ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಮಹಿಳಾ ಠಾಣೆಯ ಮುಂಭಾಗದಲ್ಲಿರುವ ಅನಾಥ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ. ಆದರೆ ನಗರಸಭೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆಯೇ?ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ. ಪುತ್ತೂರು ಮುಖ್ಯ ರಸ್ತೆ ಯಲ್ಲಿ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ? ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಲ್ನಾಡಿನಿಂದ ಉಳ್ಳಾಲ್ತಿಯ ಭಂಡಾರ ಬರುವ ದಾರಿಯಲ್ಲಿರುವ ಕಟ್ಟಡವನ್ನು ಈಗಾಗಲೇ ಕೆಡವಿ ಹಾಕಲಾಗಿದೆ. ಅದರ ಪಳೆಯುಳಿಕೆಯಂತೆ ಉಳಿದಿರುವ ಕಟ್ಟಡ ಹಾಗೆಯೇ ಉಳಿದಿದೆ. ಇದರ ಪಕ್ಕದಲ್ಲಿಯೇ ಜನರು ವಾಹನಗಳಿಗೆ ಕಾಯುತ್ತಿರುತ್ತಾರೆ. ಯಾವುದೇ ಸಂದರ್ಭದಲ್ಲಿ ಇಲ್ಲಿ ಅಪಾಯ ಸಂಭವಿಸಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಕೂಡಲೇ ತೆರವು ಮಾಡಿ ಸಂಭಾವ್ಯ ದುರಂತವನ್ನು ತಪ್ಪಿಸಬೇಕಿದೆ.
ನಿರ್ಮಾಣ ವಾದ ಹಳೆಯ ಕಟ್ಟಡ ಗಳು ಮೇಲೆ ಮರದ ಹಲಗೆಯ ಮೇಲೆ ಮಣ್ಣು ಹಾಕಿ ಕಟ್ಟಿರುವ ಕಟ್ಟಡವದರಿಂದ ಹುಳ ಹಿಡಿದು ಬೀಳುವ ಪರಿಸ್ಥಿತಿಯಲ್ಲಿ ಇದೆ ಮಳೆ ಬಂದರೆ ಅತೀ ದೊಡ್ಡ ದುರಂತ ಗ್ಯಾರಂಟಿ ದೊಡ್ಡ ಅನಾಹುತವಾಗುವ ಮೊದಲು ತೆರವುಗೊಳಿಸಿ. ಪುತ್ತೂರು ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ಇಲ್ಲದ ಅಂಗಡಿ ಕಟ್ಟಡ ಗಳು ರಸ್ತೆ ಮತ್ತು ಚರಂಡಿ ಯನ್ನ ಅಕ್ರಮಿಸಿ ಕೊಂಡಿವೆ

























