ಪುತ್ತೂರು: ರಾಜಕೀಯ ವಿದ್ಯಮಾನದಲ್ಲಿ ಸಂಚಲನ ಮೂಡಿಸಿದ ಆಡಿಯೋ ಪ್ರಕರಣದ ಮಹಿಳೆ ಶನಿವಾರ ಮತ್ತೆ ನಗರ ಠಾಣೆಗೆ ಆಗಮಿಸಿ ಕುತೂಹಲ ಮೂಡಿಸಿದ್ದಾರೆ.
ಮನೆಯ ಹತ್ತಿರ ಓಡಾಡಿದ ಅನುಭವ ಬರುತ್ತಿದೆ ರಕ್ಷಣೆ ಬೇಕು ಎಂಬ ವಿಚಾರದಲ್ಲಿ ಠಾಣೆಗೆ ಆಗಮಿಸಿದ್ದಾರೆನ್ನಲಾಗಿದೆ. ಠಾಣೆಯಿಂದ ಮನೆಯ ಸುತ್ತ ಮುತ್ತ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸುತ್ತಿದೆ ಜೊತೆಗೆ ಯಾವುದೇ ಸಂಧರ್ಭದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಶಿರಸಿ, ಬೆಂಗಳೂರು ಭಾಗದಲ್ಲಿ ಕೆಲಸ ನಿರ್ವಹಿಸಿದ್ದ ಮಹಿಳೆ ಎರಡು ತಿಂಗಳಿಂದ ಪುತ್ತೂರಿನಲ್ಲಿ ನೆಲೆಸಿದ್ದರು. ಮೊನ್ನೆ ತಾನೇ ಆಡಿಯೋ ವೈರಲ್ ಆಗಿದ್ದು ರಾತ್ರಿ ಠಾಣೆಗೆ ಬಂದು ರಕ್ಷಣೆ ಕೋರಿದ್ದು ದೂರು ನೀಡದೆ ಹಿಂತಿರುಗಿದ್ದು ಮನೆಯ ತನಕ ಪೋಲಿಸ್ ಜೀಪ್ ಮೂಲಕ ಮನೆ ತನಕ ಬಿಟ್ಟು ಬಂದಿದ್ದು. ಇದೀಗ ಮಹಿಳೆಗೆ ಮತ್ತೆ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಯಾವುದೇ ದೂರು ನೀಡದೆ ಹಿಂದಿರುಗಿದ್ದಾರೆ.