• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
‘ಅಶೋಕ ಜನಮನ` 1.50 ಲಕ್ಷ ದೋಸೆ,60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ- ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಕಾರ್ಯಕ್ರಮ

‘ಅಶೋಕ ಜನಮನ` 1.50 ಲಕ್ಷ ದೋಸೆ,60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ- ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಕಾರ್ಯಕ್ರಮ

November 23, 2026
ಸಂಗೀತ ಕ್ಷೇತ್ರದ ಸಾಧನೆಗಾಗಿ ಯುವ ಗಾಯಕ ಪದ್ಮರಾಜ್ ಬಿ. ಸಿ ಚಾರ್ವಾಕರವರಿಗೆ ‘ಕನ್ನಡ ಸಿರಿ ರತ್ನ ಪ್ರಶಸ್ತಿ

ಸಂಗೀತ ಕ್ಷೇತ್ರದ ಸಾಧನೆಗಾಗಿ ಯುವ ಗಾಯಕ ಪದ್ಮರಾಜ್ ಬಿ. ಸಿ ಚಾರ್ವಾಕರವರಿಗೆ ‘ಕನ್ನಡ ಸಿರಿ ರತ್ನ ಪ್ರಶಸ್ತಿ

November 23, 2026
ಬಿಹಾರದಲ್ಲಿ ಹೆಸರು ಬದಲಾಯಿಸಿ ಮರು ಉದ್ಘಾಟನೆ ಆರೋಪ : RJD  ಬೆಂಬಲಿಗರಿಂದ ಪ್ರಧಾನಿ ಮತ್ತು ಸಿಎಂ ಬ್ಯಾನರ್ ಹರಿದು ಆಕ್ರೋಶ

ಬಿಹಾರದಲ್ಲಿ ಹೆಸರು ಬದಲಾಯಿಸಿ ಮರು ಉದ್ಘಾಟನೆ ಆರೋಪ : RJD ಬೆಂಬಲಿಗರಿಂದ ಪ್ರಧಾನಿ ಮತ್ತು ಸಿಎಂ ಬ್ಯಾನರ್ ಹರಿದು ಆಕ್ರೋಶ

November 23, 2026
ಐದನೆ ದಿನಕ್ಕೆ ಮುಂದುವರಿದ ಟ್ಯಾಕ್ಸಿ ಚಾಲಕರ ಧರಣಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ಪದ್ಮರಾಜ್ ಆರ್. ಪೂಜಾರಿ ಆರೋಪ 

ಐದನೆ ದಿನಕ್ಕೆ ಮುಂದುವರಿದ ಟ್ಯಾಕ್ಸಿ ಚಾಲಕರ ಧರಣಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ಪದ್ಮರಾಜ್ ಆರ್. ಪೂಜಾರಿ ಆರೋಪ 

November 21, 2026
ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!

ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!

November 21, 2026
ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್

ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್

November 20, 2026
ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ

ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ

November 20, 2026
ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ

ಮಾಣಿ ನರಸಿಂಹ ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ

November 20, 2026
ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“

ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“

November 20, 2026
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!

November 20, 2026
ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್

ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್

November 19, 2026
ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು

ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು

November 19, 2026
ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ

ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ

November 19, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, November 23, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ‘ಅಶೋಕ ಜನಮನ` 1.50 ಲಕ್ಷ ದೋಸೆ,60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ- ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಕಾರ್ಯಕ್ರಮ

    ‘ಅಶೋಕ ಜನಮನ` 1.50 ಲಕ್ಷ ದೋಸೆ,60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ- ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಕಾರ್ಯಕ್ರಮ

    ಸಂಗೀತ ಕ್ಷೇತ್ರದ ಸಾಧನೆಗಾಗಿ ಯುವ ಗಾಯಕ ಪದ್ಮರಾಜ್ ಬಿ. ಸಿ ಚಾರ್ವಾಕರವರಿಗೆ ‘ಕನ್ನಡ ಸಿರಿ ರತ್ನ ಪ್ರಶಸ್ತಿ

    ಸಂಗೀತ ಕ್ಷೇತ್ರದ ಸಾಧನೆಗಾಗಿ ಯುವ ಗಾಯಕ ಪದ್ಮರಾಜ್ ಬಿ. ಸಿ ಚಾರ್ವಾಕರವರಿಗೆ ‘ಕನ್ನಡ ಸಿರಿ ರತ್ನ ಪ್ರಶಸ್ತಿ

    ಬಿಹಾರದಲ್ಲಿ ಹೆಸರು ಬದಲಾಯಿಸಿ ಮರು ಉದ್ಘಾಟನೆ ಆರೋಪ : RJD  ಬೆಂಬಲಿಗರಿಂದ ಪ್ರಧಾನಿ ಮತ್ತು ಸಿಎಂ ಬ್ಯಾನರ್ ಹರಿದು ಆಕ್ರೋಶ

    ಬಿಹಾರದಲ್ಲಿ ಹೆಸರು ಬದಲಾಯಿಸಿ ಮರು ಉದ್ಘಾಟನೆ ಆರೋಪ : RJD ಬೆಂಬಲಿಗರಿಂದ ಪ್ರಧಾನಿ ಮತ್ತು ಸಿಎಂ ಬ್ಯಾನರ್ ಹರಿದು ಆಕ್ರೋಶ

    ಐದನೆ ದಿನಕ್ಕೆ ಮುಂದುವರಿದ ಟ್ಯಾಕ್ಸಿ ಚಾಲಕರ ಧರಣಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ಪದ್ಮರಾಜ್ ಆರ್. ಪೂಜಾರಿ ಆರೋಪ 

    ಐದನೆ ದಿನಕ್ಕೆ ಮುಂದುವರಿದ ಟ್ಯಾಕ್ಸಿ ಚಾಲಕರ ಧರಣಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಗಲು ದರೋಡೆ ಪದ್ಮರಾಜ್ ಆರ್. ಪೂಜಾರಿ ಆರೋಪ 

    ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!

    ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!

    ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್

    ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್

    ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ

    ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ

    ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ

    ಮಾಣಿ ನರಸಿಂಹ ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ

    ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“

    ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

‘ಅಶೋಕ ಜನಮನ` 1.50 ಲಕ್ಷ ದೋಸೆ,60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ- ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಕಾರ್ಯಕ್ರಮ

by ಪ್ರಜಾಧ್ವನಿ ನ್ಯೂಸ್
November 23, 2026
in ದಕ್ಷಿಣ ಕನ್ನಡ, ಪುತ್ತೂರು, ಪ್ರಾದೇಶಿಕ, ಮಂಗಳೂರು
0
‘ಅಶೋಕ ಜನಮನ` 1.50 ಲಕ್ಷ ದೋಸೆ,60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ- ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಕಾರ್ಯಕ್ರಮ
6
SHARES
17
VIEWS
ShareShareShare

ಪುತ್ತೂರು:  ಶಾಸಕ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರೂ ಆಗಿರುವ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಅದ್ದೂರಿಯಿಂದ ನಡೆದ ಹದಿನಾಲ್ಕನೇ ವರ್ಷದ ‘ಅಶೋಕ ಜನಮನ’ ಕಾರ್ಯಕ್ರಮ ಜನ ಜಾತ್ರೆಯಾಗಿ ಮೇಳೈಸಿದೆ.

ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ಕ್ರೀಡಾಂಗಣದಲ್ಲಿ, ಕೀರ್ತಿಶೇಷ ಕೆ.ಪಿ.ಸಂಜೀವ ರೈ ವೇದಿಕೆಯಲ್ಲಿ ನ.22ರಂದು ನಡೆದ 14ನೇ ವರ್ಷದ ದೀಪಾವಳಿ ಹಬ್ಬದ ಉಡುಗೊರೆ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಪುತ್ತೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬೃಹತ್ ಜನಸಂಗಮದೊಂದಿಗೆ ಸ್ಮರಣೀಯ ಕಾರ್ಯಕ್ರಮವಾಗಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮ ಪುತ್ತೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

ವೇದಿಕೆಗೆ ಆಗಮಿಸುವ ಆರಂಭದಲ್ಲಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಉಳ್ಳಾಲ್ತಿ ಮಾಣಿ ಅವರಿಗೆ ಶಾಲು ಹೊದೆಸಿ ಅವರಿಂದ ಅಶೀರ್ವಾದ ಪಡೆದರು. ಈ ಸಂದರ್ಭ ಅವರ ಪತ್ನಿ, ಪುತ್ರಿಯರು, ಪುತ್ರ ಆಶೀರ್ವಾದ ಪಡೆದರು. ಬಳಿಕ ಸಭೆಯ ಮುಂದಿದ್ದ ಹಿರಿಯರಿಗೆ ಮತ್ತು ಗಣ್ಯರಿಗೆ ಕುಂಕುಮ ಮತ್ತು ಸ್ವರ್ಣ ಬಣ್ಣದ ಪಟ್ಟೆಯುಳ್ಳ ಶಾಲು ಹೊದೆಸಿ ಗೌರವಿಸಿದರು.

ನಾಡಿನ ವಿವಿಧ ಭಾಗಗಳಿಂದ ಮಕ್ಕಳು, ಮಹಿಳೆಯರು, ಹಿರಿಯ ಕಿರಿಯರೆನ್ನದೆ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಬೆಳಗ್ಗಿನಿಂದಲೇ ಪುತ್ತೂರು ನಗರದ ರಸ್ತೆಗಳು ಜನರಿಂದ ತುಂಬತೊಡಗಿದವು. ಸಮಯ ಕಳೆದಂತೆ ಜನ ಪ್ರವಾಹ ಹೆಚ್ಚುತ್ತಲೇ ಹೋಯಿತು. ಪೇಟೆಯ ಯಾವುದೇ ಭಾಗಕ್ಕೆ ಹೋದರೂ ಅಶೋಕ ಜನಮನ ಕಾರ್ಯಕ್ರಮಕ್ಕೆ ತೆರಳುವ ಜನರ ಓಡಾಟವೇ ಕಂಡು ಬರುತ್ತಿತ್ತು. ಎಲ್ಲ ವಯೋಮಾನದ ಜನರು ಸಂಭ್ರಮದಿಂದ ಕೊಂಬೆಟ್ಟು ಕ್ರೀಡಾಂಗಣದತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಪುತ್ತೂರು ಪೇಟೆಯಲ್ಲಿ ಜಾತ್ರೆಯ ವಾತಾವರಣವನ್ನೇ ಸೃಷ್ಟಿಸಿತ್ತು. ಸಾಮಾನ್ಯವಾಗಿ ದೇವಸ್ಥಾನದ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಕಂಡುಬರುವ ಜನಸಂದಣಿ, ಸಂತೆ, ವ್ಯಾಪಾರ-ವಹಿವಾಟಿನ ದೃಶ್ಯಗಳು ಕೊಂಬೆಟ್ಟು ಪರಿಸರದಲ್ಲಿ ಕಂಡು ಬಂತು.ಕೊಂಬೆಟ್ಟು ರಸ್ತೆಯ ಇಕ್ಕೆಲಗಳಲ್ಲಿ ಕ್ರೀಡಾಂಗಣದವರೆಗೂ ಸಾಲುಸಾಲಾಗಿ ತಲೆ ಎತ್ತಿದ್ದ ತಾತ್ಕಾಲಿಕ ಅಂಗಡಿಗಳು, ತಂಪು ಪಾನೀಯ, ಐಸ್‌ಕ್ರೀಂ, ಬಳೆ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಳಿಗೆಗಳು ಕಾರ್ಯಕ್ರಮಕ್ಕೆ ಜಾತ್ರೆಯ ಮೆರುಗು ನೀಡಿದವು.ಜನರ ಸಂಚಾರ, ವ್ಯಾಪಾರಿಗಳ ಉತ್ಸಾಹ, ಮಕ್ಕಳ ಸಂಭ್ರಮ ಎಲ್ಲವೂ ಸೇರಿ ಕೊಂಬೆಟ್ಟು ಪರಿಸರವೇ ಹಬ್ಬದ ಮಾರುಕಟ್ಟೆಯಾಗಿ ಮಾರ್ಪಟ್ಟಿತ್ತು.

ಈ ಜನಸಂಗಮದ ನಡುವೆ ಎಲ್ಲರ ಗಮನ ಸೆಳೆಯುತ್ತಿದ್ದ ಮತ್ತೊಂದು ದೃಶ್ಯವೆಂದರೆ ವಸ್ತ್ರ ವಿತರಣೆಯ ಬಳಿಕ ಮನೆಗೆ ಮರಳುತ್ತಿದ್ದ ಜನರ ಮುಖದಲ್ಲಿದ್ದ ಸಂತೋಷ.ಮಹಿಳೆಯರ ಕೈಯಲ್ಲಿ ಸೀರೆಗಳ ಚೀಲಗಳು, ಪುರುಷರು ಮತ್ತು ಮಕ್ಕಳ ಕೈಯಲ್ಲಿ ಪಾತ್ರೆಗಳ ಸೆಟ್‌ಗಳು ಕಾಣಿಸುತ್ತಿದ್ದವು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನತೆ ತಮ್ಮ ಪಾಲಿನ ದೀಪಾವಳಿ ಉಡುಗೊರೆಯನ್ನು ಪಡೆದುಕೊಂಡು ಸಂತಸದಿಂದ ಹಿಂದಿರುಗುತ್ತಿದ್ದ ದೃಶ್ಯ.ಒಂದು ಕಡೆ ಹಬ್ಬದ ಉಡುಗೊರೆ ಪಡೆದ ಸಂತೃಪ್ತಿ,ಮತ್ತೊಂದು ಕಡೆ ಸಾವಿರಾರು ಜನರೊಂದಿಗೆ ಬೆರೆತು ಸಂಭ್ರಮಿಸುವ ಅವಕಾಶ. ಹೀಗಾಗಿ ಅಶೋಕ ಜನಮನ ಕೇವಲ ದೀಪಾವಳಿ ಉಡುಗೊರೆ ವಿತರಣೆ ಮತ್ತು ಅನ್ನಸಂತರ್ಪಣೆಯ ಕಾರ್ಯಕ್ರಮವಾಗಿ ಉಳಿಯದೆ, ಸಮಾಜದ ವಿವಿಧ ವರ್ಗದ ಜನರನ್ನು ಒಂದೆಡೆ ಬೆಸೆಯುವ ಜನಸಂಪರ್ಕದ ಮಹಾಸಂಗಮವಾಗಿಯೂ ಮೂಡಿಬಂತು.

