ಪೆರೋಡಿತ್ತಾಯಕಟ್ಟೆ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ದ.ಕ.ಜಿ.ಪ.ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪೆರೋಡಿತ್ತಾಯಕಟ್ಟೆ, ತೆಂಕಕಾರಂದೂರು ಗ್ರಾಮ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಗೆ ವಿಶೇಷ ಉಚಿತ ತರಬೇತಿ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಎಸ್ .ಡಿ. ಎಂ. ಸಿ. ಸಮಿತಿ ಅಧ್ಯಕ್ಷ ರಾದ ಮುಸ್ತಫಾ ಮಂಜೊಟ್ಟಿ ಉದ್ಘಾಟಿಸಿದರು.ವೇದಿಕೆಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ಕಿರಣ್ ಶೆಟ್ಟಿ, ಪೆರೋಡಿತ್ತಾಯಕಟ್ಟೆ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು.
ತರಬೇತಿಯನ್ನು ಲಯನ್ ಸುರೇಶ್ ಎಂ.ಎಸ್ ನಡೆಸಿ ಕೊಟ್ಟರು. ಇದೇ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಿಗುವ ವಿದ್ಯಾರ್ಥಿ ವೇತನಗಳ ಬಗ್ಗೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ನಜೀರ್ ರವರು ಮಾಹಿತಿ ನೀಡಿದರು.ಶಾಲಾ ಮಕ್ಕಳು ದೇವರನ್ನು ಸ್ತುತಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬೆನಡಿಕ್ಟಾ ಪಾಯ್ಸ್ ರವರು ಪ್ರಾಸ್ತವಿಕ ವಾಗಿ ಮಾತನಾಡಿ, ಬಂದ ಅತಿಥಿ ಗಳನ್ನು ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಚೈತ್ರರವರು
ಧನ್ಯವಾದವಿತ್ತರು. ಈ ಕಾರ್ಯಗಾರದಲ್ಲಿಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು,
ಶಾಲಾ ಶಿಕ್ಷಕ ವೃಂದದವರು, ಬಿಸಿಯೂಟ ಸಿಬ್ಬಂದಿಯವರು ಪುಟಾಣಿಗಳು ಸಹಕರಿಸಿದರು.