• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮಂಗಳೂರು: ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮ ಯಶಸ್ವಿ

ಮಂಗಳೂರು: ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮ ಯಶಸ್ವಿ

September 3, 2024
ಕೇರಳದ ಕೊಟ್ಟಿಯೂರು ದೇಗುಲದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ: ಮಹಿಳಾ ಭಕ್ತರನ್ನು ತಳ್ಳಾಡಿ, ನಿಂದಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್

ಕೇರಳದ ಕೊಟ್ಟಿಯೂರು ದೇಗುಲದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ: ಮಹಿಳಾ ಭಕ್ತರನ್ನು ತಳ್ಳಾಡಿ, ನಿಂದಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್

June 8, 2026
3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪೊಲೀಸ್–ವಸತಿಯುತ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪೊಲೀಸ್–ವಸತಿಯುತ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

June 8, 2026
ಮೊಗ್ರು : ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ – ಶಾಸಕ ಹರೀಶ್ ಪೂಂಜಾ ರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್ ಸೌಲಭ್ಯ

ಮೊಗ್ರು : ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ – ಶಾಸಕ ಹರೀಶ್ ಪೂಂಜಾ ರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್ ಸೌಲಭ್ಯ

June 6, 2026
ಜಂತರ್ ಮಂತರ್‌ನಲ್ಲಿ ‘ಕಾಕ್ರೋಜ್ ಜನತಾ ಪಾರ್ಟಿ’ ಪ್ರತಿಭಟನೆ ಭಾರೀ ಬೆಂಬಲ : ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಜಂತರ್ ಮಂತರ್‌ನಲ್ಲಿ ‘ಕಾಕ್ರೋಜ್ ಜನತಾ ಪಾರ್ಟಿ’ ಪ್ರತಿಭಟನೆ ಭಾರೀ ಬೆಂಬಲ : ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

June 6, 2026
ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ – ಭಾರತದ ಇಂಧನ ಆಮದು ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ!

ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ – ಭಾರತದ ಇಂಧನ ಆಮದು ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ!

June 6, 2026
ಬಿಜೆಪಿಗೆ ”ಗುಡ್ ಬೈ” ಹೇಳಿದ ಅಣ್ಣಾಮಲೈ- ಹೊಸ ರಾಜಕೀಯ ಆಂದೋಲನ ಪ್ರಾರಂಭ- ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

ಬಿಜೆಪಿಗೆ ”ಗುಡ್ ಬೈ” ಹೇಳಿದ ಅಣ್ಣಾಮಲೈ- ಹೊಸ ರಾಜಕೀಯ ಆಂದೋಲನ ಪ್ರಾರಂಭ- ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

June 5, 2026
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಯು.ಟಿ. ಖಾದರ್​​

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಯು.ಟಿ. ಖಾದರ್​​

June 4, 2026
ಬೆಳ್ತಂಗಡಿ: ಓಡಿಲ್ನಾಳ ಬಾಲಕ ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ : ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಎಸ್‌ಪಿ ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಓಡಿಲ್ನಾಳ ಬಾಲಕ ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ : ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಎಸ್‌ಪಿ ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

June 4, 2026
ಬಿ ಕೆ ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಚಿತ!:  ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಿ ಕೆ ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಚಿತ!: ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

June 3, 2026
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ ಕೆ ಶಿವಕುಮಾರ್ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ!

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ ಕೆ ಶಿವಕುಮಾರ್ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ!

June 3, 2026
ಪುತ್ತೂರು: ನಿರಂತರ ವಿದ್ಯುತ್ ಕಡಿತ ವಿದ್ಯುತ್ ಕಡಿತ ಸಮಸ್ಯೆ – ಬಿಜೆಪಿಯಿಂದ ಮಾಜಿ ಶಾಸಕರ ನೇತೃತ್ವದಲ್ಲಿ  ಉಗ್ರ ಹೋರಾಟದ ಎಚ್ಚರಿಕೆ

ಪುತ್ತೂರು: ನಿರಂತರ ವಿದ್ಯುತ್ ಕಡಿತ ವಿದ್ಯುತ್ ಕಡಿತ ಸಮಸ್ಯೆ – ಬಿಜೆಪಿಯಿಂದ ಮಾಜಿ ಶಾಸಕರ ನೇತೃತ್ವದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

