ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ವಿಕಸಿತ ಭಾರತ ಸಂಕಲ್ಪ ಸಭೆ ಭಾರತ್ ಮಾತಾ ಸಮುದಾಯ ಭವನ ಕಲ್ಲೇಗ ಪುತ್ತೂರಿನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯ ನೆರವೇರಿಸಿ ಮಾತಾನಾಡಿದ ಸತೀಶ್ ಕುಂಪಲ ಮುಂದಿನ ಸರಣಿ ಕಾರ್ಯಕ್ರಮದ ಪಟ್ಟಿ ನೀಡಿ ಪಕ್ಷದ ಜೊತೆಗೆ ಸಾರ್ವಜನಿಕರನ್ನು ಒಟ್ಟು ಸೇರಿಸಿ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು. ಇದೇ 23 ರಂದು ಗ್ರಾಮ ಪಂಚಾಯತ್, ನಗರ ಪಂಚಾಯತ್ ನ ಎದುರು ಕಾಂಗ್ರೆಸ್ ನ ಜನ ವಿರೋಧಿ ನೀತಿಯ ವಿರುದ್ದ ಬೃಹತ್ ಪ್ರತಿಭಟನೆ ಮಾಡುವಂತೆ ತಿಳಸಿದರು. ಈ ಪ್ರತಿಭಟನೆಯು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ನಡೆಯುತ್ತದೆ.ಇದು ಯಶಸ್ವಿಯಾಗಿ ನಡೆಸುವಂತೆ ವಿನಂತಿಸಿದರು.
ವಿಕಾಶ್ ಪುತ್ತೂರು ಮಾತಾನಾಡಿ ಭಾರತ ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಯಾವ ರೀತಿ ಸದೃಢವಾಗಿದೆ ಎಂಬುದನ್ನು ತಿಳಿಯಬೇಕಾಗಿದೆ.ಆರ್ಥಿಕವಾಗಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ.ಇದು ಮೋದಿಯಿಂದ ಸಾಧ್ಯವಾಗಿದೆ.