ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆಯ ನೇತೃತ್ವದಲ್ಲಿ ಮಂಗಳೂರು ನಗರ ಸಮಿತಿ ಹಾಗೂ ಸಂಸ್ಕಾರ ಭಾರತೀ ಬಂಟ್ವಾಳ ಇವುಗಳು ಜಂಟಿ ಸಭೆಯು ಬಿ.ಸಿ.ರೋಡ್ ನ ರಂಗೋಲಿಯಲ್ಲಿ ದಿ. 22.09.2024 ರ ಭಾನುವಾರ ಅಪರಾಹ್ನ ನಡೆಯಿತು.
ಸಭಾಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಅಧ್ಯಕ್ಷರಾದ ಶ್ರೀ ತಾರಾನಾಥ ಕೊಟ್ಟಾರಿಯವರು ವಹಿಸಿದ್ದು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಂಸ್ಕಾರ ಭಾರತೀ ಮಾರ್ಗದರ್ಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ, ಪ್ರಾಂತ ಉಪಾಧ್ಯಕ್ಷರಾದ ಶ್ರೀಮತಿ ರೂಪಲೇಖಾ, ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀ ಸರಪಾಡಿ ಅಶೋಕ್ ಶೆಟ್ಟಿ, ಮಂಗಳೂರು ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ದಯಾನಂದ ಜಿ.ಕತ್ತಲ್ ಸಾರ್, ಪ್ರಾಂತ ಸಹ ಕೋಶಾಧಿಕಾರಿ ರಘುವೀರ್ ಗಟ್ಟಿ, ಪ್ರಾಂತ ಸಹ ಕಾರ್ಯದರ್ಶಿ ಶ್ರೀ ನಾಗರಾಜ್ ಶೆಟ್ಟಿ, ವಿಭಾಗ ಸಂಚಾಲಕರಾದ ಶ್ರೀ ಮಾಧವ ಭಂಡಾರಿ ,ಜಿಲ್ಲಾ ಕೋಶಾಧಿಕಾರಿಗಳಾದ ಶ್ರೀ ಸಂಕಪ್ಪ ಶೆಟ್ಟಿ ಬಿ.ಸಿ.ರೋಡ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶಶಿಕುಮಾರ್ ವೇಣೂರು, ಬಂಟ್ವಾಳ ತಾಲೂಕು ಸಂಚಾಲಕರಾದ ಜ್ಯೋತಿಷಿ ಅನಿಲ್ ಪಂಡಿತ್ ರವರು ಉಪಸ್ಥಿತರಿದ್ದರು
ವಿದುಷಿ ಶ್ರೀ ಲತಾ ನಾಗರಾಜ್ ರವರು ಧ್ಯೇಯ ಗೀತೆಯನ್ನು ಹಾಡಿದರು. ಶ್ರೀ ತಾರನಾಥ ಕೊಟ್ಟರಿಯವರು ಎಲ್ಲರನ್ನೂ ಸ್ವಾಗತಿಸಿದ ಬಳಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಬಂಧುಗಳು ತಮ್ಮತಮ್ಮ ಪರಿಚಯವನ್ನು ಮಾಡಿಕೊಂಡರು.
ಮುನ್ನೂರು ವರ್ಷಗಳ ಹಿಂದೆಯೇ ಪ್ರಪ್ರಥಮ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ, ವಿಧವಾ ವಿವಾಹ ಪ್ರೋತ್ಸಾಹಿಸಿದ, ಸತಿ ಸಹಗಮನ ನಿಲ್ಲಿಸಲು ಪ್ರಯತ್ನಿಸಿದ , ಅನ್ಯ ಮತೀಯರಿಂದ ದಾಳಿಗೊಳಗಾದ ದೇವಾಲಯಗಳಿಗೆ ಮರು ಜೀವ ತುಂಬಿ ಧರ್ಮಶಾಲೆ, ಅನ್ನಛತ್ರ, ಅರವಟ್ಟಿಗೆಗಳನ್ನು ಕಟ್ಟಿಸಿದ, ರೈತನು ಸುಖಿಯಾಗಿದ್ದರೆ ದೇಶವೂ ಸುಖಿ ಎಂದು ನಡೆದುಕೊಂಡ, ಮೊದಲ ಬಾರಿಗೆ ಗ್ರಂಥಗಳನ್ನು ನಕಲು ಮಾಡಿಸಿ ಹಂಚುವ ಮೂಲಕ ಓದಿಗೆ ಪ್ರೋತ್ಸಾಹಿಸಿ , ಪ್ರಪ್ರಥಮಬಾರಿಗೆ ಅಂಚೆ ಸೇವೆ ಆರಂಭಿಸಿದ, ತನ್ನ ಜನ್ಮಸ್ಥಳವಾದ ಅಹಮದ್ ನಗರದ ಹಳ್ಳಿಯಲ್ಲಿ ತಾನೇ ಕಟ್ಟಿಸಿದ ಶಿವದೇವಾಲಯದ ಬಳಿ ಪ್ರೀತಿಪಾತ್ರ ಪ್ರಜೆಗಳಿಂದ ಮೂರ್ತಿಯಾಗಿ ಕೆತ್ತಲ್ಪಡುವಷ್ಟು ಔನ್ನತ್ಯಕ್ಕೇರಿದ್ದ ಲೋಕಮಾತೆ ಅಹಲ್ಯಾ ಹೋಳ್ಕರ್ ಬಗ್ಗೆ ಶ್ರೀಮತಿ ವಿನುತಾ ಎ.ಶೆಟ್ಟಿ ಯವರು ಸವಿವರವಾಗಿ ಸಭೆಗೆ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ತಾರಾನಾಥ ಕೊಟ್ಟಾರಿಯವರು ಹೊಸ ಪದಾಧಿಕಾರಿಗಳಿಗೆ ಶುಭಹಾರೈಸಿ , ರಾಷ್ಟ್ರ ಸೇವೆಗಾಗಿ ಸಂಸ್ಕಾರ ಭಾರತಿಯ ಮೂಲಕ ಶ್ರಮಿಸೋಣವೆನ್ನುತ್ತಾ ಮುಂದಿನ ಕಾರ್ಯಕ್ರಮ ಗಳ ಬಗ್ಗೆ ಎಲ್ಲರೂ ಯೋಚನೆ ಹಾಗೂ ಯೋಜನೆಗಳನ್ನು ರೂಪಿಸಿ ಮುನ್ನಡೆಯಬೇಕೆಂದರು ಶಾಂತಿಮಂತ್ರದ ಮೂಲಕ ಸಭೆ ಮುಕ್ತಾಯವಾಯಿತು