ಕ್ಯಾಬ್ ಚಾಲಕನೊಬ್ಬ ಟ್ರಾಫಿಕ್ ನೆಪದಲ್ಲಿ ಮಹಿಳೆಯನ್ನು ಗಲ್ಲಿ ಗಲ್ಲಿ ಸುತ್ತಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ.
ನಾರಾಯಣಪುರದಲ್ಲಿರುವ ತಂಗಿ ಮನೆಯಿಂದ ಕ್ಯಾಬ್ ಮಾಡಿಕೊಂಡು ತಡರಾತ್ರಿ 1 ಗಂಟೆಗೆ ಮಹಿಳೆ ಅದೂರಿಗೆ ಹೊರಟಿದ್ದರು. ಈ ವೇಳೆ ಟ್ರಾಫಿಕ್ ನೆಪ ಹೇಳಿ ಚಾಲಕ ಗಲ್ಲಿ ಗಲ್ಲಿ ರಸ್ತೆ ಸುತ್ತಿಸಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕ್ಯಾಬ್‌ನಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಧ್ಯರಾತ್ರಿ 1:30 ರಿಂದ 1:40ಕ್ಕೆ ಘಟನೆ ನಡೆದಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣ ಗಂಡನಿಗೆ ಮಹಿಳೆ ಕರೆ ಮಾಡಿದ್ದಾರೆ. ಈ ವೇಳೆ ಕಾರಿನಿಂದ ಮಹಿಳೆಯನ್ನು ಹೊರದಬ್ಬಿ ಚಾಲಕ ಪರಾರಿಯಾಗಿದ್ದಾನೆ. ಚಾಲಕನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

