ಬೆಳಗ್ಗಿನಿಂದ ಆರಂಭವಾದ ಜನರ ಓಡಾಟ ಸಂಜೆಯಾದರೂ ಕಡಿಮೆಯಾಗಲಿಲ್ಲ. ರಾತ್ರಿ ಸುಮಾರು 8 ಗಂಟೆಯವರೆಗೂ ಪುತ್ತೂರು ಪೇಟೆಯಿಂದ ಕೊಂಬೆಟ್ಟು ಕ್ರೀಡಾಂಗಣದತ್ತ ಜನರು ಆಗಮಿಸುತ್ತಲೇ ಇದ್ದರು. ಹಬ್ಬದ ಸಂಭ್ರಮ, ಜನರ ಉತ್ಸಾಹ ಮತ್ತು ಕಾರ್ಯಕ್ರಮದ ವೈಭವ ಇಡೀ ದಿನ ಮುಂದುವರಿಯಿತು. ಒಟ್ಟಿನಲ್ಲಿ, 14 ವರ್ಷಗಳ ಹಿಂದೆ ಆರಂಭವಾದ ದೀಪಾವಳಿ ವಸ್ತ್ರ ವಿತರಣೆ ಮತ್ತು ಅನ್ನಸಂತರ್ಪಣೆಯ ಈ ಸೇವಾ ಪರಂಪರೆ ಇಂದು ಬೃಹತ್ ಜನಸಂಗಮವಾಗಿ ಬೆಳೆದು ನಿಂತಿದೆ. ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿರುವ ‘ಅಶೋಕ ಜನಮನ’ ಈ ಬಾರಿ ಪುತ್ತೂರಿನ ಪಾಲಿಗೆ ‘ಅಶೋಕ ಜಾತ್ರೆ’ಯ ಅನುಭವ ನೀಡಿತು ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದವು.

ಮಹಾತ್ಮ ಗಾಂಧಿಜಿಯವರು ಅಧಿಕಾರವನ್ನು ಎಂದಿಗೂ ದರ್ಪದ ಸಾಧನವಾಗಿ ಪರಿಗಣಿಸಲಿಲ್ಲ.ಬದಲಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವ ಜವಾಬ್ದಾರಿಯಾಗಿ ಕಂಡಿದ್ದರು. ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಬದುಕನ್ನು ಬದಲಾಯಿಸಿಕೊಳ್ಳುವುದಕ್ಕಿಂತ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದಕ್ಕೆ ಆದ್ಯತೆ ನೀಡಬೇಕು. ಅಶೋಕ್ ರೈ ಅವರು ಇದೇ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣೆಗೆ ಸ್ಪರ್ಧಿಸುವವರೆಗೆ ವ್ಯಕ್ತಿಯೊಬ್ಬರು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿರಬಹುದು. ಆದರೆ ಜನರಿಂದ ಆಯ್ಕೆಯಾಗಿ ಶಾಸಕರಾದ ಬಳಿಕ ಅವರು ಇಡೀ ಕ್ಷೇತ್ರದ ಜನರ ಪ್ರತಿನಿಧಿಯಾಗುತ್ತಾರೆ. ತನಗೆ ಮತ ನೀಡಿದವರು, ನೀಡದವರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಇದೇ ನಿಜವಾದ ಜನಪ್ರತಿನಿಧಿಯ ಕರ್ತವ್ಯ. ಇದು ಕಾಂಗ್ರೆಸ್ ಪಕ್ಷದ ಸರ್ವಧರ್ಮ ಸಮಭಾವದ ಸಿದ್ಧಾಂತವೂ ಹೌದು ಎಂದರು.

ಜನಸಾಮಾನ್ಯರ ನಾಡಿಮಿಡಿತವನ್ನು ಅರಿತು, ಅವರ ಕಷ್ಟಗಳಿಗೆ ಸ್ಪಂದಿಸಿ, ಬದುಕಿನಲ್ಲಿ ಭರವಸೆ ಮೂಡಿಸುವ ಜನಪ್ರತಿನಿಗಳಿಂದ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ. ಅಶೋಕ್ ಕುಮಾರ್ ರೈ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ‘ಅಶೋಕ ಜನಮನ’ ಕೇವಲ ಹಬ್ಬದ ಆಚರಣೆಯಲ್ಲ. ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಬೆರೆಯುವ, ಅವರ ಸಂತಸದಲ್ಲಿ ಪಾಲ್ಗೊಳ್ಳುವ ಮತ್ತು ಸಾಮಾಜಿಕ ಬದ್ಧತೆಯನ್ನು ವ್ಯಕ್ತಪಡಿಸುವ ಮಾದರಿ ಕಾರ್ಯಕ್ರಮವಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಪ್ರಶಂಸಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಪುತ್ತೂರಿಗೆ ಪ್ರಥಮ ಭಾರಿಗೆ ಆಗಮಿಸಿದ ಅವರನ್ನು ಇದೇ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಸನ್ಮಾನಿಸಿದರು.

ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫಾ. ಜೆ.ಬಿ. ಸಲ್ದಾನ ಅವರು ಆಶೀರ್ವಚನ ನೀಡಿ, ಕ್ರೈಸ್ತ ವಿಶ್ವಾಸದಲ್ಲಿ ದೇವರ ಮೇಲಿನ ಭಕ್ತಿ ಮತ್ತು ಜನರ ಮೇಲಿನ ಪ್ರೀತಿ ಜೊತೆಜೊತೆಯಾಗಿ ಸಾಗಬೇಕು. ದೇವರಲ್ಲಿ ನಂಬಿಕೆ ಇಟ್ಟುಕೊಂಡಿರುವುದರ ಅರ್ಥ ಜನರೊಂದಿಗೆ ಬೆರೆತು ಅವರ ಸೇವೆ ಮಾಡುವುದು. ಭಕ್ತಿ ಮತ್ತು ವಿಶ್ವಾಸದ ನಿಜವಾದ ಅರ್ಥವನ್ನು ಅರಿತುಕೊಂಡಿರುವುದರಿಂದಲೇ ಅಶೋಕ್ ಕುಮಾರ್ ರೈ ಅವರು ಇಂತಹ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

Rose Mac

ಜಾಹೀರಾತು

ದಾರುಲ್ ಮುಸ್ತಾಫ ಇದರ ಕಾರ್ಯದರ್ಶಿ ಮಹರೂಪ್ ಸುಲ್ತಾನ್ ಅಲ್‌ಪುರ್‌ಖಾನಿ ಅವರು ಆಶೀರ್ವಚನ ನೀಡಿ, ಜನಸೇವೆಯೇ ಜನಾರ್ದನನ ಸೇವೆ ಎಂಬ ಮಾತಿದೆ. ಪ್ರವಾದಿ ಮಹಮ್ಮದ್ ಅವರು ಇಸ್ಲಾಂ ಧರ್ಮದ ಸಾರವನ್ನು ವಿವರಿಸುವಾಗ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಉತ್ತಮ ಸಂಸ್ಕಾರ, ವಿನಯಪೂರ್ವಕ ಮಾತು ಮತ್ತು ಹಸಿದವರಿಗೆ ಅನ್ನ ನೀಡುವ ಮಾನವೀಯ ಗುಣಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಕಳೆದ 14 ವರ್ಷಗಳಿಂದ ಅವರು ನಡೆಸಿಕೊಂಡು ಬರುತ್ತಿರುವ ಈ ಸೇವಾ ಕಾರ್ಯದಿಂದ ಇಂದು ನಮ್ಮ ಶಾಸಕರು ಯಾವುದೇ ಧರ್ಮ, ಜಾತಿ, ಪಕ್ಷ ಎಂಬ ಭೇದವಿಲ್ಲದೆ ಎಲ್ಲರಿಗೂ ಅನ್ನ ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಅಶೋಕ್ ಕುಮಾರ್ ರೈ ಅವರು ತಮ್ಮ ಜನ್ಮದಾತೆ ತಾಯಿಯ ಆತ್ಮಜ್ಯೋತಿಯ ಸಾಕ್ಷಾತ್ಕಾರವನ್ನು ಜನಮಾನಸಕ್ಕೆ ತಲುಪಿಸುವಂತಹ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.ಉದ್ದೇಶ ಒಳ್ಳೆಯದಾಗಿದ್ದರೆ, ಸತ್ಕರ್ಮದ ಮನೋಭಾವದಿಂದ ಕೈಗೊಂಡ ಕೆಲಸಗಳು ಸತಲ ನೀಡುತ್ತವೆ. ಅದರ ಹಿಂದೆ ಭಗವಂತನ ಅನುಗ್ರಹ ಮತ್ತು ತಂದೆ-ತಾಯಿಯ ಆಶೀರ್ವಾದ ಇರುತ್ತದೆ. ಒಳ್ಳೆಯ ಕೆಲಸವನ್ನು ಯಾರೇ ಮಾಡಿದರೂ ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿ ಪ್ರಶಂಸಿಸುವ ಮನೋಭಾವ ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಯಲ್ಲಿರಬೇಕು ಎಂದರು . ಅಶೋಕ್ ರೈ ಅವರ ದಾನಶೀಲತೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಅವರ ಮೇಲಿನ ಅಭಿಮಾನದಿಂದಲೇ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ  ಈ ಸೇವೆಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು. ನಮ್ಮಲ್ಲಿ ಯಾರೂ ಶಾಶ್ವತವಲ್ಲ. ಆದರೆ ನಾವು ಮಾಡಿದ ಒಳ್ಳೆಯ ಕರ್ಮಗಳು ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಸತ್ಕರ್ಮಗಳೇ ಸಮಾಜವನ್ನು ವಿಶ್ವಶಾಂತಿಯ ಹಾದಿಯಲ್ಲಿ ಮುನ್ನಡೆಸಬಲ್ಲವು ಎಂದು ಆಶೀರ್ವದಿಸಿದರು.

ಮೂಡಬಿದ್ರೆ ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ತುಳುವಿನಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ವಿಧಾನಸಭೆಯಲ್ಲಿ ಅಶೋಕ್ ರೈ ಅವರೇ ತುಳುವಿನಲ್ಲಿ ಮಾತನಾಡಿದ್ದಾರೆ. ವಿಧಾನಸಭೆಯಲ್ಲಿ ಒಬ್ಬ ಶಾಸಕ ತುಳು ಭಾಷೆಯಲ್ಲಿ ಮಾತನಾಡುವುದನ್ನು ಪ್ರಪ್ರಥಮವಾಗಿ ನಾನು ನೋಡಿದ್ದು ಅಶೋಕ್ ರೈ ಅವರಲ್ಲಿ. ಅವರು ಅಂದು ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಿದ್ದರಿಂದ ಇಂದು ನಮ್ಮ ತುಳುವಿಗೂ ವಿಶೇಷ ಪ್ರಾಶಸ್ತ್ಯ ದೊರಕಿದಂತಾಗಿದೆ. ಈ ಕಾರಣಕ್ಕಾಗಿ ಅವರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು ಎಂದು ಹೇಳಿದರು. ನನ್ನ ಸನ್ಯಾಸ ಜೀವನದಲ್ಲಿ ಒಬ್ಬ ಶಾಸಕರು ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವುದನ್ನು ಎಲ್ಲಿಯೂ ನೋಡಿಲ್ಲ. ನಾನು ನಿಮಗೆ ಒಂದು ಒಟ್ಟೆಮುಕ್ಕಾಲು ಉಪಕಾರವನ್ನೂ ಮಾಡಿಲ್ಲ. ಆದರೂ ನೀವು ಯಾವುದೇ ಅರ್ಜಿ ಹಾಕದೆಯೇ ನಮ್ಮ ಮಠಕ್ಕೆ ಒಂದು ಕೋಟಿ ರೂಪಾಯಿ ಅನುದಾನ ಒದಗಿಸಿಕೊಟ್ಟಿರುವುದು ಸಂತೋಷದ ಸಂಗತಿ. ಅದೇ ರೀತಿ ಈಶ್ವರ ದೇವಸ್ಥಾನದ ಅಭಿವೃದ್ಧಿಗೂ ಅಶೋಕ್ ರೈ ಅವರು ಕೈಗೊಂಡಿರುವ ಕೆಲಸ ಮಹತ್ವದ್ದಾಗಿದೆ ಎಂದು ಹೇಳಿದ ಶ್ರೀಗಳು, ಬಡವರ ಕಣ್ಣೀರು  ಜನಸೇವೆ ಮಾಡುವ ನಾಯಕನಿಗೆ ನಿವೃತ್ತಿ ಎಂಬುದೇ ಇಲ್ಲ. ಆ ದೃಷ್ಟಿಯಿಂದ ಅಶೋಕ್ ಕುಮಾರ್ ರೈ ಅವರು ನಿವೃತ್ತಿ ಇಲ್ಲದ ನಾಯಕ ಎಂದು ಬಣ್ಣಿಸಿದರು.

