• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

October 5, 2026
ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

October 5, 2026
ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ!  ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ! ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

October 5, 2026

ಪುತ್ತೂರಿನಲ್ಲಿ ಕಿದ್ವಾಯಿ ನಿಮ್ಹಾನ್ಸ್, ಜಯದೇವ ಸಂಸ್ಥೆಗಳ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಆಗ್ರಹ

October 5, 2026
ಪುತ್ತೂರಿನಲ್ಲಿ ಪ್ರಪ್ರಥಮ ಭಾರಿಗೆ ನಡೆಯಲಿರುವ ಗಿರಿಜಾ ಕಲ್ಯಾಣೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರಿನಲ್ಲಿ ಪ್ರಪ್ರಥಮ ಭಾರಿಗೆ ನಡೆಯಲಿರುವ ಗಿರಿಜಾ ಕಲ್ಯಾಣೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

October 5, 2026
ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಯಿಂದ ಗಾಂಧಾರಿ ವಿದ್ಯೆ ತರಗತಿ ಆರಂಭ ಆಸಕ್ತಿ ಇದ್ದವರಿ ಅವಕಾಶ

ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಯಿಂದ ಗಾಂಧಾರಿ ವಿದ್ಯೆ ತರಗತಿ ಆರಂಭ ಆಸಕ್ತಿ ಇದ್ದವರಿ ಅವಕಾಶ

October 5, 2026
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಾರ್ಷಿಕ ಇದರ ಮಹಾ ಸಭೆ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಾರ್ಷಿಕ ಇದರ ಮಹಾ ಸಭೆ

October 5, 2026
ಸಾಹಿತಿ, ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಭಟ್ ಆರ್ತಿಕಜೆ ನಿಧನ

ಸಾಹಿತಿ, ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಭಟ್ ಆರ್ತಿಕಜೆ ನಿಧನ

October 3, 2026
ಜೈಲಿನಲ್ಲಿ ಪುನೀತ್ ಕೆರೆಹಳ್ಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆಂಬ ಸುಳ್ಳು ಸುದ್ದಿ ಹಬ್ಬಿಸಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಕೇಸ್!

ಜೈಲಿನಲ್ಲಿ ಪುನೀತ್ ಕೆರೆಹಳ್ಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆಂಬ ಸುಳ್ಳು ಸುದ್ದಿ ಹಬ್ಬಿಸಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಕೇಸ್!

October 3, 2026
ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕರೆಂಟ್ ಶಾಕ್‌ಗೆ ಲೈನ್‌ಮ್ಯಾನ್ ಬಲಿ

ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕರೆಂಟ್ ಶಾಕ್‌ಗೆ ಲೈನ್‌ಮ್ಯಾನ್ ಬಲಿ

October 3, 2026
ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ನೋಟು ವಶ – 7 ಮಂದಿ ಆರೋಪಿಗಳ ಬಂಧನ

ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ನೋಟು ವಶ – 7 ಮಂದಿ ಆರೋಪಿಗಳ ಬಂಧನ

October 3, 2026
ಮೈಸೂರು ಕಂಬಳಕ್ಕೆ ಆಕ್ಷೇಪ- ಮೈಸೂರಿನಲ್ಲಿ ಕಂಬಳ ನಡೆಸಿದರೆ ದೈವಕೋಪ ಎದುರಿಸಬೇಕಾಗುತ್ತದೆ: ತಮ್ಮಣ್ಣ ಶೆಟ್ಟಿ

ಮೈಸೂರು ಕಂಬಳಕ್ಕೆ ಆಕ್ಷೇಪ- ಮೈಸೂರಿನಲ್ಲಿ ಕಂಬಳ ನಡೆಸಿದರೆ ದೈವಕೋಪ ಎದುರಿಸಬೇಕಾಗುತ್ತದೆ: ತಮ್ಮಣ್ಣ ಶೆಟ್ಟಿ

October 3, 2026
ಮೈಸೂರು ಕಂಬಳಕ್ಕೆ ಬರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿ!

ಮೈಸೂರು ಕಂಬಳಕ್ಕೆ ಬರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿ!

