ಪುತ್ತೂರು : ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಯ ಶಿಲನ್ಯಾಸ ಕಾರ್ಯಕ್ರಮ ಇಂದು ದೇವಳದ ಪುಷ್ಕರಿಣಿ ಬಳಿ ನಡೆಯಿತು.
ಸುಮಾರು 3.74 ಕೋಟಿ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಯ ಕಾರ್ಯಗಳು ನಡೆಯಲಿದೆ. ಇನ್ನು ದೇವಸ್ಥಾನದ ರಸ್ತೆಗೆ 3 ಕೋಟಿ, ದೇವಳದ ಅಭಿವೃದ್ಧಿಗೆ ಸರ್ಕಾರದಿಂದ 5 ಕೋಟಿ ಹಾಗೂ ಶಾಸಕರ ನಿಧಿಯಿಂದ 10 ಕೋಟಿ ರೂ.ಗಳು ಮಂಜೂರಾಗಿದ್ದು ಒಟ್ಟು 21 ಕೋಟಿ ರೂ.ಗಳು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆಗೊಂಡಿದೆ.
ಇನ್ನು ದೇವಸ್ಥಾನದ ಬಳಿಯಿರುವ ಸೇತವೆಯ ಅಭಿವೃದ್ಧಿಗೆ 2 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ, ಪ್ರಮುಖರಾದ ಕೇಶವ ಪ್ರಸಾದ್ ಮುಳಿಯ, ರಾಜರಾಮ ಶೆಟ್ಟಿ ಕೋಲ್ಪೆ, ಶಿವರಾಮ ಆಳ್ವ, ಮಹಾಬಲ ರೈ, ವಿನಯ ಸುವರ್ಣ, ರಾಮದಾಸ ಗೌಡ, ರವೀಂದ್ರನಾಥ ರೈ, ದಿನೇಶ್ ಕುಲಾಲ್, ಈಶ್ವರ ಬೆಡೆಕಲ್, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ಶುಭಾಷ್ ರೈ ಬೆಳ್ಳಿಪ್ಪಾಡಿ, ಸುಜಯ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

