June 3, 2026
ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಸದಸ್ಯಗೆ ಹಲ್ಲೆ ಪ್ರಕರಣ  ಆರೋಪಿಗಳಾದ ಪ್ರಜ್ವಲ್ ಕೆ.ವಿ. ಗೌಡ ಕಲ್ಮoಜ, ರಾಧಾಕೃಷ್ಣ ಬರಮೇಲು ಕಣಿಯೂರು ಇವರಿಗೆ ಜೈಲು ಶಿಕ್ಷೆ ಪ್ರಕಟ

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಸದಸ್ಯಗೆ ಹಲ್ಲೆ ಪ್ರಕರಣ ಆರೋಪಿಗಳಾದ ಪ್ರಜ್ವಲ್ ಕೆ.ವಿ. ಗೌಡ ಕಲ್ಮoಜ, ರಾಧಾಕೃಷ್ಣ ಬರಮೇಲು ಕಣಿಯೂರು ಇವರಿಗೆ ಜೈಲು ಶಿಕ್ಷೆ ಪ್ರಕಟ

June 3, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, June 9, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕೇರಳದ ಕೊಟ್ಟಿಯೂರು ದೇಗುಲದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ: ಮಹಿಳಾ ಭಕ್ತರನ್ನು ತಳ್ಳಾಡಿ, ನಿಂದಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್

    ಕೇರಳದ ಕೊಟ್ಟಿಯೂರು ದೇಗುಲದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ: ಮಹಿಳಾ ಭಕ್ತರನ್ನು ತಳ್ಳಾಡಿ, ನಿಂದಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್

    3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪೊಲೀಸ್–ವಸತಿಯುತ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

    3395 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪೊಲೀಸ್–ವಸತಿಯುತ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

    ಮೊಗ್ರು : ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ – ಶಾಸಕ ಹರೀಶ್ ಪೂಂಜಾ ರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್ ಸೌಲಭ್ಯ

    ಮೊಗ್ರು : ಬುಳೇರಿ ಮೊಗ್ರು ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆ – ಶಾಸಕ ಹರೀಶ್ ಪೂಂಜಾ ರಿಂದ ತಕ್ಷಣ ಸ್ಪಂದನೆ, ಬೋರ್‌ವೆಲ್ ಸೌಲಭ್ಯ

    ಬೆಳ್ತಂಗಡಿ: ಓಡಿಲ್ನಾಳ ಬಾಲಕ ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ : ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಎಸ್‌ಪಿ ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

    ಬೆಳ್ತಂಗಡಿ: ಓಡಿಲ್ನಾಳ ಬಾಲಕ ಸುಮಂತ್ ಅನುಮಾನಾಸ್ಪದ ಸಾವು ಪ್ರಕರಣ : ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಎಸ್‌ಪಿ ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

    ಬಿ ಕೆ ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಚಿತ!:  ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಬಿ ಕೆ ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಚಿತ!: ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಪುತ್ತೂರು: ನಿರಂತರ ವಿದ್ಯುತ್ ಕಡಿತ ವಿದ್ಯುತ್ ಕಡಿತ ಸಮಸ್ಯೆ – ಬಿಜೆಪಿಯಿಂದ ಮಾಜಿ ಶಾಸಕರ ನೇತೃತ್ವದಲ್ಲಿ  ಉಗ್ರ ಹೋರಾಟದ ಎಚ್ಚರಿಕೆ

    ಪುತ್ತೂರು: ನಿರಂತರ ವಿದ್ಯುತ್ ಕಡಿತ ವಿದ್ಯುತ್ ಕಡಿತ ಸಮಸ್ಯೆ – ಬಿಜೆಪಿಯಿಂದ ಮಾಜಿ ಶಾಸಕರ ನೇತೃತ್ವದಲ್ಲಿ ಉಗ್ರ ಹೋರಾಟದ ಎಚ್ಚರಿಕೆ

    ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಸದಸ್ಯಗೆ ಹಲ್ಲೆ ಪ್ರಕರಣ  ಆರೋಪಿಗಳಾದ ಪ್ರಜ್ವಲ್ ಕೆ.ವಿ. ಗೌಡ ಕಲ್ಮoಜ, ರಾಧಾಕೃಷ್ಣ ಬರಮೇಲು ಕಣಿಯೂರು ಇವರಿಗೆ ಜೈಲು ಶಿಕ್ಷೆ ಪ್ರಕಟ

    ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಸದಸ್ಯಗೆ ಹಲ್ಲೆ ಪ್ರಕರಣ ಆರೋಪಿಗಳಾದ ಪ್ರಜ್ವಲ್ ಕೆ.ವಿ. ಗೌಡ ಕಲ್ಮoಜ, ರಾಧಾಕೃಷ್ಣ ಬರಮೇಲು ಕಣಿಯೂರು ಇವರಿಗೆ ಜೈಲು ಶಿಕ್ಷೆ ಪ್ರಕಟ

    ಸಹಕಾರಿ ಬ್ಯಾಂಕ್ ಗಳಲ್ಲಿ 0% ಬಡ್ಡಿ ದರದ ಕೃಷಿ ಸಾಲ ಸೌಲಭ್ಯ ಪಡೆಯಲು NCS ಸಮಸ್ಯೆ; ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒಗೆ ರೈತ ಸಂಘದಿಂದ ಮನವಿ

    ಸಹಕಾರಿ ಬ್ಯಾಂಕ್ ಗಳಲ್ಲಿ 0% ಬಡ್ಡಿ ದರದ ಕೃಷಿ ಸಾಲ ಸೌಲಭ್ಯ ಪಡೆಯಲು NCS ಸಮಸ್ಯೆ; ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒಗೆ ರೈತ ಸಂಘದಿಂದ ಮನವಿ

    ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ  ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

    ನೆಟ್ಟಣಿಗೆ ಮುಡ್ನೂರು 25ನೇ ಅಕ್ರಮ ಸಕ್ರಮ ಬೈಠಕ್, 94 ಸಿ ಹಕ್ಕುಪತ್ರ ವಿತರಣೆ ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ : ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಈಶ್ವಮಂಗಲ

ಮಂಗಳೂರು: ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮ ಯಶಸ್ವಿ

by ಪ್ರಜಾಧ್ವನಿ ನ್ಯೂಸ್
September 3, 2024
in ಈಶ್ವಮಂಗಲ, ಉಡುಪಿ, ಉಪ್ಪಿನಂಗಡಿ, ಉಳ್ಳಾಲ, ಕಡಬ, ಕಾಸರಗೋಡು, ಕುಂದಾಪುರ, ಕುಂಬ್ರ, ಜಿಲ್ಲೆ, ಜ್ಯೋತಿಷ್ಯ, ದಕ್ಷಿಣ ಕನ್ನಡ, ಧರ್ಮಸ್ಥಳ, ಧಾರ್ಮಿಕ, ನೆಲ್ಯಾಡಿ, ಪುಣಚ, ಪುತ್ತೂರು, ಪ್ರಾದೇಶಿಕ, ಬಂಟ್ವಾಳ, ಬೆಳ್ತಂಗಡಿ, ಬೆಳ್ಳಾರೆ, ಮಂಗಳೂರು, ಮಡಿಕೇರಿ, ಮಾಣಿ, ಮೂಡಬಿದಿರೆ, ವಿಟ್ಲ, ಸವಣೂರು, ಸುಬ್ರಹ್ಮಣ್ಯ, ಸುಳ್ಯ
0
ಮಂಗಳೂರು: ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮ ಯಶಸ್ವಿ
42
SHARES
120
VIEWS
ShareShareShare

ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ (ರಿ) ಮಂಗಳೂರು ಇದರ ವತಿಯಿಂದ ಆಯೋಜಿಸಲಾದ ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮ ಮಂಗಳೂರಿನ ಕಾವೂರು ಸಹಕಾರಿ ಸದನದಲ್ಲಿ ದಿನಾಂಕ 01.09.2024 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು ಹಾಗೂ ಹಿಂದೂ ಮುಖಂಡರಾದ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರು ಮಾತನಾಡಿ ದೈವಾರಾಧನೆ ಎಂದು ನಂಬಿಕೆಯಾಗಿ ಉಳಿದಿಲ್ಲ ದಂಧೆಯಾಗಿದೆ. ತುಳುನಾಡಿನ ದೈವಗಳ ಹೆಸರಿನಲ್ಲಿ ದಂಧೆ ನಡೆಯುತ್ತಿದೆ. ಯಾವ ಸಮಾಜ ನಂಬಿಕೆ, ಕೌಟುಂಬಿಕ ಪದ್ಧತಿ, ಧಾರ್ಮಿಕ ಸಂಸ್ಕೃತಿ ಯ ಹಿರಿಮೆಯನ್ನು ದೈವರಾಧನೆಯ ಮೂಲಕ ಎತ್ತಿ ಹಿಡಿದಿತ್ತೋ ಇಂದು ಅದೇ ಸಮಾಜದಲ್ಲಿ ದೈವರಾಧನೆಯ ವ್ಯಾಪಾರಿಕರಣದಿಂದ ಹಲವಾರು ಕುಟುಂಬಗಳು ನಾಶವಾಗಿದೆ.

ದೈವಾರಾಧನೆ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಹಿಂದೂ ಸಮಾಜ ಯೋಚಿಸಬೇಕು ಎಂದರು. ದೈವ ನಂಬಿಕೆಗಳು ಇಂದು ದುಡ್ಡು ಮಾಡುವ ಸಾಧನವಾಗಿದೆ. ದೈವಾರಾಧನೆ ಹೆಸರಿನಲ್ಲಿ ನಡೆಯುತ್ತಿರುವ ದಂಧೆ ನಿಲ್ಲದೆ ಹೋದಲ್ಲಿ ತುಳುನಾಡಿನ ಮೂಲ ನಂಬಿಕೆಗಳು ನಾಶವಾಗಲಿದೆ. ಪೊಸತ್ ತೋಡಡ, ಪರತ್ ನಿಗಿಪಡ ಎಂಬ ದೈವ ನುಡಿಯಂತೆ ನಾವು ಸಾಗಬೇಕಾಗಿದೆ. ದೈವಾರಾಧನೆಯ ಸಾಂಸ್ಕೃತೀಕರಣವನ್ನು ತಡೆಯಬೇಕು. ದೈವಗಳು ನಮ್ಮ ನಂಬಿಕೆಯ ಭಾಗವೇ ಹೊರತು ಮನೋರಂಜನಾ ಚಟುವಟಿಕೆಯಲ್ಲ. ಯಾವುದೇ ಒಂದು ವಸ್ತು ಅತಿಯಾದಲ್ಲಿ ವಿಷವಾಗುತ್ತದೆ.

ದೈವದ ಕೊಡಿಯಡಿಯಲ್ಲಿ ಫೋಟೋಗ್ರಫಿ, ವಿಡಿಯೋಗ್ರಫಿ ನಿಷೇಧಿಸಬೇಕು. ಪಡುಬಿದ್ರೆಯ ಬ್ರಹ್ಮ ಸ್ಥಾನದಲ್ಲಿ ಇಂದಿಗೂ ಫೋಟೋ, ವಿಡಿಯೋಗೆ ಅವಕಾಶ ಮಾಡಿಕೊಟ್ಟಿಲ್ಲ, ಏಕೆಂದರೆ ಇದು ಪೂರ್ವಕಾಲದ ಪದ್ಧತಿ. ಇದೇ ರೀತಿಯ ಕಟ್ಟುಕಟ್ಟಲೆ ತುಳುನಾಡಿನ ಎಲ್ಲಾ ದೈವಸ್ಥಾನಗಳಲ್ಲಿ ಬರಬೇಕು ಎಂದು ವಿನಂತಿಸಿದರು.

ನಾವು ಸಂಘಟನಾತ್ಮಕವಾಗಿ ಮುಂದುವರೆದು, ತುಳುನಾಡಿನ ಎಲ್ಲಾ ದೈವಸ್ಥಾನಗಳಿಗೆ ಭೇಟಿ ನೀಡಿ ಫೋಟೋ ವಿಡಿಯೋಗಳನ್ನು ತೆಗೆದರೆ ಯಾವ ರೀತಿಯ ಅಪಾಯ, ಅವಮಾನ, ದೈವ ನಿಂದನೆ ಆಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು ಎಂದು ಸಂಘಟನೆಗೆ ಸಲಹೆ ನೀಡಿದರು.

