ಪುತ್ತೂರು: ರಾಜೀವ್ ಗಾಂದಿ ಆರೋಗ್ಯ ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರ ನೇತೃತ್ವದ ಮೂವರು ಪರಿಣಿತರ ತಂಡ ಪುತ್ತೂರಿಗೆ ಭೇಟಿ ನೀಡಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂದಿ ಸಿ ನಡೆಸಲಾಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.
ರಾಜೀವ್ ಗಾಂದಿ ಆರೋಗ್ಯ ವಿ.ವಿ.ಯ ಸೆನೆಟ್ ಸದಸ್ಯರಾದ ಸುರೇಶ್, ಡಾ. ರಮೇಶ್ ಬಾಬು, ಡಾ.ಮಿಥುನ್ ಅವರ ತಂಡ ಪುತ್ತೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವಿಶೇಷ ಅದಿಕಾರಿ ಡಾ.ಲೋಹಿತ್ ಕುಮಾರ್ ಅವರ ನೇತೃತ್ವದಲ್ಲಿ ಭೇಟಿ ನೀಡಿತು. 220 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುತ್ತಿರುವ, ಹಾಲಿ 100 ಹಾಸಿಗೆಗಳಿರುವ ಸರಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜಾಗಿ ಪರಿವರ್ತನೆಯಾಗುತ್ತಿರುವ ಹಳೆ ನ್ಯಾಯಾಲಯ ಸಂಕೀರ್ಣಗಳನ್ನು ತಂಡ ಪರಿಶೀಲಿಸಿತು.
ಹಳೆ ನ್ಯಾಯಾಲಯ ಕಟ್ಟಡ ಸಂಕೀರ್ಣವನ್ನು ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಪೂರ್ತಿ ನವೀಕರಣ ಮಾಡಲಾಗುತ್ತಿದೆ. ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಹಳೆ ತಾಲೂಕು ಕಚೇರಿ ಕಟ್ಟಡವನ್ನು ನವೀಕರಣ ಮಾಡಿ ಆಸ್ಪತ್ರೆಯ ವಿಸ್ತರಿತ ಕಟ್ಟಡವಾಗಿ ಪರಿವರ್ತನೆ ಮಾಡಲಾಗುತ್ತಿದೆ. ನ್ಯಾಯಾಲಯ ಸಂಕೀರ್ಣ ಕಟ್ಟಡಕ್ಕೆ ಮೆಡಿಕಲ್ ಕಾಲೇಜು ಬೋರ್ಡ್ ಅಳವಡಿಸಲಾಗಿದ್ದು, ಪ್ರತೀ ಕೊಠಡಿಯಲ್ಲೂ ಸಂಬಂಧಪಟ್ಟ ನಾಮ ಫಲಕಗಳನ್ನು ಅಳವಡಿಸಲಾಗಿದೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಬಳಕೆಯಾಗುವ ಅನೇಕ ಉಪಕರಣಗಳು ಕೂಡ ಅಳವಡಿಕೆಯಾಗುತ್ತಿವೆ.
ಸಿಂಡಿಕೇಟ್ನಲ್ಲಿ ಮಂಡನೆ:
ಈ ಸಂದರ್ಭ ಡಾ.ಲೋಹಿತ್ ಕುಮಾರ್ ಮತ್ತು ಡಾ. ಸುರೇಶ್ ಅವರು ಮಾತನಾಡಿ, ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗಾಗಿ ಪುತ್ತೂರಿನಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿ ರಾಜೀವ್ ಗಾಂ ಆರೋಗ್ಯ ವಿ.ವಿ.ಗೆ ವರದಿ ಸಲ್ಲಿಸಲಿದ್ದೇವೆ ಅಲ್ಲಿ ನಡೆಯುವ ಸಿಂಡಿಕೇಟ್ ಸಭೆಯಲ್ಲಿ ವರದಿ ಮಂಡನೆಯಾದ ಬಳಿಕ ಪುತ್ತೂರು ಮೆಡಿಕಲ್ ಕಾಲೇಜಿಗೆ ರಾಜೀವ್ ಗಾಂ ಆರೋಗ್ಯ ವಿ.ವಿ.ಯ ಸಂಯೋಜನೆ ಸಿಗಲಿದೆ. ಇದರ ಪ್ರಮಾಣ ಪತ್ರವನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗುವುದು ಎಂದರು.
ಇದಾದ ಬಳಿಕ ಕೇಂದ್ರ ಸರಕಾರಕ್ಕೆ ನ.30ರ ಒಳಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ಮುಂದಿನ ಹಂತದಲ್ಲಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ.
ಜನವರಿಯಲ್ಲಿ ನ್ಯಾಶನಲ್ ಮೆಡಿಕಲ್ ಕೌನ್ಸಿಲ್ನ ತಂಡ ಪರಿಶೀಲನೆಗೆ ಬರಲಿದೆ. ಅದರ ವರದಿ ಸಲ್ಲಿಕೆಯಾದ ಬಳಿಕ ಕೇಂದ್ರ ಸರಕಾರದಿಂದ ಅನುಮತಿ ಸಿಗುತ್ತದೆ. ಮುಂದಿನ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಮೆಡಿಕಲ್ ಕಾಲೇಜಿನ ಮೊದಲ ವರ್ಷಕ್ಕೆ 50 ಸೀಟುಗಳ ದಾಖಲಾತಿ ನಡೆಯಲಿದೆ ಎಂದರು.
ಶಾಸಕ ಅಶೋಕ್ ರೈ ಮಾತನಾಡಿ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬೇಕಾದ ಎಲ್ಲ ಸಿದ್ಧತಾ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಇದರ ಬಗ್ಗೆ ನನಗೆ ಪೂರ್ಣ ತೃಪ್ತಿ ಇದೆ ಎಂದರು. ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾ ಕಾರಿ ಡಾ.ಯದುರಾಜ್ ಉಪಸ್ಥಿತರಿದ್ದರು.

























