ನವದೆಹಲಿ: ಜುಲೈ 23 ಕೇಂದ್ರ ಬಜೆಟ್ ಮಂಡನೆ: ಸಚಿವ ಕಿರಣ್ ರಿಜಿಜು ಘೋಷಣೆ
ಜುಲೈ 23 ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಘೋಷಣೆ ಮಾಡಿದ್ದಾರೆ.
2024 ರ ಬಜೆಟ್ ಅಧಿವೇಶನವು ಜುಲೈ 22 ರಿಂದ ಆಗಸ್ಟ್ 12 ರವರೆಗೆ ಪ್ರಾರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಪ್ರಕಟಿಸಿದ್ದಾರೆ.
ಮೂರನೇ ಬಾರಿ ಕೇಂದ್ರದಲ್ಲಿ ಮೋದಿ ಸರಕಾರ ಗದ್ದುಗೆ ಪಡೆದುಕೊಂಡ ನಂತರದ ಮೊದಲ ಬಜೆಟ್ ಇದಾಗಿದೆ. ಅಯಾವ್ಯಾಯಗಳ ಜೊತೆ ಏರಿಕೆ ಇಳಿಕೆ ಲೆಕ್ಕಾಚಾರವು ಮತ್ತು ಯಾವ ಗಾತ್ರದಲ್ಲಿ ಬಜೆಟ್ ಇರಲಿದೆ ಎಂಬ ಜನರ ಚಿತ್ತದ ಒಟ್ಟಿಗೆ ಹಲವು ನಿರೀಕ್ಷೆಗಳು ಕೇಂದ್ರದ ಮೇಲಿದೆ.