ಪ್ರಜಾಧ್ವನಿ ನ್ಯೂಸ್ ಪುತ್ತೂರು ವರದಿ ಫಲಶ್ರುತಿ
ಪುತ್ತೂರು: ಚೆಲ್ಯಡ್ಕ ಸೇತುವೆ ಶಿಥಿಲ. ಬದಲಿ ರಸ್ತೆಯ ಮೂಲಕ ಸಂಚಾರಕ್ಕೆ ಅವಕಾಶ: ಶಾಸಕ ಅಶೋಕ್ ರೈ
“ಚೆಲ್ಯಡ್ಕ ಸೇತುವೆ ಸಂಚಾರಕ್ಕೆ ನಿಷೇಧ ತೊಂದರೆಗೊಳಗಾದ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳಿಂದ ಮಂಗಳವಾರ ಬೃಹತ್ ರಸ್ತೆ ತಡೆ ಪ್ರತಿಭಟನೆ ನಿರ್ಧಾರ” ಎಂಬ ಶೀರ್ಷಿಕೆಯಾಡಿಯಲ್ಲಿ ವರದಿಯನ್ನು ಪ್ರಜಾಧ್ವನಿ ನ್ಯೂಸ್ ಪುತ್ತೂರು ನಿನ್ನೆ ಪ್ರಕಟಿಸಿತ್ತು.
ಪ್ರಜಾಧ್ವನಿ ನ್ಯೂಸ್ ಪುತ್ತೂರು ವರದಿಯನ್ವಯೆನ್ನುವಂತೆ ಗುಮಟ್ಟಗದ್ದೆಯಿಂದ ನಾಳೆ ಬಸ್ ಸಂಚಾರ ಆರಂಭವಾಗಲಿದೆ ಎಂದು
ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಆದೇಶ ಈ ರೀತಿ ಇದೆ:
ಪುತ್ತೂರು: ಪುತ್ತೂರಿನಿಂದ ಪರ್ಲಡ್ಕ- ವಳತ್ತಡ್ಕ, ಮಾರ್ಗವಾಗಿ ಗುಮ್ಮಟಗದ್ದೆಗೆ ನಾಳೆಯಿಂದ ಸರಕಾರಿ ಬಸ್ ಸೇವೆ ಆರಂಭವಾಗಲಿದೆ.
ಚೆಲ್ಯಡ್ಕ ಸೇತುವೆ ಮುಳುಗಡೆ ಮತ್ತು ಅಪಾಯಕಾರಿಯಾಗಿದೆ ಎಂದು ಕಳೆದ ವಾರದ ಹಿಂದೆ ಈ ಮಾರ್ಗದ ಬಸ್ ಸೇವೆಯನ್ನು ಜಿಲ್ಲಾಧಿಕಾರಿ ರದ್ದು ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿದ್ದರು. ಬಸ್ ಇಲ್ಲದೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದನ್ನುಗಮನಿಸಿಸ ಶಾಸಕರು ಬಸ್ ಸೇವೆ ಆರಂಭಿಸುವಂತೆ ಶಾಸಕರುಸೂಚನೆ ನೀಡಿದ್ದರು. ಅದರಂತೆ ನಾಳೆಯಿಂದ ಬಸ್ ಸೇವೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಮಧ್ಯಾಹ್ನ 2 ಮತ್ತು ಸಂಜೆ 5.30 ಕ್ಕೆ ಗುಮ್ಮಟೆಗದ್ದೆಯಿಂದ ಬಸ್ಸು ಹೊರಡಲಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇಲ್ಲಿನ ಬಸ್‌ಸಂಚಾರ ಬಂದ್ ಮಾಡಲಾಗಿತ್ತು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ನಾಳೆಯಿಂದ ಬಸ್ ಸಂಚಾರ ಪ್ರಾರಂಭ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