October 3, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, October 5, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

    ಮುಳಿಯ ಜ್ಯುವೆಲ್ಲರ್ಸ್ ಮಾಲಕ ಶ್ಯಾಮ ಭಟ್ ನಿಧನ

    ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ!  ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

    ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ! ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

    ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

    ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

    ಪುತ್ತೂರಿನಲ್ಲಿ ಕಿದ್ವಾಯಿ ನಿಮ್ಹಾನ್ಸ್, ಜಯದೇವ ಸಂಸ್ಥೆಗಳ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಆಗ್ರಹ

    ಪುತ್ತೂರಿನಲ್ಲಿ ಪ್ರಪ್ರಥಮ ಭಾರಿಗೆ ನಡೆಯಲಿರುವ ಗಿರಿಜಾ ಕಲ್ಯಾಣೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತೂರಿನಲ್ಲಿ ಪ್ರಪ್ರಥಮ ಭಾರಿಗೆ ನಡೆಯಲಿರುವ ಗಿರಿಜಾ ಕಲ್ಯಾಣೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಯಿಂದ ಗಾಂಧಾರಿ ವಿದ್ಯೆ ತರಗತಿ ಆರಂಭ ಆಸಕ್ತಿ ಇದ್ದವರಿ ಅವಕಾಶ

    ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಯಿಂದ ಗಾಂಧಾರಿ ವಿದ್ಯೆ ತರಗತಿ ಆರಂಭ ಆಸಕ್ತಿ ಇದ್ದವರಿ ಅವಕಾಶ

    ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಾರ್ಷಿಕ ಇದರ ಮಹಾ ಸಭೆ

    ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಾರ್ಷಿಕ ಇದರ ಮಹಾ ಸಭೆ

    ಸಾಹಿತಿ, ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಭಟ್ ಆರ್ತಿಕಜೆ ನಿಧನ

    ಸಾಹಿತಿ, ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಭಟ್ ಆರ್ತಿಕಜೆ ನಿಧನ

    ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕರೆಂಟ್ ಶಾಕ್‌ಗೆ ಲೈನ್‌ಮ್ಯಾನ್ ಬಲಿ

    ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕರೆಂಟ್ ಶಾಕ್‌ಗೆ ಲೈನ್‌ಮ್ಯಾನ್ ಬಲಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್

