೂಕು ವರ್ಗ ಬಿ 5 ದೇವಸ್ಥಾನ
ಸಿ ವರ್ಗ 31 ದೇವಸ್ಥಾನ ಗಳಿಗೆ ವ್ಯವಸ್ಥಾಪನ ಸಮಿತಿ ರಚನೆ ಆಗಬೇಕಿದೆ.
ಬಾಕಿ ಉಳಿದ ದೇವಾಲಯಗಳ ಸಮಿತಿ ರಚನೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ಅಧ್ಯಕ್ಷರಾಗಿ, ವಿಶೇಷ ಆಹ್ವಾನಿತರಾಗಿ ರಾಜ್ಯ ಪರಿಷತ್ ಸದಸ್ಯರು ಶ್ರೀಮತಿ ಮಲ್ಲಿಕಾ ಪಕ್ಕಳ ಹಾಗೂ ಜಿಲ್ಲೆಯ ಪ್ರತೀ ತಾಲೂಕಿನ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.