ಹಿರಿಯ ದೈವ ನರ್ತಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕಯ್ಯ ಸೇರಾ ಅವರು ಮಾತನಾಡಿ ದೈವಾರಾಧನೆ ಈಗ ಹಿಂದಿನಂತಿಲ್ಲ.‌ ಕಾಲ ಬದಲಾಗುತ್ತಿದ್ದಂತೆ ಈಗ ದೈವಾರಾಧನೆಯೂ ಬದಲಾಗುತ್ತಿದೆ. ಜನರಲ್ಲಿ ಈ ಹಿಂದೆ ಇದ್ದ ಭಯ ಭಕ್ತಿ ಈಗ ಮಾಯವಾಗಿದೆ. ಹಿರಿಯ ದೈವ ನರ್ತಕರಿಗೆ ಈ ಕಾಲದಲ್ಲಿ ಬೆಲೆಯಿಲ್ಲದಂತಾಗುತ್ತಿದೆ.

ನೇಮ ನಡೆಸುವವರು ನಿಯಮ ಬದ್ಧವಾದ ನೇಮಕ್ಕಿಂತ ಅಬ್ಬರದ ನೇಮ ಅಪೇಕ್ಷಿಸುತ್ತಿದ್ದಾರೆ, ಇದರಿಂದಾಗಿ ಯುವ ದೈವ ನರ್ತಕರು ಅನಿವಾರ್ಯವಾಗಿ ಬಣ್ಣಗಾರಿಕೆ, ಕುಣಿತ, ವೇಷಭೂಷಣ ಇಲ್ಲೆಲ್ಲಾ ಬದಲಾವಣೆ ತರುವಂತಾಗಿದೆ.

Sathyasayi Hospital

ಜಾಹೀರಾತು

ನೇಮ ಒಪ್ಪಿಸುವ ಮನೆಯವರು, ಗುತ್ತಿನವರು ತಮ್ಮ ಮನೆಯ, ಊರಿನ ದೈವಗಳಿಗೆ ಹೀಗೆಯೇ ನೇಮ ನಡೆಯಬೇಕು ಎಂದು ಹೇಳಿದ್ದಲ್ಲಿ ದೈವ ಚಾಕಿರಿಯವರು ಅದೇ ರೀತಿ ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ, ಆಗ ಖಂಡಿತಾ ಬದಲಾವಣೆ ಸಾಧ್ಯವಿದೆ. ದೈವಗಳು ಕೊಡಿಯಡಿ ಬಿಟ್ಟು ಬೀದಿಬದಿ, ನಾಟಕ, ಸಿನೇಮಾದಲ್ಲಿ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ.‌ ಇದನ್ನು ತಡೆಯಲು ದೈವ ನರ್ತಕ ಸಮುದಾಯ ನಿಮ್ಮ ಸಂಘಟನೆಗೆ ಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದರು.

ಮಧ್ಯಸ್ಥರಾದ ಮನ್ಮಥ ಶೆಟ್ಟಿ ಅವರು ಮಾತನಾಡಿ, ದೈವಾರಾಧನೆಯಲ್ಲಿ ಮಧ್ಯಸ್ಥನ ಪಾತ್ರ ಭಾರೀ ಪ್ರಮುಖವಾಗಿದೆ. ಇತ್ತೀಚೆಗೆ ಕೆಲವರು ದೈವಾರಾಧನೆಯಲ್ಲಿ ಮಧ್ಯಸ್ಥರು ಇತ್ತೀಚೆಗೆ ಸೇರ್ಪಡೆಗೊಂಡಿದ್ದಾರೆ ಎಂದು ವಾದಿಸುತ್ತಾರೆ. ಅದು ತಪ್ಪು ಮದಿಪು ಎನ್ನುವುದು ಆರಂಭದಿಂದಲೂ ಇತ್ತು. ಇಂದು ಮದಿಪುವವ ಎನ್ನುವ ಬದಲು ಮಧ್ಯಸ್ಥ ಎನ್ನುತ್ತಾರೆ.

