ಪುತ್ತೂರು: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಯುವ ಘಟಕವಾದ ಯುವಕಾಂಗ್ರೆಸ್’ನ ಆಂತರಿಕ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಬ್ಬರು ಪ್ರಬಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕ್ರತಗೊಂಡು ಕಾಂಗ್ರೆಸ್ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ.
ದಕ್ಷಿಣ ಕನ್ನಡದ ಭಾಜಪದ ಭದ್ರಕೋಟೆಗೆ ಈ ಬಾರಿ ಪಕ್ಷೇತರ ಸ್ಪರ್ಧೆಯ ಬಂಡಾಯದಿಂದ ಕಾಂಗ್ರೆಸ್ ಗೆದ್ದು ಬೀಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಬಾತಿಶ್ ಅಳಕೆಮಜಲ್ ಹಾಗು ಪುತ್ತೂರು ಬ್ಲಾಕ್’ಗೆ ನಾಮಪತ್ರ ಸಲ್ಲಿಸಿದ್ದು ಆಶಿಕ್ ಸಂಪ್ಯ ನಾಮಪತ್ರ ತಿರಸ್ಕ್ರತಗೊಂಡಿದ್ದು. ಅವರ ಬೆಂಬಲಿಗರಿಗೆ ನಿರಾಸೆ ತಂದಿದೆ.
ಈ ಬಗ್ಗೆ ಬಾತಿಶ್ ಅಳಕೆಮಜಲು ಅವರನ್ನು ಮತ್ತು ಆಶಿಕ್ ಸಂಪ್ಯ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ನಾವು ಸಲ್ಲಿಸಿದ್ದ ಅರ್ಜಿಯಲ್ಲಿ ಮತ್ತು ನಮ್ಮ ವಯಸ್ಸಿನಲ್ಲಿ ಯಾವುದೇ ತೊಂದರೆಯಿರದಿದ್ದರೂ, ಯಾವುದೇ ಕಾರಣ ನೀಡದೆ ನಮ್ಮ ನಾಮಪತ್ರ ರದ್ದುಪಡಿಸಲಾಗಿದೆ. ಇದರ ವಿರುದ್ಧ ಪಕ್ಷದ ಉನ್ನತ ನಾಯಕರಿಗೆ ದೂರು ನೀಡುತ್ತೇವೆ ಮತ್ತು ನ್ಯಾಯ ಸಿಗದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾಲತಾಣದಲ್ಲಿ ಬಾರಿ ಪ್ರಚಾರದಲ್ಲಿ ತೊಡಗಿದ್ದ ಈ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರು ಹಾಗು ಪಕ್ಷದ ಕಾರ್ಯಕರ್ತರು ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.