ಪುತ್ತೂರು ಹೃದಯ ಭಾಗ ನಗರಸಭೆಯ ಹತ್ತಿರ ಇರುವ ಮೀನು ಮಾರ್ಕೆಟ್ ಮತ್ತು ಮಾಂಸದ ಅಂಗಡಿಯಿಂದ ಆಗಿ ನೀರು ಚರಂಡಿ ಯಲ್ಲಿ ಬ್ಲಾಕ್ ಆಗಿರುದರಿಂದ ಮಾರ್ಕೆಟ್ ರೋಡ್ ಪರಿಸರವೆಲ್ಲ ಗಬ್ಬುನಾಥ ಬಿರುತಿದ್ದು ವಾಸನೆಯಿಂದ ಆಗಿ ಉಸಿರು ಆಡಲು ಕಷ್ಟವಾಗುತ್ತಿದೆ ನಗರಸಭೆ ಮೌನ.
ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಮುಚ್ಚಿ ಕೊಂಡು ಕೂತಿದ್ದುರೆ ಜನರಿಗೆ ಕೊಳಚೆ ನೀರಿನ ಸಂಪರ್ಕದಿಂದ ಚರ್ಮದ ಅಲರ್ಜಿ, ಖಜ್ಜಳಿ, ಇನ್ಫೆಕ್ಷನ್‌ಗಳು ಕಾಣಿಸಿಕೊಳ್ಳುತ್ತವೆ.ಕೊಳಚೆ ಚರಂಡಿಯು ಸರಿಯಾಗಿ ಹರಿಯದೆ ತಡೆಗೊಳ್ಳುವುದರಿಂದ ಸುತ್ತಮುತ್ತಲಿನ ಪರಿಸರ ದುರ್ವಾಸನೆಗೊಳಗಾಗುತ್ತದೆ. ಈ ರೀತಿಯ ಅಸೌಕರ್ಯವು ಕೇವಲ ಅಹಿತಕರ ವಾಸನೆಯಷ್ಟೇ ಅಲ್ಲದೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ದುರ್ವಾಸನೆಯಿಂದ ಉಂಟಾಗುವ ಅಮೋನಿಯಾ ಮತ್ತು ಮೀಥೇನ್ ಅನಿಲಗಳು ಉಸಿರಾಟದ ಸಮಸ್ಯೆ, ತಲೆನೋವು ಮತ್ತು ವಾಂತಿ ಉಂಟುಮಾಡಬಹುದು.ಮಕ್ಕಳು ಮತ್ತು ಹಿರಿಯರ ಮೇಲೆ ಹೆಚ್ಚು ಪ್ರಭಾವ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ರೋಗಗಳು ತೀವ್ರವಾಗಬಹುದು. ಆಗುವ ಕಿರಿ ಕಿರಿ ಮತ್ತು ಅನಾರೋಗ್ಯ ಬೀರುವ ಮೊದಲು ಚರಂಡಿಗೆ ಕ್ಲಿನ್ ಮಾಡಿಸಿ ಯಾರೇ ಎಂದು ಜನರಡಿಕೊಳ್ಳುತಿದಾರೆ. ಮುಖ್ಯಮಂತ್ರಿ ಯವರು ಸೋಮವಾರ ಪುತ್ತೂರು ಭೇಟಿ ನೀಡಲಿದ್ದು ಅದ್ಕು ಮೊದ್ಲು ಸರಿ ಆಗುದೇ ನಂಬಿಕೆ.
ಸ್ಥಳೀಯ ಮೀನು ಮಾರ್ಕೆಟ್ ಮತ್ತು ಮಾಂಸದ ಅಂಗಡಿಗಳಿಂದ ಹೊರಹೊಮ್ಮುವ ನೀರು ಸರಿಯಾಗಿ ಚರಂಡಿಗೆ ಹರಿಯದೆ ತಡೆಗೊಂಡ ಪರಿಣಾಮ, ಮಾರ್ಕೆಟ್ ರಸ್ತೆಯ ಸುತ್ತಮುತ್ತ ದುರ್ವಾಸನೆ ವ್ಯಾಪಿಸಿದೆ. ಚರಂಡಿಯ ಬ್ಲಾಕ್‌ನಿಂದಾಗಿ ಮಳೆ ನೀರಿನೂ ಸರಿಯಾಗಿ ಹರಿಯದಿದ್ದು, ಕೀಟಗಳು ಮತ್ತು ಹುಳಗಳ ವೃದ್ಧಿಯೂ ಕಾಣಿಸಿಕೊಂಡಿದೆ. ವ್ಯಾಪಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಅಧಿಕಾರಿಗಳ ಗಮನ ಸೆಳೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.