ಪುತ್ತೂರು: ನಗರಸಭಾ ವ್ಯಾಪ್ತಿಯ ರಸ್ತೆಗಳಲ್ಲಿರುವ ಹೊಂಡ ಗುಂಡಿ ರಸ್ತೆ ಹೊಂಡಗಳನ್ನುಮುಚ್ಚುವ ಕಾಮಗಾರಿಗೆ ಚಾಲನೆ ದೊರಕಿದ್ದು, ದರ್ಬೆಯಿಂದ ಕಾಮಗಾರಿ ಪ್ರಾರಂಭಿಸಲಾಗಿದೆ.
ಕಳೆದ ವಾರದ ಹಿಂದೆ ಹೊಂಡ ಮುಚ್ಚುವಂತೆ ನಗರಸಭೆಗೆ ಶಾಸಕರು ಸೂಚನೆ ನೀಡಿದ್ದರು. ನಗರಸಭಾ ಅಧಿಕಾರಿಗಳ ಹಾಗೂ ಇಂಜಿನಿಯರ್ ಗಳ ನಿಧಾನಗತಿಯ ಬಗ್ಗೆ ಶಾಸಕರು ಆಕ್ರೋಶಗೊಂಡು ಭಾನುವಾರ ಕಮಿಷನರ್ ಅವರನ್ನು ತರಾಟೆಗೆ ಎತ್ತಿಕೊಂಡಿದ್ದು ಮೂರು ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ತಾಕೀತು ನೀಡಿದ್ದರು.
ಶಾಸಕರ ಎಚ್ಚರಿಕಾ ಫೋನ್ ಕರೆ ರಾಜ್ಯಾದ್ಯಂತ ವೈರಲ್ ಆಗಿತ್ತು. ಸೋಮವಾರದಿಂದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮಂಗಳವಾರ ದರ್ಬೆಯಿಂದ ಕಾಮಗಾರಿ ಆರಂಭಗೊಂಡು ಕಲ್ಲಾರೆ ತನಕ ಹೊಂಡ ಮುಚ್ಚುವ ಕಾಮಗಾರಿ ಪೂರ್ಣಗೊಂಡಿದೆ.
ಮೂರುದಿನ ಗಡುವು ನೀಡಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ರಸ್ತೆ ಹದಗೆಟ್ಟಿದೆಯೋ,ಹೊಂಡ ಬಿದ್ದಿದೆಯೋ ಅದೆಲ್ಲವನ್ನೂ ದುರಸ್ಥಿ ಮಾಡುವಂತೆ ಸೂಚನೆ ನೀಡಲಾಗಿದೆ. ಕೆಲವು ತಿಂಗಳಿಂದ ಜನ ಸಂಕಷ್ಟ ಎದುರಿಸುತ್ತಿದ್ದರು, ಮಳೆಯ ಕಾರಣಕ್ಕೆ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ಮೂರುದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಅಶೋಕ್ ರೈ, ಶಾಸಕರು ಪುತ್ತೂರು























