ಉಪ್ಪಿನಂಗಡಿ: ಬಾಲಕಿಯನ್ನು ಹಿಂಬಾಲಿಸಿಕೊಂಡು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೆರಿಯಡ್ಕ ನಿವಾಸಿ ಮುಹಮ್ಮದ್ ಮುಸ್ತಫ (40) ಬಂಧಿತ ಆರೋಪಿ. ಈತ ಎರಡು ತಿಂಗಳುಗಳಿಂದ ಬಾಲಕಿಯನ್ನು ಬಸ್ ನಿಲ್ದಾಣದಿಂದ ಹಿಂಬಾಲಿಸುತ್ತಿದ್ದ. ನ.29ರಂದು ಬಾಲಕಿಯನ್ನು ಮನೆಗೆ ಕರೆದಿದ್ದಾನೆ ಎಂದು ಬಾಲಕಿಯ ಸಹೋದರ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುಹಮ್ಮದ್ ಮುಸ್ತಫ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.























