ಪುತ್ತೂರು
ಹಾಡುಹಗಲೇ ಕೃಷಿಕನ ಮೇಲೆ ಕಾಡುಹಂದಿ. ದಾಳಿಗಂಭೀರ ಗಾಯಗೊಂಡ ಕೃಷಿಕ ಆಸ್ಪತ್ರೆಗೆ ದಾಖಲು ಕಡಬ ತಾಲೂಕಿನ ಸವಣೂರಿನ ಅಗರಿ ಎಂಬಲ್ಲಿ ಘಟನೆ ನಡೆದಿದೆ.
ರತ್ನಾಕರ ಪೂಜಾರಿ ಗಂಭೀರವಾಗಿ ಗಾಯಗೊಂಡ ಕೃಷಿಕ ತನ್ನ ಕೃಷಿ ತೋಟಕ್ಕೆ ನೀರು ಬಿಡಲು ಹೋದ ಸಂದರ್ಭದಲ್ಲಿ ದಾಳಿ ಮಾಡಿದ ಕಾಡುಹಂದಿ
ರತ್ನಾಕರ ಪೂಜಾರಿಯವರ ಕೈ ಮತ್ತು ಕಾಲನ್ನು ಜಗಿದು ಗಾಯ ದಾಳಿಯನ್ನು ಕಂಡು ಬೊಬ್ಬೆ ಹೊಡೆದ ರತ್ನಾಕರ ಪೂಜಾರಿಯವರ ದನಗಳು
ದನಗಳ ಬೊಬ್ಬೆಗೆ ಕೃಷಿಕನನ್ನು ಅರ್ಧಕ್ಕೆ ಬಿಟ್ಟು ಹೋದ ಹಂದಿ ಹಂದಿ ದಾಳಿಗೆ ಪೋಲೀಸ್ ಇಲಾಖೆಯೇ ಕಾರಣ ಎನ್ನುವ ಆರೋಪ ವನ್ನು ಮಾಡಿದ ರೈತ ಸಂಘ.
ಚುನಾವಣೆಯ ಹಿನ್ನಲೆಯಲ್ಲಿ ರತ್ನಾಕರ ಪೂಜಾರಿಯವರ ಕೋವಿಯನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಒತ್ತಾಯಿಸಲಾಗಿತ್ತು ಇದರಿಂದ ಕಾಡುಪ್ರಾಣಿಗಳ ಹಾವಳಿ ಇದ್ದರೂ ಕೋವಿ ಠೇವಣಿ ಇರಿಸಿದ್ದ ರತ್ನಾಕರ ಪೂಜಾರಿ
ಕೋವಿ ಕೃಷಿಕನ ಬಳಿ ಇರುತ್ತಿದ್ದರೆ ಈ ರೀತಿಯ ಅವಘಡ ನಡೆಯುತ್ತಿರಲಿಲ್ಲ ಘಟನೆ ನಡೆದ ತಕ್ಷಣ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ
ಕೋವಿ ಠೇವಣಿ ಇಟ್ಟ ಪರಿಣಾಮ ಹಂದಿ ದಾಳಿಯಾಗಿದೆ ಎನ್ನುವ ಮಾಹಿತಿ ನೀಡಲಾಗಿದೆ
ಕೋವಿ ಠೇವಣಿ ಇಡುವ ಕಾನೂನಿನಿಂದ ಕಾಡು ಪ್ರಾಣಿಗಳ ಸಮಸ್ಯೆ ಎದುರಿಸುವ ಕೃಷಿಕರನ್ನು ಮುಕ್ತ ಮಾಡಬೇಕು ಎಂದು ಈಗಾಗಲೇ ಮನವಿ ಮಾಡಲಾಗಿತ್ತು.
ಆದರೂ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ಚುನಾವಣಾ ಆಯೋಗ.ಹಂದಿ ದಾಳಿಗೊಳಗಾದ ಕೃಷಿಕನ ಎಲ್ಲಾ ಖರ್ಚುವೆಚ್ಚಗಳನ್ನು ಸರಕಾರ ಭರಿಸಬೇಕು ರೈತ ಸಂಘ ಒತ್ತಾಯ ಮಾಡಿದ್ದಾರೆ.
ಕೋವಿ ಠೇವಣಿಯಿಂದ ಕೃಷಿಕನನ್ನು ಹೊರಗಿಡಬೇಕು ಇಲ್ಲದೇ ಹೋದಲ್ಲಿ ಕಾಡುಪ್ರಾಣಿಗಳು ಕೃಷಿತೋಟಕ್ಕೆ ಬಂದಾಗ ಪೋಲೀಸರಿಗೆ ಕರೆ ಮಾಡಲು ನಿರ್ಧರಿಸಿರುವ ಕೃಷಿಕರು
112 ತುರ್ತುಕರೆಗೆ ಕರೆ ಮಾಡಿ ದೂರು ನೀಡಲಿರುವ ಕೃಷಿಕರು ಪೋಲೀಸರೇ ಬಂದು ಮಂಗ,ಹಂದಿ,ಆನೆಗಳನ್ನು ಓಡಿಸಬೇಕು ಎನ್ನುತ್ತಿದ್ದಾರೆ ಜಿಲ್ಲೆಯ ಕೃಷಿಕರು
ದಕ್ಷಿಣಕನ್ನಡದಲ್ಲಿ ತೀವ್ರಗೊಂಡ ಕೋವಿ ಠೇವಣಿ ವಿವಾದ ಚುನಾವಣೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಲೆನೋವಾದ ಕೃಷಿಕರ ಕೋವಿ ಠೇವಣಿ ಕಾನೂನು