ಅಪ್ರತಿಮ ಸಂಘಟಕ ಹಿಂದು ಜಾಗರಣ ವೇದಿಕೆಯನ್ನು ಜಿಲ್ಲೆಯಲ್ಲಿ ರಾಜ್ಯದಲ್ಲಿ ಘಟ್ಟಿಗೊಳಿಸಿ ಯುವಕ ಜೊತೆಯಿದ್ದ ಸತ್ಯಜಿತ್ ಸುರತ್ಕಲ್ ಅವರ ಮಾತೃ ಭಾರತಿ ಇಂದು ನಿಧನರಾಗಿದ್ದರು. ಅಂತಿಮ ನಮನಕ್ಕೆ ಗಣ್ಯರು ಭಾಗವಹಿಸಿದ್ದು ಸಾವಿರಾರು ಜನರು ಕಣ್ಣೀರ ಕಂಬನಿ ಹರಿಸಿದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಜಗದೀಶ್ ಕಾರಂತ್ ಅವರು ಹೆಚ್ಚಾಗಿ ಸತ್ಯಜಿತ್ ಮನೆಯಲ್ಲಿ ಉಳಿಯುತ್ತಿದ್ದರು. ಆ ಸಂಧರ್ಭದಲ್ಲಿ ತಾಯಿ ಭಾರತೀ ಯವರ ಉಪಚಾರ, ಮಗನಂತೆ ಸಲಹಿದ ನೆನಪುಗಳನ್ನು ಇಂದು ಅಕ್ಷರ ರೂಪದಲ್ಲಿ ಕಾರಂತರು ಬರೆದಿದ್ದಾರೆ.
ಮಮತೆಯ ಅಮ್ಮನಿಗೆ ಮಗನ ಮೌನ ನಮನ ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿದ್ದು ಪ್ರತಿಯೊಂದು ಪದಗಳಿಗೆ ತೂಕದ ಮಾತುಗಳಿಂದ ತಾಯಿ ಮಗನ ಒಡನಾಟ ಸಮಯವನ್ನು ಇದು ತೆರೆದಿಡುತ್ತಿದ್ದು ಸಾಮಾಜಿಕಜಾಲತಾದಲ್ಲಿ ಹಂಚಿಕೊಂಡಿದ್ದಾರೆ.