by ಪ್ರಜಾಧ್ವನಿ ನ್ಯೂಸ್
October 5, 2026
in ಪುತ್ತೂರು
0
ಪುತ್ತೂರು: ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಪ್ಲಾನರಿ ಯ ಎಸ್. ಕೆ. ಆನಂದ್
9
SHARES
26
VIEWS
ShareShareShare
ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಗೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ, ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಶ್ರೀ ಎಸ್. ಕೆ. ಆನಂದ್ ಅವರು ಆಯ್ಕೆಯಾಗಿದ್ದಾರೆ. ಡಾ. ಶಿವರಾಮ ಕಾರಂತರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ವೈಜ್ಞಾನಿಕ ಮನೋಭಾವ, ಪ್ರಾಯೋಗಿಕ ಪರಿಸರ ಕಾಳಜಿ ಮತ್ತು ಸುಸ್ಥಿರ ಜೀವನ ಶೈಲಿಯನ್ನು ತಮ್ಮ ವೃತ್ತಿಬದುಕಿನಲ್ಲಿ ಅಕ್ಷರಶಃ ಸಾಕಾರಗೊಳಿಸಿದ ವಿಶಿಷ್ಟ ಸಾಧಕ ಎಸ್. ಕೆ. ಆನಂದ್. ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ‘ಕಾಂಕೂಡ್’ ಎಂಬ ಪರ್ಯಾಯ ವಸ್ತುವನ್ನು ಆವಿಷ್ಕರಿಸಿ, ದೇಶದಲ್ಲೇ ಬೃಹತ್ ವೃಕ್ಷ ರಕ್ಷಣಾ ಕ್ರಾಂತಿ ನಡೆಸಿದ ಅಪೂರ್ವ ಕೊಡುಗೆಗಾಗಿ ಈ ಅತ್ಯುನ್ನತ ರಾಜ್ಯ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ.
1951ರಲ್ಲಿ ಪುತ್ತೂರಿನಲ್ಲಿ ಜನಿಸಿದ ಎಸ್. ಕೆ. ಆನಂದ್ ಅವರು ಕರಾವಳಿಯ ಇಂಜಿನಿಯರಿಂಗ್ ಕ್ಷೇತ್ರದ ಹಿರಿಯ ಚೇತನ ದಿವಂಗತ ಎಸ್. ಕೆ. ಈಶ್ವರ ಭಟ್ ಮತ್ತು ಶ್ರೀಮತಿ ಶಾರದಾ ಭಟ್ ದಂಪತಿಯ ಪುತ್ರ. ಮಂಗಳೂರಿನ ಪ್ರತಿಷ್ಠಿತ ಕೆ.ಆರ್.ಇ.ಸಿ (ಪ್ರಸ್ತುತ NITK, ಸುರತ್ಕಲ್) ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಎಂಟೆಕ್ (M.Tech) ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದರು. ಶಿಕ್ಷಣ ಮುಗಿದ ತಕ್ಷಣವೇ ಉನ್ನತ ಅವಕಾಶಗಳಿದ್ದರೂ ದೊಡ್ಡ ನಗರಗಳ ಕಡೆಗೆ ಮುಖ ಮಾಡದೆ, ತವರೂರು ಪುತ್ತೂರಿನಲ್ಲೇ ನೆಲೆಸಿ, ತಂದೆಯವರು ಸ್ಥಾಪಿಸಿದ್ದ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಜವಾಬ್ದಾರಿಯನ್ನು 1975ರಲ್ಲಿ ವಹಿಸಿಕೊಂಡರು. ಪ್ರಸ್ತುತ 76ನೇ ವಯಸ್ಸಿನಲ್ಲೂ ಸುಸ್ಥಿರ ನಿರ್ಮಾಣ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಮನೆ, ಕಚೇರಿ, ಶಾಲಾ-ಕಾಲೇಜುಗಳ ನಿರ್ಮಾಣದಲ್ಲಿ ದಾರಂದಗಳು, ಕಿಟಕಿಗಳು, ಮೇಲ್ಛಾವಣಿಯ ತೊಲೆಗಳು ಹಾಗೂ ಬೆಂಚ್-ಡೆಸ್ಕ್‌ಗಳಿಗಾಗಿ ಕಾಡಿನ ಅಪಾರ ಪ್ರಮಾಣದ ಬೆಲೆಬಾಳುವ ಮರಮುಟ್ಟುಗಳನ್ನು ಕಡಿಯಲಾಗುತ್ತಿತ್ತು. ಕೆಲವೇ ವರ್ಷಗಳಲ್ಲಿ ಮರ ಕೊಳೆತು ಗೆದ್ದಲು ಹಿಡಿಯುವುದರಿಂದ ಮತ್ತೆ ಮರಗಳನ್ನು ಕಡಿಯುವ ಚಕ್ರ ನಿರಂತರವಾಗಿ ನಡೆಯುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಹಾಗೂ ಪರಿಸರಸ್ನೇಹಿ ಪರಿಹಾರ ಕಂಡುಕೊಳ್ಳಲು ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೇಲೆ ಸುದೀರ್ಘ ಸಂಶೋಧನೆ ನಡೆಸಿ, ಮರದ ಬಲದಲ್ಲೇ ರೂಪುಗೊಳ್ಳುವ ಕಾಂಕ್ರೀಟ್ ಉತ್ಪನ್ನಗಳನ್ನು ರೂಪಿಸಿದರು.
‘ಕಾಂಕೂಡ್’ (Concood™) ಅಂದರೆ ಅರ್ಥಾತ್ ಮರಕ್ಕೆ ಸಂಪೂರ್ಣ ಪರ್ಯಾಯವಾದ ಕಾಂಕ್ರೀಟ್ ಉತ್ಪನ್ನಗಳು. ಬಹುಶಃ ಮರಕ್ಕೆ ಪರ್ಯಾಯವಾದ ಇಂತಹ ಕಾಂಪೋಸಿಟ್ ಕಲ್ಪನೆಯು ಭಾರತದಲ್ಲೇ ಪ್ರಥಮ ಬಾರಿಗೆ ಇವರ ಸಂಸ್ಥೆಯಿಂದಲೇ ಆರಂಭವಾಯಿತು ಎಂದು ಹೆಮ್ಮೆಯಿಂದ ಹೇಳಬಹುದು. ತಮ್ಮ ಈ ವಿನೂತನ ಸಂಶೋಧನೆ ‘ಕಾಂಕೊಡ್’ ಪದಕ್ಕೆ 2007ರಲ್ಲೇ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯನ್ನೂ ಪಡೆದಿದ್ದಾರೆ.
*ಅಪಾರ ವೃಕ್ಷ ಸಂರಕ್ಷಣೆಯ ಮಹಾ ಲೆಕ್ಕಾಚಾರ:*
ಜಾಗತಿಕ ಪರಿಸರ ವಿಜ್ಞಾನದ ತತ್ವದಂತೆ ಕಾಡಿನ ಮರಗಳನ್ನು ನೆಟ್ಟು ಬೆಳೆಸುವುದು (Afforestation) ಎಷ್ಟು ಮಹತ್ವದ್ದೋ, ಬೆಳೆದ ಅತ್ಯಂತ ಬೆಲೆಬಾಳುವ ವೃಕ್ಷಗಳು ಕೊಡಲಿಗೆ ಬಲಿಯಾಗದಂತೆ ತಡೆ ಒಡ್ಡುವುದು (Avoided Deforestation) ಅಷ್ಟೇ ಶ್ರೇಷ್ಠ ಹಾಗೂ ಪ್ರಭಾವಶಾಲಿ ಪರಿಸರ ಸೇವೆಯಾಗಿದೆ.
ಸಾಮಾನ್ಯವಾಗಿ ಒಂದು ಬೆಳೆದ ಮರವು ನಿರ್ಮಾಣ ಕಾರ್ಯಗಳಿಗೆ ಸುಮಾರು 10 ಸಿ.ಎಫ್.ಟಿ (CFT) ಯೋಗ್ಯ ಉತ್ಪನ್ನಗಳನ್ನು ನೀಡುತ್ತದೆ. ಎಸ್. ಕೆ. ಆನಂದ್ ಅವರ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಲ್ಲಿ ಪ್ರತಿದಿನ ಸರಾಸರಿ ಸುಮಾರು 200 CFT ಗೂ ಅಧಿಕ ಕಾಂಕ್ರೀಟ್ ಪರಿಕರಗಳು ಉತ್ಪಾದನೆಯಾಗುತ್ತವೆ. ಈ ಲೆಕ್ಕಾಚಾರದಂತೆ ಪ್ರತಿದಿನ ಸುಮಾರು 20 ಬೆಳೆದ ದೊಡ್ಡ ಮರಗಳು ಕಡಿಯುವುದು ತಪ್ಪುತ್ತದೆ. ಈ ಕಾರ್ಯವನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಆನಂದ್ ಅವರ ಸಂಸ್ಥೆಯು, ಈವರೆಗೆ ಸುಮಾರು 36,50,000 (36.5 ಲಕ್ಷ) ಕ್ಕೂ ಅಧಿಕ ಬೃಹತ್ ಮರಗಳನ್ನು ಕೊಡಲಿಗೆ ಬಲಿಯಾಗದಂತೆ ಕಾಪಾಡಿ ಬೃಹತ್ ಅರಣ್ಯವನ್ನೇ ರಕ್ಷಿಸಿದ ಐತಿಹಾಸಿಕ ಸಾಧನೆ ಮಾಡಿದೆ.
