• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

ಮಂಗಳೂರು ನಗರಕ್ಕೆ ಬೈಪಾಸ್‌ ಸಹಿತ ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ:ಚೌಟ

January 17, 2026
ಕರ್ನಾಟಕದಲ್ಲಿ ಬಿಯರ್‌‌ ಮಾರಾಟ ಭಾರೀ ಹೆಚ್ಚಳ!

ಕರ್ನಾಟಕದಲ್ಲಿ ಬಿಯರ್‌‌ ಮಾರಾಟ ಭಾರೀ ಹೆಚ್ಚಳ!

October 6, 2026
ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಆರ್ಯಾಪು ನಿವಾಸಿ ಶಿವಪ್ರಸಾದ್ ಬಂಧನ

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಆರ್ಯಾಪು ನಿವಾಸಿ ಶಿವಪ್ರಸಾದ್ ಬಂಧನ

October 6, 2026
ಅಶೋಕ ಜನಮನ 2026: ಪ್ರತೀ ಮನೆಗೂ ಆಮಂತ್ರಣವನ್ನು ನೀಡುತ್ತಿದ್ದೇನೆ – ಅಶೋಕ್ ಕುಮಾರ್ ರೈ

ಅಶೋಕ ಜನಮನ 2026: ಪ್ರತೀ ಮನೆಗೂ ಆಮಂತ್ರಣವನ್ನು ನೀಡುತ್ತಿದ್ದೇನೆ – ಅಶೋಕ್ ಕುಮಾರ್ ರೈ

October 6, 2026

ಬೊಳುವಾರು–ಹಾರಾಡಿ ರಸ್ತೆ ಮೂಲಕ ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಯಾವಾಗ?

October 6, 2026
ಬೆಳೆ ವಿಮೆ ಪರಿಹಾರದಲ್ಲಿ ಕಡಿತ: ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಉತ್ತರ ನೀಡುವ ಬದಲು ವಾಸ್ತವಾಂಶಗಳನ್ನು ರೈತರ ಮುಂದೆ ಬಹಿರಂಗಪಡಿಸಬೇಕು -ಅರುಣ್ ಕುಮಾರ್ ಪುತ್ತಿಲ

ಬೆಳೆ ವಿಮೆ ಪರಿಹಾರದಲ್ಲಿ ಕಡಿತ: ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಉತ್ತರ ನೀಡುವ ಬದಲು ವಾಸ್ತವಾಂಶಗಳನ್ನು ರೈತರ ಮುಂದೆ ಬಹಿರಂಗಪಡಿಸಬೇಕು -ಅರುಣ್ ಕುಮಾರ್ ಪುತ್ತಿಲ

October 6, 2026
ಟಿಪ್ಪರ್ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಟಿಪ್ಪರ್ ಚಾಲಕ ನೇಣು ಬಿಗಿದು ಆತ್ಮಹತ್ಯೆ

October 6, 2026
ಪಟಾಕಿ ಸ್ಪೋಟಗೊಂಡು ಗಾಯಗೊಂಡಿದ್ದ ಬಾಲಕನಿಗೆ ಮುಖ್ಯಮಂತ್ರಿ ಗಳ  ಪರಿಹಾರ ನಿಧಿಯಿಂದ ಒಂದು ಲಕ್ಷ ರೂ ಮಂಜೂರು : ಶಾಸಕ ಅಶೋಕ್ ರೈ

ಪಟಾಕಿ ಸ್ಪೋಟಗೊಂಡು ಗಾಯಗೊಂಡಿದ್ದ ಬಾಲಕನಿಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ ಮಂಜೂರು : ಶಾಸಕ ಅಶೋಕ್ ರೈ

October 5, 2026
ತಣ್ಣೀರುಪoತ : “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರಿಗೆ ಕಲ್ಲೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ.

ತಣ್ಣೀರುಪoತ : “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರಿಗೆ ಕಲ್ಲೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ.

