ಕಾರ್ಕಳ: ಕರಾವಳಿ ಕರ್ನಾಟಕದಲ್ಲಿ ಮತ್ತೆ ಲವ್ ಜಿಹಾದ್ ಗದ್ದಲ ಶುರುವಾಗಿದೆ. ಅನ್ಯಕೋಮಿನ ಯುವಕ-ಹಿಂದೂ ಯುವತಿ ಒಟ್ಟಾಗಿ ಹೋಗಿದ್ದಕ್ಕೆ ಗಲಾಟೆಯಾಗಿದ್ದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅನ್ಯಕೋಮಿನ ಯುವಕ ಕಾರಿನಲ್ಲಿ ಯುವತಿಯನ್ನು ಕರೆದೊಯ್ದು ಅಮಲು ಪದಾರ್ಥ ನೀಡಿ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಅಂತ ದೂರು ದಾಖಲಾಗಿದೆ.
ಕಠಿಣ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳ ಒತ್ತಾಯ
ಮೂವರು ಯುವಕರು ಸೇರಿ ಅತ್ಯಾಚಾರ ಎಸಗಿದ್ದಾರೆ ಅಂತ ಯುವತಿ ಹೇಳಿಕೆ ನೀಡಿದ್ದಾಳೆ. ಸದ್ಯ ಸ್ಥಳಿಯರು ಸೇರಿ ಯುವಕನನ್ನ ಪೊಲೀಸರಿಗೆ ಒಪ್ಪಿಸಿದ್ದು ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.