ರಾಜ್ಯದ ಹಲವಾರು ಪ್ರತಿಷ್ಠಿತ ಶಾಲಾ-ಕಾಲೇಜುಗಳು ಮರದ ಬೆಂಚ್ ಬದಲು ಇವರ ‘ಕಾಂಕೂಡ್’ ಬೆಂಚ್‌‌ಗಳನ್ನು ಅಳವಡಿಸಿಕೊಂಡಿವೆ. ‘ಪದ್ಮಶ್ರೀ’ ಗಿರೀಶ್ ಭಾರದ್ವಾಜ್ ಅವರು ದೇಶಾದ್ಯಂತ ನಿರ್ಮಿಸಿದ 30ಕ್ಕೂ ಹೆಚ್ಚು ತೂಗು ಸೇತುವೆಗಳಿಗೆ ಮರದ ಹಲಗೆಗಳ ಬದಲಿಗೆ ಆನಂದ್ ಅವರ ‘ಕಾಂಕೂಡ್’ ಪರಿಕರಗಳನ್ನೇ ಬಳಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ,ಕರ್ನಾಟಕ ಅರಣ್ಯ ಇಲಾಖೆ ಹಾಗೂ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಗೂ ಈ ತಂತ್ರಜ್ಞಾನ ವಿಸ್ತರಿಸಿದ್ದು, ಇಂದು ಇವರ ಬಳಿ 250ಕ್ಕೂ ಅಧಿಕ ಕಾಂಕ್ರೀಟ್ ಪರಿಕರಗಳು ಲಭ್ಯವಿವೆ.
*50 ಎಕರೆಗೂ ಅಧಿಕ ಹಸಿರು ಕಾಡು ಹಾಗೂ ಅಪೂರ್ವ ಸಾಮಾಜಿಕ ಕಾಳಜಿ:*
ಕೇವಲ ಮರಗಳನ್ನು ರಕ್ಷಿಸುವುದಷ್ಟೇ ಅಲ್ಲದೆ, ವೈಯಕ್ತಿಕವಾಗಿ ಸೊರಕೆಯಲ್ಲಿ ಹಾಗೂ ಕುಡಿಪಾಡಿಯಲ್ಲಿ ಕುಡಿಕಾಡು ಎಂಬ ಹೆಸರಿನಲ್ಲಿ 50 ಎಕರೆಗೂ ಹೆಚ್ಚು ವಿಸ್ತೀರ್ಣದ ಸ್ಥಳದಲ್ಲಿ ಸಾವಿರಾರು ಅತ್ಯಮೂಲ್ಯ ಗಿಡ-ಮರಗಳನ್ನು ಬೆಳೆಸಿ ಕಣ್ಣು ತಣ್ಣಗಾಗಿಸುವ ಹಸಿರು ಕಾಡನ್ನು ಸೃಷ್ಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಡಿ 9 ಕೇಂದ್ರಗಳಲ್ಲಿ 24 ಸಂಸ್ಥೆಗಳ ಮೂಲಕ 800ಕ್ಕೂ ಅಧಿಕ ಸ್ಥಳೀಯರಿಗೆ (ಇದರಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಹಾಗೂ 20 ಕ್ಕೂ ಅಧಿಕ ಭಿನ್ನಸಾಮರ್ಥ್ಯ ಹೊಂದಿದವರು) ನೇರ ಉದ್ಯೋಗ ನೀಡಿದ್ದಾರೆ. ಪರೋಕ್ಷವಾಗಿ 3000ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ್ದಾರೆ. ವಿಶೇಷವೆಂದರೆ, ತಮ್ಮ ಸಂಸ್ಥೆಯ ಆವರಣದಲ್ಲೇ ಕೆಲಸ ಮಾಡುವ ಸಿಬ್ಬಂದಿಗಳ ಮಕ್ಕಳ ಪಾಲನೆಗಾಗಿ ‘ಅಂಗನವಾಡಿ’ ಮಾದರಿಯ ವಿಶಿಷ್ಟ ಪ್ಲೇ ಸ್ಕೂಲ್ (Play School) ಪ್ರಾರಂಭಿಸಿ, ಕಾರ್ಮಿಕರ ಮಕ್ಕಳ ಆರೈಕೆ ಹಾಗೂ ಉಚಿತ ಶಿಕ್ಷಣಕ್ಕೆ ನಾಂದಿ ಹಾಡಿರುವುದು ಇವರ ಅಪೂರ್ವ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ.
ಚಾಮರಾಜನಗರ, ನಾಗರಹೊಳೆ ಭಾಗದ ಅರಣ್ಯವಾಸಿ ಗಿರಿಜನರಿಗೆ 8,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವುದಲ್ಲದೆ, ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ‘ಸ್ನೇಹ ಶಿಕ್ಷಣ ಸಂಸ್ಥೆ’ (ಕನ್ನಡ ಮಾಧ್ಯಮ) ನಡೆಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಇವರು ಸ್ವತಹ ಓರ್ವ ಸಾಹಿತಿಯಾಗಿದ್ದು, ‘ಭಾವಲೋಕ’ ಎಂಬ ಕವನ ಸಂಕಲನವನ್ನೂ ಹಲವಾರು ಭಾವಗೀತೆಯನ್ನು ರಚಿಸಿ ಪ್ರಕಟಿಸಿದ್ದಾರೆ.