ದೈವ ಕಲದಲ್ಲಿ ಮದಿಪು ಎನ್ನುವ ಪದಕ್ಕೆ ಭಾರೀ ಶಕ್ತಿಯಿದೆ. ಆದರೆ ಇಂದಿನ ಯುವ ಪೀಳಿಗೆ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಯೂಟ್ಯೂಬ್ ನೋಡಿ ಬಾಯಿಪಾಠ ಮಾಡಿಯೋ, ಪುಸ್ತಕದಿಂದ ಕಂಠಪಾಠ ಮಾಡಿಕೊಂಡು ಬಂದು ದೈವ ಕಲದಲ್ಲಿ ಮ್ಯಾಚಿಂಗ್ ವಸ್ತ್ರ ಧರಿಸಿ ನಿರರ್ಗಳವಾಗಿ ಏಳೆಂಟು ನಿಮಿಷ ಕಥೆ ಹೇಳುತ್ತಾರೆ.

ಇದು ತಪ್ಪು, ದೈವದ ಕಟ್ಟುಕಟ್ಟಳೆ, ಹಿನ್ನಲೆ, ವಿವಿಧ ಹಂತಗಳನ್ನು ತಿಳಿದುಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಲು ಪ್ರಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂದು ಮಧ್ಯಸ್ಥರೊಂದಿಗೆ ರೀಲ್ಸ್ ವಿಡಿಯೋ ಮಾಡಲು, ಫೋಟೋ ತೆಗೆದು ವೈರಲ್‌ ಮಾಡಲೆಂದೇ ತಮ್ಮೊಂದಿಗೆ ಸಹಾಯಕರನ್ನು ಕರೆದುಕೊಂಡು ಬರುವ ಸ್ಥಿತಿಗೆ ನಾವು ತಲುಪಿರುವುದು ವಿಷಾದನೀಯ. ದೈವ ನಂಬಿಕೆ ಉಳಿಸುವತ್ತ ನಾವು ಚಿಂತಿಸಬೇಕಿದೆ ಎಂದರು.

ದೈವ ನಂಬಿಕೆಗಳ ವಿರುದ್ಧ ಆಗುತ್ತಿರುವ ಅವಮಾನ, ನಿಂದನೆಗಳನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬಹುದು ಎಂಬ ವಿಚಾರದಲ್ಲಿ ಮಾತನಾಡಿದ ಖ್ಯಾತ ವಾಗ್ಮಿ ಹಾಗೂ ವಕೀಲರಾದ ಸಹನಾ ಕುಂದರ್ ಸೂಡಾ ಅವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಕಾನೂನಿನಲ್ಲಿ ಶಿಕ್ಷಿಸುವ ಅವಕಾಶವಿದೆ.‌

ಸಂಘರ್ಷ ಬಿಟ್ಟು ಕಾನೂನು ಮಾರ್ಗದಲ್ಲಿ ಹೋದರೆ ದೈವ ನಂಬಿಕೆಯ ಪರವಾಗಿ ಪರಿಣಾಮಕಾರಿಯಾದ ಬದಲಾವಣೆಗಳು ಸಾಧ್ಯ ಎಂದರು. ಈಗ ದೈವದ ಕಲಗಳಿಗೆ ಹೋಗುವ ತಾಯಂದಿರು, ಹೆಣ್ಣು ಮಕ್ಕಳು ಜಾಗೃತರಾಗಿರಬೇಕು. ದೈವದ ಕಾರಣಿಕದ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು, ನಾವೇ ಮುಂದೆ ನಿಂತು ಫೋಟೋ, ವಿಡಿಯೋ ತೆಗೆದರೆ ಯಾವ ಸಂದೇಶ ತಲುಪುತ್ತದೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಕೊನೆಯ ಅವಧಿಯಲ್ಲಿ ತಮ್ಮಣ್ಣ ಶೆಟ್ಟಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.‌ ಸಂವಾದದಲ್ಲಿ ದೈವಾರಾಧನೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬದಲಾವಣೆ ಮತ್ತು ಅದಕ್ಕೆ ಪರಿಹಾರ, ದೈವರಾಧನೆಯ ಕಟ್ಟುಪಾಡು, ಸಿನೇಮಾ ನಾಟಕಗಳಲ್ಲಿ ದೈವಗಳನ್ನು ತೋರಿಸದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Keshari Durga