8722552464 Astrloger

ಜಾಹೀರಾತು

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಧರ್ಮಶ್ರದ್ಧೆಯೊಂದಿಗೆ ನಾಯಕತ್ವದ ಗುಣ ಎಲ್ಲರಲ್ಲೂ ಇರುವುದಿಲ್ಲ. ಅಂತಹ ವಿಶಿಷ್ಟ ನಾಯಕತ್ವ ಹೊಂದಿರುವವರಲ್ಲಿ ಅಶೋಕ್ ಕುಮಾರ್ ರೈ ಒಬ್ಬರು ಎಂದು ಹೇಳಿದರು. ಸಂಪತ್ತು ಬರುವುದು ಕೇವಲ ಸ್ವಂತ ಅನುಭವಕ್ಕಾಗಿ ಅಲ್ಲ. ಅದನ್ನು ದಾನ ಮಾಡುವುದಕ್ಕೂ, ಸಮಾಜದ ಒಳಿತಿಗಾಗಿ ವಿನಿಯೋಗಿಸುವುದಕ್ಕೂ ಎಂಬ ಭಾವನೆ ಇರಬೇಕು. ಅಶೋಕ್ ರೈ ಅವರಲ್ಲಿ ಅಂತಹ ವಿಶಾಲ ಹೃದಯದ ಗುಣವಿದೆ. ಹಿರಿಯರಿಗೆ ಅಪಾರ ಗೌರವ ನೀಡುವ ದೊಡ್ಡ ಮನಸ್ಸು ಅವರದ್ದು. ಜನಮನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ತುಳುವಿನ ತೇರು ಎಳೆಯಲು ಮತ್ತು ಭಾಷೆಗೆ ಬಲ ತುಂಬಲು ಅಶೋಕ್ ರೈ ಅವರು ಮಹತ್ವದ ಕೆಲಸ ಮಾಡಿದ್ದಾರೆ. ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ದೊರೆತರೆ ಮಾತ್ರ ಸಾಲದು.ಸಂವಿಧಾನದ ಎಂಟನೇ ಅನುಸೂಚಿಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿಯೂ ಪ್ರಯತ್ನಗಳು ಮುಂದುವರಿಯಬೇಕು. ಕೆಲಸ ಮಾಡುವ ಮುನ್ನ ಸಿಂಹಾವಲೋಕನ ಮಾಡಿಕೊಂಡು ಮುಂದಿನ ಹೆಜ್ಜೆ ಇಡುವ ಅಶೋಕ್ ರೈ ಅವರಿಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ. ರಾಷ್ಟ್ರೀಯ ಪ್ರಜ್ಞೆ ಮತ್ತು ಧರ್ಮಪ್ರeಯನ್ನು ಹೊಂದಿರುವ ಅವರು ಆದರ್ಶ ಶಾಸಕರಾಗಿದ್ದಾರೆ. ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಅವರ ಗುಣವೇ ಜನರ ಮನಸ್ಸಿನಲ್ಲಿ ಸ್ಥಾನ ಕಲ್ಪಿಸಿದೆ. ಅಶೋಕ ಜನಮನ ಜನಮೆಚ್ಚುಗೆಯ ಕಾರ್ಯಕ್ರಮವಾಗಿ ರೂಪುಗೊಂಡಿರುವುದಕ್ಕೆ ಇದೇ ಪ್ರಮುಖ ಕಾರಣ ಎಂದು ಹೇಳಿ, ಆಶೀರ್ವದಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಪಾಲಿನ ದೊಡ್ಡ ಸಂಪತ್ತು.ರಾಜಕೀಯ ಲಾಭದ ದೃಷ್ಟಿಯಿಂದ ಯಾವುದೇ ಕಾರ್ಯಕ್ರಮವನ್ನು ಮಾಡುತ್ತಿಲ್ಲ. ನನ್ನ ಉದ್ಯಮದ ಒಂದು ಭಾಗ ಸಮಾಜದ ಸಂಕಷ್ಟದಲ್ಲಿರುವವರಿಗೆ, ಪ್ರೀತಿ-ವಿಶ್ವಾಸದಿಂದ ನಮ್ಮೊಂದಿಗೆ ಇರುವ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ.ಶಾಸಕನಾಗುವ ಮೊದಲಿನಿಂದಲೂ ಈ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಆದರೆ ಕೆಲವರು ಈ ಕಾರ್ಯಕ್ರಮಗಳನ್ನು ರಾಜಕೀಯದ ದೃಷ್ಟಿಯಿಂದ ನೋಡುತ್ತಾರೆ. ಆದರೆ ಇದು ಖಂಡಿತವಾಗಿಯೂ ರಾಜಕೀಯ ಉದ್ದೇಶದ ಕಾರ್ಯಕ್ರಮವಲ್ಲ ಎಂದರು.

