ಪುತ್ತೂರು: ಪುತ್ತೂರು ಸಂಪ್ಯ ಮೂಲದವರಾಗಿದ್ದು, ಮುಂಬೈನಲ್ಲಿ ಬೆಳೆದ ರೋಶ್ನಿ ಗೌಡ ಕನ್ನಡ ಬಿಗ್ಬಾಸ್ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಪುತ್ತೂರು ಸಂಪ್ಯ ಮೂಲದವರಾಗಿದ್ದು,
ಇವರ ತಂದೆ ಶಿವಪ್ರಕಾಶ್ ಗೌಡ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸವಾಗಿದ್ದಾರೆ. ಸರೋಜಾ ಮತ್ತು ಶಿವಪ್ರಕಾಶ್ ಗೌಡ ದಂಪತಿಯ ಪುತ್ರಿ ರೋಶ್ನಿ ಮಾಡೆಲ್, ಕಂಟೆಂಟ್ ಕ್ರಿಯೇಟರ್ ಮತ್ತು ನೃತ್ಯಗಾರ್ತಿಯಾಗಿ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ರೋಶ್ನಿ, ಪ್ರಸ್ತುತ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಮಾಡೆಲಿಂಗ್, ನೃತ್ಯ ಮತ್ತು ಕಂಟೆಂಟ್ ಕ್ರಿಯೇಷನ್ನಲ್ಲಿ ತೊಡಗಿದ್ದಾರೆ. ಭರತನಾಟ್ಯ ಮತ್ತು ವೆಸ್ಟರ್ನ್ ನೃತ್ಯದಲ್ಲಿ ತರಬೇತಿ ಪಡೆದಿರುವ ಅವರು ಬಾಂಬೆ ಟೈಮ್ಸ್ ಫ್ಯಾಷನ್ ವೀಕ್ ಸೇರಿ ಹಲವು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರ್ಯಾಂಪ್ ವಾಕ್ ಮಾಡಿದ್ದಾರೆ.
ಮಿಸ್ ಕರ್ನಾಟಕ ರನ್ನರ್-ಅಪ್, ಗೋಲ್ಡನ್ ಗರ್ಲ್ ಆಫ್ ಜಿ.ಎಲ್. ಆಚಾರ್ಯ, ಐಕಾನಿಕ್ ಕಣ್ಣುಗಳು, ಮಿಸ್ ಟ್ಯಾಲೆಂಟೆಡ್, ಮಿಸ್ ದಿವಾ ಕರ್ನಾಟಕ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಲಕ್ಷಾಂತರ ಅರ್ಜಿದಾರರ ಪೈಕಿ ಹಲವು ಸುತ್ತಿನ ಆಡಿಷನ್ಗಳ ಬಳಿಕ ಟಾಪ್ 15 ಸ್ಪರ್ಧಿಗಳಲ್ಲಿ ಆಯ್ಕೆಯಾಗಿರುವ ರೋಶ್ನಿ, ಇದೀಗ ದೊಡ್ಡ ವೇದಿಕೆಯಲ್ಲಿ ತಮ್ಮ ವ್ಯಕ್ತಿತ್ವ ಮತ್ತು ಕೌಶಲ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ವೀಕ್ಷಕರು ಅವರ ಪಯಣವನ್ನು ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು.

























