ಪುತ್ತೂರು: ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕೊಡಮಾಡಲ್ಪಡುವ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ವಿವಿಧ ಕ್ಷೇತ್ರಗಳ 11 ಸಾಧಕರು ಹಾಗೂ 1 ಸಂಘ ಸಂಸ್ಥೆಯನ್ನು ಆಯ್ಕೆ ಮಾಡಲಾಗಿತ್ತು.
ಶಾಸಕ ಅಶೋಕ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆಗಿರುವ ತಹಶೀಲ್ದಾರ್,ಸಮಿತಿ ಸಂಚಾಲಕ-ಕ್ಷೇತ್ರ ಶಿಕ್ಷಣಾಧಿಕಾರಿ,ಸಮಿತಿ ಸದಸ್ಯರಾದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆ ಪೌರಾಯುಕ್ತರು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಚರ್ಚಿಸಿ ಸಾಧಕರನ್ನು ಆಯ್ಕೆ ಮಾಡಿದ್ದಾರೆ.ಸಾಧಕರಿಗೆ ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಅಜ್ಜಿಗ್ ಏರ್ಲ ಇಜ್ಜಿ, ಕುಸಲ್ದ ಬಿತ್ತಿಲ್, ಗುಂಪುಡ್ ಒರಿ ಗೋವಿಂದೆ, ಆಲ್ ನಾಟಕದಾಲ್, ಪುರ್ಷಗ್ ಪುರುಸೊತ್ತಿಜ್ಜಿ, ಸುಬ್ಬನ ಬದ್ಕ್ ನಾಟಕಗಳಲ್ಲಿ ಬಣ್ಣ ಹಚ್ಚಿದ ಇವರು,ಸತ್ಯದ ಬೊಲ್ಪು ಮತ್ತು ಸತ್ಯ ತೆರಿವಾ ಎಂಬ ನಾಟಕಗಳ ಕಥೆ, ರಚನೆ, ನಿರ್ದೇಶನ ಮಾಡಿದ್ದಾರೆ.ಬದುಕು, ಮಿಡಿತ, ಅಜ್ಜನ ಮಾಯೆ, ಕೂಲ್ ಗರ್ಲ್, ಇನ್ನರ್ ಬ್ಲೈಂಡ್ನೆಸ್, ಆಕ್ಸಿಜನ್,ಹೆಲ್ಮೆಟ್, ಕರ್ಮ ರಿಟರ್ನ್ಸ್, ಟಿಆರ್ಪಿ, ಅಯ್ ಆಮ್ ದಿ ಬೆಸ್ಟ್, ಫೋಟೋ ಫ್ರೇಮ್, ಸೆಲ್ಯುಟ್, ವನ್ ಮಿನಿಟ್, ನೊಕ್ ಸೇರಿದಂತೆ ಚುಟುಕು ಸಿನಿಮಾಗಳನ್ನು ನಿರ್ದೇಶಿಸಿದ್ದು, ತೆನ್ಕಾಯಿಮಲೆ ಎಂಬ ಚುಟುಕು ಸಿನಿಮಾವು ಅನೇಕ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನ ಕಂಡಿದೆ.ಮುಂಡೂರಿನ ಪಟ್ಟೆ ಬರೆಮೇಲು ನಿವಾಸಿಯಾಗಿರುವ ರವಿಚಂದ್ರ ರೈಯವರು, ವೃತ್ತಿಯಲ್ಲಿ ಫೋಟೋಗ್ರಫಿ ಮಾಡಿಕೊಂಡಿದ್ದಾರೆ.
























