ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಅಕ್ರಮ-ಸಕ್ರಮ(ಬಗರ್ ಹುಕುಂ) ಬೈಠಕ್ ಇಂದು ಬಜತ್ತೂರು ಗ್ರಾಮ ಪಂಚಾಯ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರು, ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಿಸಿದ 94’C ಹಕ್ಕು ಪತ್ರ ವಿತರಣೆ ಮತ್ತು ಅಕ್ರಮ-ಸಕ್ರಮ ಅರ್ಜಿ ಕಡತಗಳ ವಿಲೇವಾರಿ ಮಾಡಲಾಯಿತು.
ಸಮಿತಿಯ ಪದ ನಿಮಿತ್ತ ಕಾರ್ಯದರ್ಶಿ ತಹಶಿಲ್ದಾರರಾದ ಕೂಡಲಗಿ,ಸದಸ್ಯರುಗಳಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ,ಶ್ರೀಮತಿ ರೂಪರೇಖಾ ಆಳ್ವ,ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ,ಅರಣ್ಯಾಧಿಕಾರಿ ಕಿರಣ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕಂದಾಯ ನೀರಿಕ್ಷರಾದ ಗೋಪಾಲ್ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.ಉಪ್ಪಿನಂಗಡಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಗಳು ಹಾಜರಿದ್ದರು.