October 5, 2026
ಪುತ್ತೂರಿನಲ್ಲಿ ನಡೆಯಲಿದೆ ವ್ಯೆಭವದ ಪುತ್ತೂರು ದಸರಾ : ಸೀತರಾಮ ರೈ ಕೆದಂಬಾಡಿಗುತ್ತು

ಪುತ್ತೂರಿನಲ್ಲಿ ನಡೆಯಲಿದೆ ವ್ಯೆಭವದ ಪುತ್ತೂರು ದಸರಾ : ಸೀತರಾಮ ರೈ ಕೆದಂಬಾಡಿಗುತ್ತು

October 5, 2026
ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

October 5, 2026
ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ!  ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ! ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

October 5, 2026
ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

October 5, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, October 6, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಆರ್ಯಾಪು ನಿವಾಸಿ ಶಿವಪ್ರಸಾದ್ ಬಂಧನ

    ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಆರ್ಯಾಪು ನಿವಾಸಿ ಶಿವಪ್ರಸಾದ್ ಬಂಧನ

    ಅಶೋಕ ಜನಮನ 2026: ಪ್ರತೀ ಮನೆಗೂ ಆಮಂತ್ರಣವನ್ನು ನೀಡುತ್ತಿದ್ದೇನೆ – ಅಶೋಕ್ ಕುಮಾರ್ ರೈ

    ಅಶೋಕ ಜನಮನ 2026: ಪ್ರತೀ ಮನೆಗೂ ಆಮಂತ್ರಣವನ್ನು ನೀಡುತ್ತಿದ್ದೇನೆ – ಅಶೋಕ್ ಕುಮಾರ್ ರೈ

    ಬೊಳುವಾರು–ಹಾರಾಡಿ ರಸ್ತೆ ಮೂಲಕ ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಯಾವಾಗ?

    ಬೆಳೆ ವಿಮೆ ಪರಿಹಾರದಲ್ಲಿ ಕಡಿತ: ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಉತ್ತರ ನೀಡುವ ಬದಲು ವಾಸ್ತವಾಂಶಗಳನ್ನು ರೈತರ ಮುಂದೆ ಬಹಿರಂಗಪಡಿಸಬೇಕು -ಅರುಣ್ ಕುಮಾರ್ ಪುತ್ತಿಲ

    ಬೆಳೆ ವಿಮೆ ಪರಿಹಾರದಲ್ಲಿ ಕಡಿತ: ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಉತ್ತರ ನೀಡುವ ಬದಲು ವಾಸ್ತವಾಂಶಗಳನ್ನು ರೈತರ ಮುಂದೆ ಬಹಿರಂಗಪಡಿಸಬೇಕು -ಅರುಣ್ ಕುಮಾರ್ ಪುತ್ತಿಲ

    ಟಿಪ್ಪರ್ ಚಾಲಕ ನೇಣು ಬಿಗಿದು ಆತ್ಮಹತ್ಯೆ

    ಟಿಪ್ಪರ್ ಚಾಲಕ ನೇಣು ಬಿಗಿದು ಆತ್ಮಹತ್ಯೆ

    ಪಟಾಕಿ ಸ್ಪೋಟಗೊಂಡು ಗಾಯಗೊಂಡಿದ್ದ ಬಾಲಕನಿಗೆ ಮುಖ್ಯಮಂತ್ರಿ ಗಳ  ಪರಿಹಾರ ನಿಧಿಯಿಂದ ಒಂದು ಲಕ್ಷ ರೂ ಮಂಜೂರು : ಶಾಸಕ ಅಶೋಕ್ ರೈ

    ಪಟಾಕಿ ಸ್ಪೋಟಗೊಂಡು ಗಾಯಗೊಂಡಿದ್ದ ಬಾಲಕನಿಗೆ ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ ಮಂಜೂರು : ಶಾಸಕ ಅಶೋಕ್ ರೈ

    ತಣ್ಣೀರುಪoತ : “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರಿಗೆ ಕಲ್ಲೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ.