LOTUS TRAVEL

ಜಾಹೀರಾತು

ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಲಾಗಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದ ಯಾವುದೇ ಮನೆಗೂ ಕುಡಿಯುವ ನೀರಿನ ಸಮಸ್ಯೆ ಇರಬಾರದು.ಜನರು ಕಲುಷಿತ ನೀರಿನ ಬದಲು ಶುದ್ಧ ಕುಡಿಯುವ ನೀರನ್ನು ಪಡೆಯಬೇಕು ಎಂಬ ಉದ್ದೇಶದಿಂದ ಸುಮಾರು 1,006 ಕೋಟಿ ರೂ.ಗಳ ಕುಡಿಯುವ ನೀರಿನ ಯೋಜನೆ ರೂಪಿಸಿ ಅನುಷ್ಠಾನದ ಹಂತಕ್ಕೆ ತರಲಾಗಿದೆ.ಮುಂದಿನ ಆರು ತಿಂಗಳೊಳಗೆ ಕ್ಷೇತ್ರದ ಮನೆಮನೆಗೂ ಕುಡಿಯುವ ನೀರು ತಲುಪಿಸುವ ಗುರಿ ಹೊಂದಲಾಗಿದೆ ಎಂದ ಅವರು,ಪುತ್ತೂರಿನಲ್ಲಿ ವ್ಯವಸ್ಥಿತ ಆರ್‌ಟಿಒ ಪರೀಕ್ಷಾ ಟ್ರ್ಯಾಕ್ ಇರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಜನರು ವಾಹನ ಚಾಲನಾ ಪರವಾನಗಿ ಪರೀಕ್ಷೆಗಾಗಿ ಪುತ್ತೂರಿಗೆ ಬರಬೇಕಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಡೂರಿನಲ್ಲಿ ಆರ್‌ಟಿಒ ಪರೀಕ್ಷಾ ಟ್ರ್ಯಾಕ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಉಡುಪಿಗೆ ಮಂಜೂರಾಗಿದ್ದ ಯೋಜನೆಯನ್ನು ಅಗತ್ಯ ಜಾಗದ ಸಮಸ್ಯೆಯಿಂದಾಗಿ ಪುತ್ತೂರಿಗೆ ತರಲು ಪ್ರಯತ್ನಿಸಲಾಗಿದೆ.ಪುತ್ತೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸುಮಾರು 15 ಎಕರೆ ಜಾಗವನ್ನು ಗುರುತಿಸಲಾಗಿದೆ.ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಈ ಕ್ರೀಡಾಂಗಣದಲ್ಲಿ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಫುಟ್ಬಾಲ್, ಬಾಸ್ಕೆಟ್‌ಬಾಲ್, ಸ್ಕೇಟಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಮಕ್ಕಳಿಗೆ ಮಾತ್ರವಲ್ಲದೆ ಪೋಷಕರಿಗೂ ವಾಕಿಂಗ್ ಮತ್ತಿತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು. ರಸ್ತೆಗಳ ಅಭಿವೃದ್ಧಿ ಪುತ್ತೂರು ಉಪ್ಪಿನಂಗಡಿ ರಸ್ತೆಗೆ 4 ಲೇನ್ ರಸ್ತೆ, ಮೆಡಿಕಲ್ ಕಾಲೇಜು ರಸ್ತೆಗೆ 15 ಕೋಟಿ ಅನುದಾನ ಒದಗಿಸಲಾಗಿದೆ.ಮುಂದಿನ ವರ್ಷ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಮೆಡಿಕಲ್ ಕಾಲೇಜು ಖಂಡಿತಾ ಆರಂಭವಾಗಲಿದೆ ಎಂದರು.

