ಬ್ಯಾಂಕ್ ಸಾಲ ತೀರಿಸಿದ ಬಳಿಕ ಎಲ್ಲಾ ಕೆಲಸ ಆಯ್ತು, ಇನ್ನು ಆರಾಮಾಗಿ ಇರಬಹುದು ಅಂದು ಕೊಂಡಿದ್ದೀರಾ. ಆದರೆ ನೀವು ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಸಾಲ ಮುಕ್ತಾಯ ಪತ್ರ, ನಿರಪೇಕ್ಷಣಾ ಪ್ರಮಾಣಪತ್ರ ಸೇರಿದಂತೆ ಇನ್ನಿತ್ತರ ಅಗತ್ಯ ದಾಖಲೆಗಳನ್ನು ಬ್ಯಾಂಕ್‌ನಿಂದ ಪಡೆದುಕೊಳ್ಳುವುದನ್ನು ಮಾತ್ರ ಮರೆಯದಿರಿ.
ಸಾಲ ಪಡೆಯುವಾಗ ನೀವು ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಆಸ್ತಿ ಪತ್ರಗಳು, ಸೇಲ್ ಡೀಡ್, ಅಗ್ರಿಮೆಂಟ್ ಮುಂತಾದ ಎಲ್ಲಾ ಮೂಲ ದಾಖಲೆಗಳನ್ನು ತಪ್ಪದೇ ಪಡೆದುಕೊಳ್ಳಿ.
ಸಾಲ ತೀರಿಸಿದ ಬಳಿಕ ನೀವು ಬ್ಯಾಂಕಿನಿಂದ ನೋ ಡ್ಯೂ ಸರ್ಟಿಫಿಕೇಟ್ ಪಡೆಯಬೇಕು. ಇದು ನೀವು ಸಾಲವನ್ನು ಸಂಪೂರ್ಣವಾಗಿ ತೀರಿಸಲಾಗಿದೆ ಹಾಗೂ ನಿಮ್ಮ ಮೇಲೆ ಯಾವುದೇ ಬಾಕಿ ಇಲ್ಲ ಎಂದು ದೃಢೀಕರಿಸುವ ದಾಖಲೆಯಾಗಿದೆ. ಬ್ಯಾಂಕಿನವರು ಸಾಲ ನೀಡುವ ವೇಳೆ ನಿಮ್ಮಿಂದ ಸಹಿ ಮಾಡಿದ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳುತ್ತಾರೆ. ಸಾಲ ತೀರಿಸಿದ ಕೂಡಲೇ ಆ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳಿ. ಈ ಚೆಕ್ ಗಳು ದುರ್ಬಳಕೆ ಆಗುವುದನ್ನು ತಪ್ಪಿಸುತ್ತದೆ.
ಸಾಲ ಮುಕ್ತಾಯಗೊಂಡ ಬಳಿಕ ನೀವು ನಿಮ್ಮ ಸಿಬಿಲ್ ವರದಿಯಲ್ಲಿ ಸಾಲದ ಸ್ಥಿತಿಯು ಮುಕ್ತಾಯಗೊಂಡಿದೆ ಎಂದು ನವೀಕೃತವಾಗಿದೆಯೇ ಒಮ್ಮೆ ನೋಡಿಕೊಳ್ಳುವುದು ಉತ್ತಮ. ಸಾಲದ ಖಾತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ತಿಳಿಸುವ ಅಧಿಕೃತ ಹೇಳಿಕೆಯಾಗಿದೆ. ಇದನ್ನು ನೀವು ಸಾಲ ತೀರಿಸಿದ ತಕ್ಷಣ ಹೇಳಿಕೆಯನ್ನು ಬ್ಯಾಂಕ್‌ನಿಂದ ಪಡೆದುಕೊಳ್ಳುವುದು ಸೂಕ್ತ.
ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಪಡೆಯದೇ ಇದ್ದಲ್ಲಿ ತೊಂದರೆ ಆಗುವ ಸಾಧ್ಯತೆ ಹೆಚ್ಚು. ನೀವು ಸಾಲ ಪಡೆಯುವಾಗ ಅಡಮಾನವಿಟ್ಟ ಆಸ್ತಿ ಪತ್ರಗಳು, ಸೇಲ್ ಡೀಡ್ ಹಾಗೂ ಅಗ್ರಿಮೆಂಟ್ ಮುಂತಾದ ದಾಖಲೆಗಳೇ ಮೂಲದಾಖಲೆಗಳಾಗಿವೆ. ಸಾಲ ತೀರಿಸಿದ ಬಳಿಕ ನಿರಪೇಕ್ಷಣಾ ಪತ್ರ, ಮೂಲ ದಾಖಲೆ ಪತ್ರ, ಕ್ರೆಡಿಟ್ ಸ್ಕೋರ್, ಬ್ಲ್ಯಾಂಕ್ ಚೆಕ್ ವಾಪಸ್, ಖಾತೆ ಮುಚ್ಚುವಿಕೆ ಹೇಳಿಕೆ ಈ ದಾಖಲೆಗಳನ್ನು ಕೇಳಿ ಪಡೆಯಿರಿ.
