    ತಣ್ಣೀರುಪoತ : “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರಿಗೆ ಕಲ್ಲೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ.

    ಪುತ್ತೂರಿನಲ್ಲಿ ನಡೆಯಲಿದೆ ವ್ಯೆಭವದ ಪುತ್ತೂರು ದಸರಾ : ಸೀತರಾಮ ರೈ ಕೆದಂಬಾಡಿಗುತ್ತು

    ಪುತ್ತೂರಿನಲ್ಲಿ ನಡೆಯಲಿದೆ ವ್ಯೆಭವದ ಪುತ್ತೂರು ದಸರಾ : ಸೀತರಾಮ ರೈ ಕೆದಂಬಾಡಿಗುತ್ತು

    ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

    ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಮಂಗಳೂರು

ಮಂಗಳೂರು ನಗರಕ್ಕೆ ಬೈಪಾಸ್‌ ಸಹಿತ ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ:ಚೌಟ

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪರಿಶ್ರಮಕ್ಕೆ ದೊಡ್ಡ ಮಟ್ಟದ ಯಶಸ್ಸು

by ಪ್ರಜಾಧ್ವನಿ ನ್ಯೂಸ್
January 17, 2026
in ಮಂಗಳೂರು
0
ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ
34
SHARES
97
VIEWS
ShareShareShare

ಮಂಗಳೂರು: ಕರಾವಳಿ ಕರ್ನಾಟಕದ ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿ, ಮಂಗಳೂರು ಬೈಪಾಸ್‌ ಮೂಲಕ ಹಾದು ಹೋಗುವ ಸುರತ್ಕಲ್–ಬಿ.ಸಿ.ರೋಡ್‌ ಹೆದ್ದಾರಿ ಅಗಲೀಕರಣ ಹಾಗೂ ತಲಪಾಡಿಯಿಂದ ಕುಂದಾಪುರದವರೆಗಿನ ಎನ್‌ಎಚ್–66ರ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸಲು ಇದೀಗ ಅನುಮೋದನೆ ದೊರೆತಿದೆ. ಆ ಮೂಲಕ, ಕರಾವಳಿ ಜನರ ಬಹು ದಿನಗಳ ಬೇಡಿಕೆ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪರಿಶ್ರಮಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ.

Rosemac bowlar

ಜಾಹೀರಾತು

ಈ ಹೆದ್ದಾರಿಗಳು ಮಂಗಳೂರು ನಗರ ಪ್ರವೇಶಿಸುವ ಹೆಬ್ಬಾಗಿಲಾಗಿ ಪ್ರತಿನಿತ್ಯವೂ ನೂರಾರು ಪ್ರಯಾಣಿಕರ ಸಂಚಾರಕ್ಕೆ ಪ್ರಮುಖ ಸಂಪರ್ಕ ರಸ್ತೆಗಳಾಗಿವೆ. ಜತೆಗೆ, ಕರಾವಳಿಯ ವಾಣಿಜ್ಯ ಚಟುವಟಿಕೆಗಳ ಹಬ್‌ ಆಗಿರುವ ಬಂದರಿಗೆ ಸರಕು ಸಾಗಣೆ ಹಾಗೂ ಭಾರೀ ವಾಹನಗಳ ಓಡಾಟಕ್ಕೂ ಪ್ರಮುಖ ಸಂಪರ್ಕ ಕೊಂಡಿಯಾಗಿ ಈ ಹೆದ್ದಾರಿಗಳು ಗುರುತಿಸಿಕೊಂಡಿವೆ. ಆದರೆ, ಬಿಸಿ ರೋಡ್‌-ಸುರತ್ಕಲ್‌ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಜತೆಗೆ ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್‌ ರಸ್ತೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆ ಕೂಡ ಆಗಿತ್ತು.

