ಪುತ್ತೂರು: ಬಿಜೆಪಿಯಿಂದ ನಮ್ಮ ಹಕ್ಕು ನಮಗೆ ನೀಡಿ ಪುತ್ತೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ಬೊಳುವಾರಿನಿಂದ ಆರಂಭಗೊಂಡ ಮೆರವಣಿಗೆ ಪುತ್ತೂರು ಮುಖ್ಯರಸ್ತೆಯಲ್ಲಿ ಆಗಮಿಸಿ, ಪುತ್ತೂರು ಕಿಲ್ಲೆ ಮೈದಾನ ಬಳಿಯಿರುವ ಅಮರ್ ಜವಾನ್ ಸ್ಮಾರಕದ ಬಳಿ ಸಮಾಪನಗೊಂಡಿತು. ಬಳಿಕ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುವ ಶಾಸಕರಿಗೆ ಎಚ್ಚರಿಕೆ ನೀಡುತ್ತೇವೆ. ಇದೇ ರೀತಿಯ ವರ್ತನೆ ಮುಂದುವರಿಸಿದರೆ, ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಕಿಶೋರ್ ಕುಮಾರ್ ಪುತ್ತೂರು ಎಚ್ಚರಿಸಿದರು.
ಬಂಡಾಲ್ ಬಡಾಯಿ ಅಶೋಕಣ್ಣ – ದಯವಿಟ್ಟು ರೀಲ್ಸ್ ಅಭಿವೃದ್ಧಿ ನಿಲ್ಲಿಸಿ, ನೈಜ ಅಭಿವೃದ್ಧಿ ಕಾರ್ಯ ನಡೆಸಿ ಎಂದ ಅವರು, ಶಾಸಕರು ತಮ್ಮ ಹದ್ದುಬಸ್ತನ್ನು ಮೀರಿ ಹೋಗಿದ್ದಾರೆ. ಹಾಗಾಗಿ ಅದಕ್ಕೆ ತಡೆ ಒಡ್ಡುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದರು.
ಪಂಚ ಗ್ಯಾರೆಂಟಿಯ ಆಸೆ ತೋರಿಸಿದ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದ ದಿನದಿಂದಲೇ ಭ್ರಷ್ಟಾಚಾರದಲ್ಲಿ ತೊಡಗಿತು. ನಾವು ಕಟ್ಟದ ತೆರಿಗೆ ಹಣ, ನಮ್ಮ ಉಪಯೋಗಕ್ಕೆ ಸಿಗದಂತಾಯಿತು. ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಇಟ್ಟಿದ್ದ ಹಣವನ್ನು ನುಂಗಿ ನೀರು ಕುಡಿಯಿತು. ವೃದ್ಧರ ವಿರೋಧಿ ಸರಕಾರವಿದು. ವಿಧವಾ ಪಿಂಚಣಿಯನ್ನು ತಡೆ ಹಿಡಿದ ಸರಕಾರಕ್ಕೆ ಧಿಕ್ಕಾರ. ಅಂಗವಿಕಲರ ಪಿಂಚಣಿಯನ್ನು ನಿಲ್ಲಿಸಿದ ಸರಕಾರಕ್ಕೆ ದೇವರ ಶಾಪವಿದೆ. ಯಾವುದೇ ವಸತಿ ಯೋಜನೆಯಡಿ ಮನೆಯನ್ನು ನೀಡಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ತಡೆ ನೀಡಿದೆ. ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆ ಇಲ್ಲ. ಸರಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ. ಪರಿಣಾಮ ಕೇಂದ್ರ ಸರಕಾರದ ಎಷ್ಟೋ ಯೋಜನೆಗಳು ಹಿಂದೆ ಹೋಗಿವೆ. ಹಾಗಾಗಿ ಇಲ್ಲಿನ ಪ್ರತಿಯೊಂದು ಹೆಜ್ಜೆಯೂ ಪ್ರತಿ ಹೆಣ್ಣುಮಕ್ಕಳ, ಅಂಗವಿಕಲರ, ಬಡವರ ಪರವಾದ ಹೆಜ್ಜೆ ಎಂದರು.
ಕಾರ್ಯಕ್ರಮ ಉಸ್ತುವಾರಿ ಜೀವಂಧರ್ ಜೈನ್ ಮಾತನಾಡಿ, ನಗರಸಭೆಗೆ ಆಡಳಿತ ಅವಧಿ ಮುಗಿದು ಇಂದಿಗೆ ಒಂದು ವರ್ಷ. ಮಾತೇ ಮರೆತು ಹೋದ ಪರಿಸ್ಥಿತಿ. ಬಿಜೆಪಿ ಆಡಳಿತದಲ್ಲಿ ಯಾವುದೇ ಬೇಧ ಮಾಡದೇ ಎಲ್ಲಾ ನಗರಸಭೆಯ 31 ವಾರ್ಡ್ ಗಳಿಗೆ ಹಣ ಬಿಡುಗಡೆ ಮಾಡಿತ್ತು. ಕೇಂದ್ರ ಸರಕಾರ 15ನೇ ಹಣಕಾಸು ಆಯೋಗದ ಮೂಲಕ 2 ಕೋಟಿ ರೂ. ನೀಡಿದೆ. ಆದರೆ ಈಗಿನ ಕಾಂಗ್ರೆಸ್ ಸರಕಾರ ಕಳೆದ ಮೂರುವರೆ ವರ್ಷದಲ್ಲಿ ಒಂದೂವರೆ ಕೋಟಿ ನೀಡಿದೆ. ಇದು ಅಭಿವೃದ್ಧಿ ಪಥವೇ? ಹಾಗಾಗಿ ನಮ್ಮ ಹಕ್ಕನ್ನು ನಮಗೆ ನೀಡಿ ಎಂಬ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ಮಾರ್ತಾ, ವಿದ್ಯಾಗೌರಿ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ
ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಪ್ರಮುಖರಾದ ಶಶಿಧರ್ ನಾಯಕ್, ಲೊಕೇಶ್ ಚಾಕೋಟೆ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಸ್ವಾಗತಿಸಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಬೊಳುವಾರಿನಿಂದ ಆರಂಭಗೊಂಡ ಮೆರವಣಿಗೆ ಪುತ್ತೂರು ಮುಖ್ಯರಸ್ತೆಯಲ್ಲಿ ಆಗಮಿಸಿ, ಪುತ್ತೂರು ಕಿಲ್ಲೆ ಮೈದಾನ ಬಳಿಯಿರುವ ಅಮರ್ ಜವಾನ್ ಸ್ಮಾರಕದ ಬಳಿ ಸಮಾಪನಗೊಂಡಿತು. ಬಳಿಕ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.
