ಜಾಹೀರಾತು

ಇನ್ನಾದರೂ ಸಿನೇಮಾ, ಯಕ್ಷಗಾನ, ನಾಟಕಗಳಲ್ಲಿ ದೈವಗಳನ್ನು ಥೇಟ್ ಕೊಡಿಯಡಿಯ ವೇಷಭೂಷಣಗಳ ಬದಲು ಕೇವಲ ಸಿಂಬಾಲಿಕ್ ಆಗಿ ತೋರಿಸಲು ಪ್ರಯತ್ನಿಸಿ ಮತ್ತು ಟ್ಯಾಬ್ಲೋ, ಶಾಲಾ‌ ಕಾರ್ಯಕ್ರಮಗಳಲ್ಲಿ ದೈವಗಳನ್ನು ಪ್ರದರ್ಶನದ ವಸ್ತು, ಸಾಂಸ್ಕೃತಿಕ ಕಾರ್ಯಕ್ರಮವಾಗಿ ತೋರಿಸುವುದನ್ನು ನಿಲ್ಲಿಸಿ ಎಂಬುದು ಕಾರ್ಯಕ್ರಮಕ್ಕೆ ಆಗಮಿಸಿದವರ ಒತ್ತಾಯವಾಗಿತ್ತು.

ಪೊಸತ್ ತೋಡಡೆ, ಪರತ್ ನಿಗಿಪಡೆ ಎಂಬ ದೈವ ನುಡಿಯಂತೆ ಕಾರ್ಯಕ್ರಮಕ್ಕೆ ಬಂದವರಿಂದ ಪೊಸತೆನ್ ತೋಡುಜಾ, ಪರತೆನ್ ನಿಗಿಪುಜಾ ಎಂಬ ವಾಗ್ದಾನದ ರೂಪದಲ್ಲಿ ಸಹಿ ಸಂಗ್ರಹ ಮಾಡಲಾಗಿದ್ದು, ಇದಕ್ಕೂ ಆಗಮಿಸಿದವರು ಮೆಚ್ಚುಗೆ ಸೂಚಿಸಿದರು.

ಜೀವಿತಾ ಕುತ್ತಾರ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು ಹಾಗೂ ಹಿಂದೂ ಸಂಘಟನೆಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್, ಹಿರಿಯ ದೈವ ನರ್ತಕರಾದ ಲೋಕಯ್ಯ ಸೇರಾ, ಚಂದು ನಲಿಕೆ, ಎನ್‌ಕೆ ಸಾಲಿಯಾನ್, ಮಧ್ಯಸ್ಥರಾದ ಮನ್ಮಥ ಶೆಟ್ಟಿ ಪುತ್ತೂರು, ಶಾಸಕರಾದ ವೇದವ್ಯಾಸ್ ಕಾಮತ್, ಮುಂಬೈಯ ಚಂದ್ರಕಾಂತ್ ಶೆಟ್ಟಿ ಬೆರ್ಮೊಟ್ಟು, ಖ್ಯಾತ ವಕೀಲರಾದ ಸಹನಾ ಕುಂದರ್ ಸೂಡಾ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ್ ಕತ್ತಲ್ಸಾರ್, ಸಾಂಸ್ಕೃತಿಕ ವಿಮರ್ಶಕರಾದ ತಮ್ಮಣ್ಣ ಶೆಟ್ಟಿ, ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ ಇದರ ಗೌರವಾಧ್ಯಕ್ಷರಾದ ದಿಲ್‌ರಾಜ್ ಆಳ್ವ, ಅಧ್ಯಕ್ಷರಾದ ಭರತ್ ಬಳ್ಳಾಲ್‌ಭಾಗ್, ಕಾರ್ಯಕ್ರಮದ ಸಂಯೋಜಕರಾದ ಧನುಷ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Muliya

ಜಾಹೀರಾತು

SendShare17Share
Previous Post

ಪೆರ್ನೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಶಾಸಕ ಅಶೋಕ್ ರೈಯವರಿಂದ ಪರಿಶೀಲನೆ

Next Post

ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿ, ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯನಿಗೆ ನ್ಯಾಯಾಂಗ ಬಂಧನ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..