ಅದರಂತೆ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸಂಸದ ಕ್ಯಾ. ಚೌಟ ಅವರು ಅಧಿಕಾರ ಸ್ವೀಕರಿಸಿದ ಬಳಿಕಧೀರ್ಘಕಾಲದಿಂದ ಬಾಕಿಯಿದ್ದ ಯೋಜನೆಗೆ ಅನುಮೋದನೆ ಪಡೆದು ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ನಿರಂತರ ಪ್ರಯತ್ನ ನಡೆಸಿದ್ದರು. 2024ರ ಜೂನ್‌ನಲ್ಲಿ ನಡೆದ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನಯ್‌ ಕುಮಾರ್‌ ಅವರನ್ನು ಭೇಟಿಯಾಗಿ, ಬಿ.ಸಿ.ರೋಡ್‌ನಿಂದ ಸುರತ್ಕಲ್‌ವರೆಗಿನ ಎನ್‌ಎಚ್–66ರಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸುವುದರ ಅಗತ್ಯತೆಯನ್ನು ಗಮನಕ್ಕೆ ತಂದಿದ್ದರು. ಬಳಿಕ 2024ರ ಸೆಪ್ಟೆಂಬರ್‌ 13ರಂದು ಮಂಗಳೂರಿನಲ್ಲಿ ನಡೆದ “ದಿಶಾ” ಸಮಿತಿ ಸಭೆಯಲ್ಲಿ ಮಂಗಳೂರು ಬೈಪಾಸ್‌ ಯೋಜನೆಯನ್ನು ಆದ್ಯತೆ ಮೇರೆಗೆ ಪ್ರಸ್ತಾಪಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸ್ಪಷ್ಟ ಕ್ರಮಕ್ಕೆ ಒತ್ತಾಯಿಸಿದ್ದರು. ಅಲ್ಲದೆ, ಈ ವಿಷಯಗಳ ಕುರಿತು ಕ್ಯಾಪ್ಟನ್ ಚೌಟ ಅವರು NHA ನ ಪ್ರಾದೇಶಿಕ ಅಧಿಕಾರಿಗಳಿಗೂ 2024ರ ಅಕ್ಟೋಬರ್‌ನಲ್ಲಿ ಪತ್ರವನ್ನು ಬರೆದು ಒತ್ತಾಯಿಸಿದ್ದರು.

ಹೀಗೆ, ಸಂಸದರ ಕಚೇರಿಯ ನಿರಂತರ ಫಾಲೋಅಪ್‌ನ ಫಲವಾಗಿ ಇದೀಗ ಈ ಪ್ರಮುಖ ಬೇಡಿಕೆಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಡಿಪಿಆರ್ ತಯಾರಿಕೆಗೆ ಹೆದ್ದಾರಿ ಸಚಿವಾಲಯದಿಂದ ಅನುಮೋದನೆ ದೊರೆತಿದೆ. ಆ ಮೂಲಕ ಡಿಪಿಆರ್‌ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕನ್ಸೆಲ್ಟೆಂಟ್‌ಗಳಿಗೆ ಕೆಲಸ ಪ್ರಾರಂಭಿಸುವುದಕ್ಕೆ ಅಧಿಕೃತ ನೋಟಿಸ್‌ ನೀಡಲಾಗಿದೆ. ಡಿಪಿಆರ್‌ನಲ್ಲಿ ರಸ್ತೆ ಅಲೈನ್‌ಮೆಂಟ್‌, ಸರ್ವೀಸ್‌ ರಸ್ತೆ, ಗ್ರೇಡ್‌ ಸೆಪರೇಟೆಡ್‌ ಜಂಕ್ಷನ್‌ಗಳು, ಹೆದ್ದಾರಿಯ ಸಾಮರ್ಥ್ಯ ವೃದ್ಧಿ, ರಸ್ತೆ ಸುರಕ್ಷತೆ ಹಾಗೂ ದೀರ್ಘಾವಧಿಯ ಸಂಚಾರ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಲಾಗುತ್ತದೆ.

