ಪುತ್ತೂರಿನ ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವಾಲಯದಲ್ಲಿ ದಿನಾಂಕ 23 ಶನಿವಾರ ಸಂಜೆ 5ಗಂಟೆಗೆ ನಟರಾಜ ಸಭಾ ಗ್ರಹದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯನ್ನು ಎಲ್ಲಾ ಭಕ್ತಾದಿಗಳ ಉಪಸ್ಥಿತಿಯಲ್ಲಿ ಪ್ರಥಮ ಸಭೆಯು ನಡೆಯಿತು ಈ ಸಂರಕ್ಷಣಾ ಸಮಿತಿಯ ಉದ್ದೇಶ ದೇವಾಲಯದಲ್ಲಿ ನಡೆಯುವ ತಪ್ಪುಗಳು ದೇವಸ್ಥಾನಕ್ಕೆ ಆಗಬೇಕಾದ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಆಗದೆ ಇದ್ದರೆ ಅದನ್ನು ಸರಿಪಡಿಸುವ ಮತ್ತು ಸರಿ ಆಗದಿದ್ದರೆ ಕಾನೂನಾತ್ಮಕವಾಗಿ ಹೋರಾಟವನ್ನು ಮಾಡಿ ಸರಿಪಡಿಸುವ ವ್ಯವಸ್ಥೆಯನ್ನು ಮಾಡುವುದೇ ಈ ಸಮಿತಿಯ ಉದ್ದೇಶವಾಗಿದೆ ಮತ್ತು ದೇವರ ಸೇವೆಯನ್ನು ಮಾಡುವ ಉದ್ದೇಶ ಕೂಡ ಈ ಸಮಿತಿಯಲ್ಲಿ ಇದೆ
.ಇದರಲ್ಲಿ ರಾಜಕೀಯವೂ ಇಲ್ಲ. ಅಧ್ಯಕ್ಷರು ಇಲ್ಲ ಗೌರವ ಅಧ್ಯಕ್ಷರು ಇಲ್ಲ ಕಾರ್ಯದರ್ಶಿಯು ಇಲ್ಲ ಎಲ್ಲರೂ ಮಹಾಲಿಂಗೇಶ್ವರ ದೇವರ ಭಕ್ತರೇ ಆಗಿರುತ್ತಾರೆ ಈ ಸಭೆಯಲ್ಲಿ ಐವತ್ತಕ್ಕಿಂತ ಹೆಚ್ಚು ಭಕ್ತಾದಿಗಳು ಉಪಸ್ಥಿತರಿದ್ದು ತಮ್ಮ ತಮ್ಮ ಸಲಹೆ ಮತ್ತು ಸೂಚನೆಯನ್ನು ನೀಡಿರುತ್ತಾರೆ. ಇದನ್ನು ಮುಂದಕ್ಕೆ ಒಂದೊಂದೇ ರೀತಿಯಾಗಿ ಸರಿಪಡಿಸುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವ ಮುಖಾಂತರ ಅನ್ ಸರಿಪಡಿಸುವ ವ್ಯವಸ್ಥೆಯನ್ನು ಈ ಸಮಿತಿ ಮಾಡಲಿಕ್ಕೆ ಇದೆ ಎಂದು ಬಾಲಚಂದ್ರ ಸೊರಕೆ. ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದ್ದಾರೆ.