ಪುತ್ತೂರು: ಜಿಮ್ ವರ್ಕೌಟ್ ಮಾಡುತ್ತಿರುವ ವೇಳೆ ಹೃದಯಾಘಾತಗೊಂಡು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಸೆ.5ರಂದುಸಂಜೆ ವೇಳೆ ನಡೆದಿದೆ. ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ರೈಯವರ ಪುತ್ರ ನೆಹರು ನಗರದ ಖಾಸಗಿ ಕಾಲೇಜೊಂದರ ಅಂತಿಮ ಬಿ.ಕಾಂ ವಿದ್ಯಾರ್ಥಿ ಶ್ರಮಿಕ್(20ವ.) ಮೃತಪಟ್ಟವರು.
ಬೊಳುವಾರಿನ ಜಿಮ್ ಸೆಂಟರ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೇಳೆ ಉಸಿರುಕಟ್ಟಿದಂತಾಗಿತ್ತು. ಕೂಡಲೇ ಅವರನ್ನು ಬೊಳುವಾರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತಾದರೂ ಅಲ್ಲಿ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಜಿಮ್ ಸೆಂಟರ್ ಗಳಲ್ಲಿ ಡಾಕ್ಟರ್ ಗಳ ಸಲಹೆ ಇಲ್ಲದೆ ಪ್ರೊಟೀನ್ ನ ಎಷ್ಟು ಬಳಸಬೇಕು ಎನ್ನುದು ಗೊತಿಲ್ಲದೆ ಬಳಸುತ್ತಿದರೆ.
ಮೃತಪಟ್ಟ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ವಿದ್ಯಾರ್ಥಿ ಶಮಿಕ್ ರೈ ಅವರ ಅಂತಿಮದರ್ಶನ ಪಡೆದ ಶಾಸಕ ಅಶೋಕ್ ರೈ.


