ಡಿಪಿಆರ್‌ಗೆ ಅನುಮೋದನೆ ಲಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು, “ಇದು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ಸುವ್ಯವಸ್ಥಿತವಾದ ಯೋಜನೆಯತ್ತ ಸಾಗುವ ಮಹತ್ವದ ಮೈಲಿಗಲ್ಲು ಆಗಿದೆ. ಈ ಡಿಪಿಆರ್ ಅನುಮೋದನೆಯಿಂದ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ತಾಂತ್ರಿಕ ಮತ್ತು ಆಡಳಿತಾತ್ಮಕ ನೆಲೆ ಸಿದ್ಧವಾಗಲಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಈ ಭಾಗದ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದಕ್ಕೆ ಡಿಪಿಆರ್‌ ಅನುಮೋದಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಜತೆಗೆ ಬಂದರು ಆಧಾರಿತ ಅಭಿವೃದ್ಧಿ, ಪ್ರಯಾಣಿಕರ ಸುರಕ್ಷತೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಆತ್ಮನಿರ್ಭರ, ವಿಕಸಿತ ಭಾರತ ಕನಸು ನನಸುಗೊಳಿಸುವಲ್ಲಿ ಈ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಕ್ಯಾಪ್ಟನ್‌ ಚೌಟ ಹೇಳಿದ್ದಾರೆ.

ಮಂಗಳೂರು ನಗರಕ್ಕೆ ಬೈಪಾಸ್‌
ಬಿಸಿ ರೋಡ್‌ನಿಂದ ಪಡೀಲ್‌-ನಂತೂರು ವೃತ್ತದ ಮೂಲಕ ಹಾದು ಹೋಗುವ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದರಿಂದ ಮಂಗಳೂರು ನಗರಕ್ಕೂ ಬೈಪಾಸ್‌ ರಸ್ತೆಯ ಅನುಕೂಲ ದೊರೆಯಲಿದೆ. ಈ ಯೋಜನೆಯಡಿ ಮಂಗಳೂರು ಬೈಪಾಸ್‌ ಅಭಿವೃದ್ಧಿಯಾಗುವುದರಿಂದ ನಂತೂರು ಭಾಗದ ವಾಹನ ದಟ್ಟನೆ ಹಾಗೂ ಇತರೆ ಕೆಲವೊಂದು ಸಂಚಾರ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.

LOTUS TRAVEL

ಜಾಹೀರಾತು

ಸುರತ್ಕಲ್‌-ಬಿಸಿರೋಡ್‌ ಹೆದ್ದಾರಿ ಮೇಲ್ದರ್ಜೆಗೆ
ಸುರತ್ಕಲ್‌-ಬಿಸಿ ರೋಡ್‌ವರೆಗಿನ ಹೆದ್ದಾರಿ ವ್ಯಾಪ್ತಿಯು ಕ್ಯಾ.ಚೌಟ ಅವರ ಸತತ ಪ್ರಯತ್ನದ ಫಲವಾಗಿ ಈಗಾಗಲೇ ಎನ್‌ಎಚ್‌ಎಲ್‌ಎಂಎಲ್‌ ವ್ಯಾಪ್ತಿಯಿಂದ ಎನ್‌ಎಚ್‌ಎಐಗೆ ಹಸ್ತಾಂತರಗೊಂಡಿದೆ. ಇದೀಗ ಈ ಹೆದ್ದಾರಿಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಜತೆಗೆ ರಸ್ತೆ ಸುರಕ್ಷತಾ ವ್ಯವಸ್ಥೆ ಅಳವಡಿಸುವ ಹಿನ್ನಲೆಯಲ್ಲಿ ಡಿಪಿಆರ್‌ ಅನುಮೋದನೆಯು ಮಹತ್ವದ ಹೆಜ್ಜೆಯಾಗಿದೆ. ಈ ಹೆದ್ದಾರಿ ಅಗಲೀಕರಣವಾಗದೆ ಸಾಕಷ್ಟು ಸಂಚಾರ ದಟ್ಟನೆಗೂ ಕಾರಣವಾಗಿದೆ. ಜತೆಗೆ, ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾದ ಕಾರಣ ಸರಕು ವಾಹನಗಳ ಸುಗಮ ಸಂಚಾರಕ್ಕೂ ಸವಾಲುಗಳು ಎದುರಾಗುತ್ತಿವೆ. ಹೀಗಿರುವಾಗ, ಸುರತ್ಕಲ್‌-ಬಿಸಿ ರೋಡ್‌ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಈ ಡಿಪಿಆರ್‌ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.

ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್‌ ರಸ್ತೆ
ಈ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದವರೆಗೆ ಹೊಸದಾಗಿ ಪ್ರತ್ಯೇಕ ಸರ್ವೀಸ್‌ ರಸ್ತೆ ನಿರ್ಮಾಣವಾಗಲಿದೆ. ಪ್ರಸ್ತುತ ಈ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆಯಿಲ್ಲದ ಕಾರಣ ಸ್ಥಳೀಯರಿಗೂ ಹಾಗೂ ಇತರೆ ಸಾರ್ವಜನಿಕರಿಗೂ ಸಾಕಷ್ಟು ಅನಾನುಕೂಲವಾಗುತ್ತಿದ್ದು, ರಸ್ತೆ ಸುರಕ್ಷತೆಗೂ ಹತ್ತಾರು ಸವಾಲುಗಳು ಎದುರಾಗಿವೆ. ಈಗ ಡಿಪಿಆರ್‌ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ.

ಜಾಹೀರಾತು

ಬೈಕಂಪಾಡಿಯಲ್ಲಿ ಎಲಿವೇಟೆಡ್‌ ರಸ್ತೆ
ಈ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಈಗಾಗಲೇ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯಿಂದ ಬೈಕಂಪಾಡಿವರೆಗೆ ಎಲಿವೇಟೆಡ್‌ ರಸ್ತೆ ಕೂಡ ನಿರ್ಮಾಣವಾಗಲಿದೆ. ಈ ಯೋಜನೆಗೆ ಈಗಾಗಲೇ ಡಿಪಿಆರ್‌ ತಯಾರು ಆಗಿದ್ದು, ಟೆಂಡರ್ ಹಂತಕ್ಕೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಎಲ್ಲ ಹೆದ್ದಾರಿ ಯೋಜನೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಈ ಡಿಪಿಆರ್‌ ಅನುಮೋದನೆಯು ಮಹತ್ವದ ಹೆಜ್ಜೆಯಾಗುವ ಮೂಲಕ ಕರಾವಳಿಯ ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಬಲ ದೊರೆಯಲಿದೆ.

SendShare14Share
Previous Post

ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸದೇ ಬಜತ್ತೂರಿನಲ್ಲಿ ಹೊಸ ಟೋಲ್ ಆರಂಭಿಸಿದರೆ ಉಗ್ರ ಹೋರಾಟ: ಎಸ್‌ಡಿಪಿಐ ಅನ್ವರ್ ಸಾದತ್ ಎಚ್ಚರಿಕೆ

Next Post

ಕುಕ್ಕೆಡಿ ಅಂಬೇಡ್ಕರ್ ಭವನದ ನವೀಕೃತ ಕಟ್ಟಡ ಉದ್ಘಾಟನೆ. ಮತ್ತು ಹಕ್ಕುಪತ್ರ ವಿತರಣಾ ಸಮಾರಂಭ ಉಸ್ತುವಾರಿ ಸಚಿವರ ಬಾಗಿ: ರಕ್ಷಿತ್ ಶಿವರಾಂ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..