ಎಸ್. ಕೆ. ಆನಂದ್ – ಶ್ರೀಮತಿ ರೇಖಾ ಆನಂದ್ ದಂಪತಿಯ ನಾಲ್ವರೂ ಮಕ್ಕಳು — ಅಕ್ಷಯ್, ಅರ್ಜುನ್, ಆಕಾಶ್ ಹಾಗೂ ಪುತ್ರಿ ಆರತಿ — ನಾಲ್ವರೂ ಸಿವಿಲ್ ಇಂಜಿನಿಯರಿಂಗ್ ಪದವೀಧರರು ಎಂಬುದು ಭಾರತೀಯ ಇಂಜಿನಿಯರಿಂಗ್ ಕ್ಷೇತ್ರದಲ್ಲೇ ವಿಶಿಷ್ಟ ದಾಖಲೆ. ಇಡೀ ಕುಟುಂಬವೇ ಸಂಸ್ಥೆಯ ಸುಸ್ಥಿರ ಹಾಗೂ ಪರಿಸರಸ್ನೇಹಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
*ಪ್ರಶಸ್ತಿಗಳು* ಇವರ ಸೇವೆಯನ್ನು ಗುರುತಿಸಿ ‘ಪರಿಸರಪ್ರೇಮಿ’ (2003), ‘ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್’ (2008 – ICI), ರಾಷ್ಟ್ರೀಯ ಜೆಸಿಐ ‘TOBIP’ ಹಾಗೂ ACCE-UltraTech ಪ್ರಶಸ್ತಿಗಳು ಲಭಿಸಿವೆ.
ಬಾಲವನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ
ಮಾನ್ಯ ಶಾಸಕ ಶ್ರೀ ಅಶೋಕ್ ಕುಮಾರ್ ರೈ ಇವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಬಾಲವನ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಕು.ಸ್ಟೆಲ್ಲಾ ವರ್ಗೀಸ್ ಹಾಗೂ ಆಯ್ಕೆ ಸಮಿತಿಯ ಸದಸ್ಯರಾದ ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ಶ್ರೀ ವಿ. ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಅವರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯು ಈ ಸಾಧಕನನ್ನು ಆಯ್ಕೆ ಮಾಡಿದ್ದು, ಅಕ್ಟೋಬರ್ 10, 2026 ರಂದು ಪುತ್ತೂರಿನ ಐತಿಹಾಸಿಕ ಬಾಲವನದಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಅಧಿಕೃತವಾಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ಜಾಹೀರಾತು

LOTUS TRAVEL

ಜಾಹೀರಾತು

SendShare4Share
Previous Post

ಪುತ್ತೂರಿನಲ್ಲಿ ಕಿದ್ವಾಯಿ ನಿಮ್ಹಾನ್ಸ್, ಜಯದೇವ ಸಂಸ್ಥೆಗಳ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಆಗ್ರಹ

Next Post

ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ! ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ!  ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಅಕ್ರಮ ಸಾಗಾಟ! ನಸುಕಿನ ಜಾವ ಮಿಂಚಿನ ಕಾರ್ಯಾಚರಣೆ!

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..