ಪುತ್ತೂರಿಗೆ ವೈದ್ಯಕೀಯ ಕಾಲೇಜು ತರುವ ಭರವಸೆಯನ್ನು ಚುನಾವಣೆಯ ಸಂದರ್ಭದಲ್ಲಿ ನೀಡಲಾಗಿತ್ತು. ಜನರಿಗೆ ನೀಡಿದ ಮಾತಿನಂತೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಪ್ರಯತ್ನ ಸಾಕಾರಗೊಂಡಿದೆ. ವೈದ್ಯಕೀಯ ಕಾಲೇಜು ಅಶೋಕ್ ರೈ ಅವರಿಗಾಗಲಿ, ಒಬ್ಬ ವ್ಯಕ್ತಿಯ ಹೆಸರಿಗಾಗಲಿ ಅಲ್ಲ. ಇದು ಇಡೀ ಪುತ್ತೂರು ಮಾತ್ರವಲ್ಲದೆ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಗೆ ಬರುವ ಯಾವುದೇ ವ್ಯಕ್ತಿಯ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷವನ್ನು ಕೇಳುವುದಿಲ್ಲ. ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ವೈದ್ಯಕೀಯ ಕಾಲೇಜಿಗೆ ಒಂದು ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆಯಾಗಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ಯೋಜನೆಯ ಬಗ್ಗೆ ಹಲವರು ಟೀಕೆ ಮಾಡಿದರು, ಇದು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಬರೆದರು. ಆದರೆ ಕೇವಲ ಭಾಷಣ ಮಾಡುವುದು ಸುಲಭ. ಹೇಳಿದ ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ನಿಜವಾದ ಸವಾಲು. ಅದಕ್ಕಾಗಿ ನಿರಂತರ ಹೋರಾಟ ಮತ್ತು ಪ್ರಯತ್ನ ಅಗತ್ಯ ಎಂದು ಅಶೋಕ್ ರೈ ಹೇಳಿದರು. ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ 3600 ಮಂದಿ ಬಾಡಿಗೆ ಮನೆಯಲ್ಲಿದ್ದಾರೆ. ಅವರು ನಮ್ಮ ಕಚೇರಿಗೆ ಬಂದಿದ್ದಾರೆ. ಅವರಿಗೆ ಇವತ್ತಿನ ತನಕ ನ್ಯಾಯಕೊಡಲು ಆಗಿಲ್ಲ. ಮುಂದಿನ ಆರು ತಿಂಗಳಲ್ಲಿ ಅವರಿಗೆ ನಿವೇಶನ, ಸೈಟು ಕೊಡುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಹೌದು ಎಂದು ಒಪ್ಪಿಕೊಳ್ಳುವ ಮನೋಭಾವ ಬೇಕು. ಒಳ್ಳೆಯ ಕೆಲಸ ಮಾಡಿದ್ರೆ ನಿಮ್ಮ ಮಕ್ಕಳಿಗೂ ಆಗುತ್ತದೆ. ನಿಮ್ಮಿಂದ ಆಗ್ಲಿಲ್ಲವಲ್ಲ, ಒಳ್ಳೆ ಕೆಲಸ ಮಾಡುವವರಿಗಾದರೂ ಶುಭಹಾರೈಸಿ. ಪುತ್ತೂರಿಗೆ ವಂದೇ ಭಾರತ್ ಬಂತು ನಾವೇನಾದರೂ ದೂರಿದ್ದೇವಾ. ಪುತ್ತೂರಲ್ಲಿ ಸ್ಟಾಪ್ ಕೊಡಿ ಎಂದು ಕೇಳಿದ್ದೇವೆ. ಪುತ್ತೂರಿನ ಅಭಿವೃದ್ಧಿಯಾಗಬೇಕು. ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ ಸಿಗ್ಬೇಕು ಎನ್ನುವುದೊಂದೇ ನಮ್ಮ ಉದ್ದೇಶ. ಧರ್ಮದ ಬಗ್ಗೆ ಮಾತನಾಡ್ತೀರಲ್ಲ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸ್ಥಿತಿ ಹಿಂದೆ ಹೇಗಿತ್ತು. ದೇವರು ನನಗೆ ಶಕ್ತಿ ಕೊಟ್ಟ ಬಳಿಕ, ಮಹಾಲಿಂಗೇಶ್ವರ ದೇವಳದ ಜಾಗ ಒಳಗೆ ಹಾಕಿಕೊಂಡಿದ್ದನ್ನು ತೆರವು ಮಾಡಿಸಿ ಎಷ್ಟೋ ಕೋಟಿಯ ಜಾಗವನ್ನು ದೇವಸ್ಥಾನಕ್ಕೆ ಮರು ಸ್ವಾಧಿನ ಮಾಡಿಸಿಕೊಟ್ಟಿದ್ದೇವೆ. ದೇವಸ್ಥಾನ,ದೈವಸ್ಥಾನಗಳ ಜಾಗವನ್ನು ದೇವರ ಹೆಸರಿಗೆ ಮಾಡಿಕೊಡುವ ಕೆಲಸ ಮಾಡ್ತಾ ಇದ್ದೇವೆ. ಮಠ ಮಂದಿರಗಳಿಗೆ ಅನುದಾನ ನೀಡುವ ಕೆಲಸ ಮಾಡುತ್ತಿದ್ದೇವೆ. ಎಲ್ಲೆಲ್ಲೋ ರೋಡಲ್ಲಿ ನಿಂತು ಏನೆಲ್ಲ ಮಾತನಾಡುವುದಿಲ್ಲ. ನೀವು ನಮ್ಮ ಬಗ್ಗೆ ಎಷ್ಟು ಬೇಕಾದರೂ ಮಾತನಾಡಿ, ಅದಕ್ಕೆ ಉತ್ತರ ಕೊಡಲು ಹೋಗೋದಿಲ್ಲ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಅವರು ಮಾತನಾಡಿ ಅಶೋಕ್ ರೈ ಅವರ ಕೆಲಸದ ಬಗ್ಗೆ ಬಹಳಷ್ಟು ಸಂತೋಷ ಪಡುವ ವ್ಯಕ್ತಿ ನಾನು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣು ಒರೆಸುವ ಹೃದಯ ಶ್ರೀಮಂತಿಕೆಯನ್ನು ಅಶೋಕ್ ಕುಮಾರ್ ರೈ ಅವರ ಕುಟುಂಬಕ್ಕೆ ಪರಮಾತ್ಮ ನೀಡಿದ್ದಾರೆ. ಅಶೋಕ್ ಕುಮಾರ್ ರೈ ಅವರು ರಾಜಕೀಯದಲ್ಲಿ ಅವರ ಜೀವನದ ಬದಲು ಸಮಾಜದ ಬಡ ಜನರಿಗೆ ಸಹಾಯ ಮಾಡುವ ಕೆಲಸ ಮಾಡಿದ್ದಾರೆ. ಅವರು ಕರ್ನಾಟಕ ರಾಜ್ಯದ ಯಶಸ್ವಿ ಶಾಸಕರು ಎಂದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಮಾತನಾಡಿ ಅಶೋಕಣ್ಣ ಅವರ ಜನಮನ ಕಾರ್ಯಕ್ರಮಕ್ಕೆ ಸುಮಾರು ನಾಲ್ಕೈದು ವರ್ಷದಿಂದ ಬರುತ್ತಿದ್ದೇನೆ. ಎಲ್ಲಾ ಧರ್ಮದ ಜನರ ಮನಸ್ಸನ್ನು ಗೆದ್ದವರು ಅಶೋಕಣ್ಣ.  18 ಗಂಟೆಯೂ ಜನರ ಸೇವೆ ಮಾಡುವವರು ಅಶೋಕಣ್ಣ. ಜಿಲ್ಲೆಯಲ್ಲಿ ಅಭಿವೃದ್ದಿಯಾಗುತ್ತಿರುವ ಕ್ಷೇತ್ರ ಪುತ್ತೂರು ಮತ್ತು ಉಳ್ಳಾಲ ಕ್ಷೇತ್ರ. ಸರಕಾರಿ ಮೆಡಿಕಲ್ ಕಾಲೇಜು ತಂದ ಕೀರ್ತಿ ಅಶೋಕಣ್ಣನಿಗೆ ಸಲ್ಲುತ್ತದೆ. ಇಲ್ಲಿನ ಊರಿನವರೇ ಮುಖ್ಯಮಂತ್ರಿಯಾಗಿದ್ದಾಗ ಅವರಿಗೂ ಕೂಡಾ ಮೆಡಿಕಲ್ ಕಾಲೇಜು ತರಲು ಆಗಿಲ್ಲ. ಆದರೆ ಅಶೋಕ್ ರೈ ಅವರು ಮೆಡಿಕಲ್ ಕಾಲೇಜು ತಂದು ಕೊಟ್ಟಿದ್ದಾರೆ ಎಂದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸೂರಿಲ್ಲದವರಿಗೆ ಸೂರು ವೈದ್ಯಕೀಯ ಸೇವೆ ಮಾಡಿದ ಅಶೋಕ್ ಕುಮಾರ್ ರೈ ಅವರು ಸಮಾಜ ಸೇವೆ ಮಾಡುವಾಗ ಜಾತಿ ಪಕ್ಷ ನೋಡಿಲ್ಲ ಆಗ ಅವರು ಬಿಜೆಪಿಯಲ್ಲಿದ್ದರು. 1 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿದ್ದರು. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದು ಅಶೋಕ್ ರೈ. ರಾಜ್ಯದಲ್ಲಿ ಮಾಡದ ಸಾಧನೆಯನ್ನು ಅಶೋಕ್ ಕುಮಾರ್ ರೈ ಅವರು 2,500 ಜನರಿಗೆ ಅಕ್ರಮ ಸಕ್ರಮ ಹಕ್ಕುಪತ್ರ ನೀಡುವ ಮೂಲಕ ಮಾಡಿದ್ದಾರೆ. ಮೆಡಿಕಲ್ ಕಾಲೇಜನ್ನು ಈ ಕ್ಷೇತ್ರಕ್ಕೆ ತಂದ ಆಧುನಿಕ ಭಗೀರಥ ಎಂದವರು ಹೇಳಿದರು.

ರೈ ಎಸ್ಟೇಟ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಆರ್.ಪಿ.ಶೆಟ್ಟಿಯವರು ಸ್ವಾಗತಿಸಿ ಮಾತನಾಡಿ ಕೆಲಸವನ್ನು ಮಾಡಿದಾಗ -ಲವನ್ನು ಭಗವಂತ ನೀಡುತ್ತಾನೆ ಎಂಬುದು ನಮ್ಮ ಶಾಸಕರ ಆಶಯ. ಅದೇ ರೀತಿ ಶಾಸಕರು ಕೆಲಸ ಮಾಡುತ್ತಾರೆ. ಇವತ್ತು ಪುತ್ತೂರಿನಲ್ಲಿ ಮನೆ ಮನದ ನಿಜವಾದ ದೀಪಾವಳಿ ನಡೆಯುತ್ತಿದೆ.ಟ್ರಸ್ಟ್ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಅನೇಕ ಸಮಾಜ ಸೇವೆ ನಡೆಯುತ್ತಿವೆ ಎಂದರು.

