ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ 2026-27ನೇ ಸಾಲಿನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಭಾನುವಾರ ಸಂಜೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
2026-27ನೇ ಸಾಲಿನ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆಯಾಗಿ ಪದಸ್ವೀಕಾರ ಮಾಡಿದ ವಚನ ಜಯರಾಮ್ ಮಾತನಾಡಿ, ನಮ್ಮ ಒಂದು ವರ್ಷದ ಸೇವಾ ಚಟುವಟಿಕೆಗಳಲ್ಲಿ ಕ್ಲಬ್‌ನ ಪ್ರತಿಯೋರ್ವ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ರೋಟರಿ ವರ್ಷದಲ್ಲಿ ನಮ್ಮ ಯೋಜನೆಗಳಲ್ಲಿ ಪ್ರಮುಖವಾಗಿರುವುದು – ಸುವಿಧಾ ಸಖಿ. ಶಾಲಾ ವಿದ್ಯಾರ್ಥಿನಿಯರಲ್ಲಿ ಶುಚಿತ್ವದ ಜಾಗೃತಿ ಮೂಡಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ. ಈಗಿರುವ ಮಾಹಿತಿಯಂತೆ 5ರಲ್ಲಿ 1 ಹೆಣ್ಮಗು ಶಾಲೆಯಿಂದ ದೂರ ಉಳಿಯುತ್ತಿವೆ. ಕಾರಣ ಮುಟ್ಟಿನ ಸಮಸ್ಯೆ. ಇದು ಸಮಸ್ಯೆಯಲ್ಲ. ಶುಚಿತ್ವದಿಂದ ನಿಭಾಯಿಸಿದರೆ, ಉಳಿದ ದಿನಗಳಂತೆ ಮುಟ್ಟಿನ ದಿನಗಳನ್ನು ಆರಾಮವಾಗಿ ಕಳೆಯಬಹುದು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಲಿದ್ದೇವೆ. ಈ ಯೋಜನೆಗೆ 2500 ವಿದ್ಯಾರ್ಥಿನಿಯರನ್ನು ಈ ವರ್ಷ ತೆಗೆದುಕೊಳ್ಳಲಿದ್ದೇವೆ ಎಂದರು.
ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ಎಸ್. ರಾವ್ ಅವರು ಪದಪ್ರದಾನ ನೆರವೇರಿಸಿದರು. ಅಸಿಸ್ಟೆಂಟ್ ಗವರ್ನರ್ ಝೇವಿಯರ್ ಡಿಸೋಜಾ, ವಲಯ ಸೇನಾನಿ ಪಶುಪತಿ ಶರ್ಮಾ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ ಅತಿಥಿಯಾಗಿದ್ದರು.
ಕಾರ್ಯದರ್ಶಿಯಾಗಿ ಅನೂಪ್ ಕೆ.ಜೆ, ಕೋಶಾಧಿಕಾರಿಯಾಗಿ ನರಸಿಂಹ ಪೈ ಪದ ಸ್ವೀಕಾರ ಮಾಡಿದರು.
ನಿಕಟಪೂರ್ವ ಅಧ್ಯಕ್ಷರಾಗಿ ಕುಸುಮ್ ರಾಜ್, ಸಾರ್ಜಂಟ್ ಅಟ್ ಆಮ್ಸ್೯ ಆಗಿ ಆಶಾ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಪ್ರಜ್ಞಾ ದೇವಿ, ನಿಯೋಜಿತ ಅಧ್ಯಕ್ಷರಾಗಿ ಸತೀಶ್ ರೈ ಕಟ್ಟಾವು, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಸಾಯಿರಾಂ ಬಾಳಿಲ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಅಭಿಶ್ ಕೆ, ಯೂತ್ ಸರ್ವಿಸ್ ನಿರ್ದೇಶಕರಾಗಿ ಶಿವಪ್ರಕಾಶ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ವಿನೀತ್ ಶೆಣೈ, ಬುಲೆಟಿನ್ ಎಡಿಟರ್ ಆಗಿ ಶರತ್ ಶ್ರೀನಿವಾಸ್, ಕ್ಲಬ್ ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ಉಮೇಶ್ ನಾಯಕ್, ಕ್ಲಬ್ ಅಡ್ಮಿನಿಸ್ಟ್ರೇಶನ್ ಚೇರ್ಮನ್ ಅಶ್ವಿನಿ ಮುಳಿಯ, ಕ್ಲಬ್ ಮೆಂಬರ್ ಶಿಪ್ ಚೇರ್ಮನ್ ದೇವಿಚರಣ್ ರೈ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ರತ್ನಾಕರ್ ರೈ, ಕ್ಲಬ್ ಫೌಂಡೇಶನ್ ಚೇರ್ಮನ್ ಭರತ್ ಪೈ, ಪಲ್ಸ್ ಪೋಲಿಯೊ ಚೇರ್ಮನ್ ಡಾ.ಯದುರಾಜ್ ಡಿ.ಕೆ, ಪಬ್ಲಿಕ್ ಇಮೇಜ್ ಚೇರ್ಮನ್ ಡಾ.ಹರ್ಷಕುಮಾರ್ ರೈ, ಸಾಂಸ್ಕೃತಿಕ ಇವೆಂಟ್ಸ್ ಚೇರ್ಮನ್ ತ್ರಿವೇಣಿ ಗಣೇಶ್, ಸ್ಪೋರ್ಟ್ಸ್ ಚೇರ್ಮನ್ ಭರತ್ ನಾಯಕ್ ರವರು ಪದ ಸ್ವೀಕರಿಸಿದರು.























