ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದಲ್ಲಿ 38ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಜ.22ರಂದು ನಡೆಯಲಿದೆ.
ಅಂದಿನ ದಿನ ಬೆಳಿಗ್ಗೆ ಮಠದಲ್ಲಿ ಪ್ರತಿಷ್ಠಾ ಸಂಬಂಧವಾದ ಹೋಮ, ಶ್ರೀರಾಮ ಬಳಗ ಹಾಗೂ ಬೃಂದಾವನಕ್ಕೆ ವಿಶೇಷ ಅಭಿಷೇಕ ಅಲಂಕಾರ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6ರಿಂದ 8ರ ವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು 8 ಗಂಟೆಯ ಬಳಿಕ ರಂಗಪೂಜೆ ಹಾಗೂ ರಥೋತ್ಸವ ಅಷ್ಠಾವಧಾನ ಸೇವೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ಆಡಳಿತ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಕಲ್ಲಮ ತಿಳಿಸಿದ್ದಾರೆ.


