ದೈವಾರಾಧನೆಯೊಂದಿಗೆ ಸಮಾಜ ಸೇವೆ ಮತ್ತು ನಾಟಿ ವೈದ್ಯರಾಗಿರುವ ಬಜತ್ತೂರು ಗ್ರಾಮದ ಕಾಂಚನ ಸುಬ್ಬಣ್ಣ ಪಂಡಿತ, 50 ವರ್ಷಗಳಿಂದ ಮುಸ್ಲಿಂ ಸಮುದಾಯದ ಮಯ್ಯತ್ ಪರಿಪಾಲನೆ ಮಾಡುತ್ತಿರುವ ಬಪ್ಪಳಿಗೆಯ ಕೆ.ಫಝಲ್ ಹಕ್, ಆಟೋ ಚಾಲಕಿ ಆರ್ಲಪದವಿನ ಗೀತಾ ಜಿ.ಎ, ಹೈನುಗಾರಿಕೆ ಮೂಲಕ ಮಕ್ಕಳ ಉನ್ನತ ವಿದ್ಯಾಭ್ಯಾಸ ಮತ್ತು ಸಾರ್ವಜನಿಕ ಸೇವೆ ಮಾಡುತ್ತಿರುವ ನರಿಮೊಗರು ಗ್ರಾಮ ಮುಕ್ವೆಯ ಝುಬೈರ್ ಬಿನ್ ಅಹಮ್ಮದ್, ಎರಡೂ ಕಣ್ಣುಗಳ ದೃಷ್ಟಿ ಹೀನರಾದರೂ ಸಾಬೂನು ಫಾಕ್ಟರಿಯಲ್ಲಿ ದುಡಿದು ಕುಟುಂಬ ಪರಿಪಾಲನೆಯ ಮೂಲಕ ಸ್ವಾವಲಂಬನೆಯ ಬದುಕು ಸಾಗಿಸುತ್ತಿರುವ ವಿಟ್ಲ ವೀರಕಂಭದ ಮಹಾಬಲ ಶೆಟ್ಟಿ, ಸಮಾಜ ಸೇವೆ, ವರ್ಷಂಪ್ರತಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಮನೆ ಕಟ್ಟಿಸಿ ಕೊಟ್ಟ ಬೊಳುವಾರು ನಿವಾಸಿ ನೌಷದ್ ಹಾಜಿ, 30 ಬಾರಿ ರಕ್ತದಾನ, ಅಶಕ್ತರಿಗೆ ಅಸೆರಯಾಗಿರುವ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಆಲಿ, ಉತ್ತಮ ಕೃಷಿಕ ಇಳಂತಾಜೆಯ ಜಗನ್ನಾಥ ರೈ, ನಾಟಿ ವೈದ್ಯೆ ಅಳಿಕೆ ಚೆಂಡುಕಳ ನಿವಾಸಿ ಸುಶೀಲ ದಿನೇಶ್, ಪ್ರಾಮಾಣಿಕ ಅಟೋ ಚಾಲಕ ಕಲ್ಲರ್ಪೆಯ ಸದಾಶಿವ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸುಮಾರು 1 ಲಕ್ಷಕ್ಕೂ ಮಿಕ್ಕಿ ಜನರ ನಿರೀಕ್ಷೆ ಇದ್ದ ಕಾರಣ ತುಳಸಿ ಕ್ಯಾಟರರ‍್ಸ್‌ನ ಕೇಪುಳು ಹರೀಶ್ ಭಟ್‌ರವರ ನೇತೃತ್ವದಲ್ಲಿ 45 ಮಂದಿ ಬಾಣಸಿಗರಿಂದ ಲೈವ್ ದೋಸೆ ಮತ್ತು ಭೋಜನ ತಯಾರಿ ಮಾಡಲಾಗಿದೆ.ಬೆಳಿಗ್ಗೆ ಮತ್ತು ಸಂಜೆ ಸುಮಾರು 1.50 ಲಕ್ಷ ದೋಸೆ ವಿತರಣೆ ಮಾಡಲಾಗಿದೆ. ಮಧ್ಯಾಹ್ನ 60 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಂಜೆ ದೋಸೆ ಮುಗಿದ ಕಾರಣ ಆಗಮಿಸಿದವರೆಲ್ಲರಿಗೆ ಉಪ್ಪಿಟ್ಟು, ಟೊಮೆಟೋ ಬಾತ್ ವಿತರಿಸಲಾಗಿದೆ. ರಾತ್ರಿ 7 ಗಂಟೆಯವರೆಗೂ ಉಪ್ಪಿಟ್ಟು ವಿತರಣೆ ನಡೆಯುತ್ತಿತ್ತು.

ಮಾಜಿ ಸಚಿವ ಬಿ.ರಮಾನಾಥ ರೈ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಮ್.ಎಸ್. ಮೊಹಮ್ಮದ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಭಟ್, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಉಪ್ಪಿನಂಗಡಿ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪಂಚ ಗ್ಯಾರೆಂಟಿ ಅನುಷ್ಟಾನ ಸಮಿತಿ ಪುತ್ತೂರು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ,ದ.ಕ.ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ ರೈ, ಫಝಲ್ ರಹೀಂ, ಮೆಸ್ಕಾಂ ನಿರ್ದೇಶಕ ಮುರಳೀಧರ ರೈ ಮಠಂತಬೆಟ್ಟು,ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಕಕ್ಷ ಯು.ಟಿ.ತೌಸೀಫ್, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ,ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಉಷಾ ಅಂಚನ್, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶಿವರಾಮ ಆಳ್ವ,ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು,ಮಾಜಿ ಕಾರ್ಪೋರೇಟರ್ ನವೀನ್ ಡಿ ಸೋಜ,ಶಾಹುಲ್ ಹಮೀದ್, ನಝೀರ್ ಮಠ, ಬೇಬಿ ಕುಂದರ್, ಶೈಲಜಾ. ಶಶಿಕಲಾ ಪದ್ಮನಾಭ, ರುಕ್ಮಾನ್ ಬಂಟ್ವಾಳ, ಪುತ್ತೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಟ್ರಸ್ಟ್ ಕೋರ್ ಕಮಿಟಿ ಸದಸ್ಯ ಮಹಮ್ಮದ್ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಾನಸಿರಿ ಕಲಾ ಕೇಂದ್ರದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ರೈ ಎಸ್ಟೇಟ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಆರ್ ಶೆಟ್ಟಿ ಸ್ವಾಗತಿಸಿದರು. ಪುತ್ತೂರು ನಗರ ಯೋಜನಾ ಪ್ರಾಽಕಾರದ ಸದಸ್ಯ ನಿಹಾಲ್ ಪಿ ಶೆಟ್ಟಿ ಅವರು ವಂದಿಸಿದರು. ಜಗನ್ನಾಥ ಶೆಟ್ಟಿ, ಮನ್ಮಥ ಶೆಟ್ಟಿ, ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರ್ವಹಿಸಿದರು.

 

SendShare2Share
Previous Post

ಸಂಗೀತ ಕ್ಷೇತ್ರದ ಸಾಧನೆಗಾಗಿ ಯುವ ಗಾಯಕ ಪದ್ಮರಾಜ್ ಬಿ. ಸಿ ಚಾರ್ವಾಕರವರಿಗೆ ‘ಕನ್ನಡ ಸಿರಿ ರತ್ನ ಪ್ರಶಸ್ತಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..