ಪುತ್ತೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2047ರ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳಲು ದೇಶವು ಆರ್ಥಿಕವಾಗಿ ಸಾಮಾಜಿಕವಾಗಿ ಆತ್ಮ ನಿರ್ಭರದ ಮೂಲಕ ಸ್ವಾವಲಂಬನೆಯಾದಾಗ ಗುರಿ ಮುಟ್ಟಲು ಸಾಧ್ಯ ಎಂದು ಮಾಜಿ ವಿಧಾನ ಪರಿಷತ್ತಿನ ಶಾಸಕರು ಹಾಗೂ ಮಾಜಿ ಸೈನಿಕರು ಆಗಿರುವಂತಹ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಹೇಳಿದರು.
ಅವರು ಪ್ರಗತಿ ಸಂಸ್ಥೆಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತದ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮಾತ್ರವಲ್ಲದೆ ಭಾರತದ ಪ್ರಗತಿಯಲ್ಲಿ ಯುವ ಜನತೆ ಅದರಲ್ಲೂ ವಿದ್ಯಾರ್ಥಿಗಳು ಸ್ವಂತಿಕೆಯ ಮೂಲಕ ಗುರಿಯ ಸಾಧನೆಯ ಕಡೆಗೆ ಇಷ್ಟಪಟ್ಟು ಕಲಿತು ಸ್ವಾವಲಂಬನೆಯ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಜೀವ ಮಟನ್ ರವರು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತ ಅಧಿಕಾರಿ ಹಾಗೂ ಪ್ರಾಂಶುಪಾಲರು ಆಗಿರುವ ಪ್ರೀತ ಹೆಗಡೆಯವರು ಉಪಸ್ಥಿತರಿದ್ದರು.
ಅದೇ ರೀತಿ ಶಿವಕುಮಾರ್ ಕಲ್ಲಿಮಾರ್,ದಯಾನಂದ ಶೆಟ್ಟಿ ಉಜ್ರೆಮಾರು, ನಗರಸಭಾ ಸದಸ್ಯೆ ದೀಕ್ಷಾ ಪೈ, ಸಂತೋಷ್ ಕೖಕರಾ, ನಾಗೇಂದ್ರ ಬಾಳಿಗ, ಮಣಿಕಂಠ, ಸುರೇಶ್ ಚಂದ್ರರೈ, ನಿರಂಜನ್ ಸುಮಿತ್ ಭಟ್, ನಿತೀಶ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಯುವರಾಜ್ ಪೆರಿಯತ್ತೋಡಿ, ಹಾಗೂ ಧನ್ಯವಾದ ಹರೀಶ್ ಬಿಜತ್ರೆಯವರು ಮತ್ತು ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.