ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನ.23ರಂದು ರಾತ್ರಿ ಮೃಗಬೇಟೆ ಉತ್ಸವದಲ್ಲಿ ಶ್ರೀ ದೇವರ ಪೇಟೆ ಸವಾರಿ ಉತ್ಸವ ನಡೆಯಿತು.
ಇಂದು ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ, ಕುರಿಂಡೋತ್ಸವ ನಡೆಯಲಿದೆ.ಬೆಳಿಗ್ಗೆ ಶ್ರೀ ದೇವಳದಲ್ಲಿ ಪ್ರಾರ್ಥನೆ, ವನಭೋಜನ ಕಟ್ಟೆಗೆ ಶ್ರೀ ದೇವರು ಚಿತ್ತೈಸಿ ಧಾತ್ರಿ ಹೋಮ, ಮಧ್ಯಾಹ್ನ ವನದಲ್ಲಿ ಶ್ರೀ ದೇವರಿಗೆ ಮಹಾಪೂಜೆ, ಸಂಜೆ ಗಂಟೆ 7ಕ್ಕೆ ದೀಪ ನಮಸ್ಕಾರ ನಡೆಯಲಿದೆ. ರಾತ್ರಿ ಪೂಜೆ, ಶ್ರೀ ದೇವರು ವನಭೋಜನ ಕಟ್ಟೆಯಲ್ಲಿ ಆಸೀನರಾದ ಬಳಿಕ ಸುಡುಮದ್ದು ಪ್ರದರ್ಶನ, ಶ್ರೀ ದೇವರ ಪೇಟೆ ಸವಾರಿ
ಉತ್ಸವ, ಕಟ್ಟೆಪೂಜೆಗಳು ನಡೆದು ದರ್ಬೆ ವೃತ್ತದಲ್ಲಿ ಕುರಿಂದೋತ್ಸವ ನಡೆಯಲಿದೆ.
























