ಕಡಬ: ಕುಮಾರಧಾರ ನದಿಯಲ್ಲಿ ತೇಲಿ ಬಂದ ಆನೆ ಮೃತ ದೇಹವನ್ನು ಎಲ್ಲಿ ದಫನ ಮಾಡಲಾಗಿದೆ…..!?
ಜನರಿಗಿದೆ ಸಂದೇಹದ ಪ್ರಶ್ನೆ ಉತ್ತರಿಸಬೇಕಾಗಿದೆ ಅರಣ್ಯ ಇಲಾಖೆ…!?
ಎಡೆಬಿಡದೇ ಸುರಿದ ಮಳಗೆ ಜುಲೈ 15 ರಂದು ಕುಮಾರಧಾರ ನದಿಯಲ್ಲಿ ರಾತ್ರಿ ಆನೆ ಮೃತ ದೇಹ ಪತ್ತೆಯಾದ ಬಗ್ಗೆ ಸಚಿತ್ರ ವರದಿಗಳಾಗಿದ್ದವು ಈ ಬಗ್ಗೆ ಆನೆ ಮೃತ ದೇಹಕ್ಕಾಗಿ ಅರಣ್ಯ ಇಲಾಖೆಯು ಹುಡುಕಾಟ ನಡೆಸಿದ್ದರು ಪತ್ತೆಯಾಗಿಲ್ಲ. ಹಾಗಾದರೆ ಆನೆ ದೇಹ ಏನಾಗಿದೆ..? ಆನೆಯ ಮೃತದೇಹದ ಪತ್ತೆಯಾಗಿದೆಯೋ….? ಎಲ್ಲಿ ಧಪನ ಮಾಡಿದ್ದಾರೆ ಎಂಬ ಬಹುದೊಡ್ಡ ಪ್ರಶ್ನೆಯಾಗಿದ್ದು ಇದಕ್ಕೆ ಉತ್ತರ ಬೇಕಾಗಿದೆ.
ಬಿಸಿಲೆ ಘಾಟ್ ಮೂಲಕ ಸುರಿದ ಮಳೆಯಿಂದ ನದಿಯಲ್ಲಿ ಏರಿಕೆಯಿದ್ದ ನೀರಿನ ಪ್ರವಾಹದಿಂದ ಆನೆ ಕೊಚ್ಚಿಕೊಂಡು ಬಂದಿರಬಹುದು ಎಂದು ಅಂದಾಜಿಸಲಾಗಿದೆಯಾದರು ಸಹ ಆನೆ ಮೃತದೇಹ ಪತ್ತೆಯಾಗಿಲ್ಲ. ಯಾರಿಗಾದರೂ ಸಿಕ್ಕಿ ದಂತಕ್ಕಾಗಿ ಹೊಳೆ ಬದಿಯಲ್ಲಿ ದಫನ ಮಾಡಿರಬಹುದೇ….? ಅಥವಾ ಹೊಳೆಯಲ್ಲಿಯೇ ತೇಲಿ ಹೋಗಿದೇಯೇ ಎಂಬುವ ಪ್ರಶ್ನೆ ಎದುರಾಗಿದೆ.
ಒಂದೊಮ್ಮೆ ತೇಲಿ ಹೋಗಿದ್ದರು ಸಹ ಮೃತದೇಹ ಸಿಗಲೇಬೇಕು ಹದಿನೈದು ದಿನ ಕಳೆದರೂ ಸಹ ಮೃತ ದೇಹ ಯಾಕೆ ಪತ್ತೆಯಾಗಿಲ್ಲ. ಇದನ್ನು ಮುತುವರ್ಜಿಯಿಂದ ಯಾಕೆ ಹುಡುಕಾಟ ನಡೆಸಿಲ್ಲ ಇದರ ಬಗ್ಗೆ ಯಾವುದೇ ಸ್ಥಳೀಯ ಜನಪ್ರತಿನಿಧಿಗಳು ಮಾತಾನಾಡಿಲ್ಲ.
ಅರಣ್ಯ ಇಲಾಕೆಗೆ ಇದನ್ನು ಹುಡುಕುವ ಇಚ್ಛಾಶಕ್ತಿ ಇಲ್ಲವೇ..? ಅಥವಾ ಹುಡುಕಾಟ ನಡೆಸಲು ಇವರ ಬಳಿ ವ್ಯವಸ್ಥೆಗಳಿಲ್ಲವೇ ಅರಣ್ಯ ಸಚಿವರ ಗಮನಕ್ಕೆ ಈ ವಿಚಾರ ತಿಳಿದಿದೆಯೇ. ಒರ್ವ ವ್ಯಕ್ತಿ ನೀರಿಗೆ ಹಾರಿದರೆ ಶವಕ್ಕಾಗಿ ಇಡೀ ದಿನ ಹುಡುಕಾಟ ನಡೆಸುವ ಸರಕಾರ ಆನೆಯ ಮೃತ ದೇಹ ಹುಡುಕಾಟ ಯಾಕೆ ನಡೆಸಿಲ್ಲ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲವೇ, ಅರಣ್ಯ ಇಲಾಖೆಗೆ ಹುಡುಕಾಟ ನಡೆಸಲು ಸಲಕರಣೆಗಳಿಲ್ಲವೇ…? ಎಂಬುದಾಗಿ ಪ್ರಾಣಿ ಪ್ರಿಯರಾದ ಯೋಗಿಶ್ ಅಳಕೆ ಪ್ರಶ್ನಿಸಿದ್ದಾರೆ. ಅಲ್ಲದೇ ಅರಣ್ಯ ಸಚಿವರಿಗೆ ಮನವಿ ನೀಡುತ್ತೇನೆ ಎಂದು ಯೋಗೀಶ್ ಅಳಕೆ ತಿಳಿಸಿದ್ದಾರೆ.
ಆನೆ ಮೃತ ದೇಹ ತೇಲಿ ಹೋಗುವ ಚಿತ್ರ
ಆನೆಗಳು ಅಷ್ಟು ಸುಲಭದಲ್ಲಿ ನೀರಿನಲ್ಲಿ ಸಾಯೋದಿಲ್ಲ ಬದಲಾಗಿ ಒಳ್ಳೆಯ ಈಜು ತಿಳಿದಿರುತ್ತದೆ. ಒಂದೋ ಮೊದಲೇ ಸತ್ತ ದೇಹ ಬಾರೀ ಮಳೆಯ ನೀರಿನಿಂದ ತೇಲಿ ಬಂದಿರಬಹುದು ದೊಡ್ಡ ಆಕಾರ ಇರುವ ಕಾರಣ ಮೃತ ದೇಹ ಸಿಗಬೇಕಾಗಿತ್ತು. ಸತ್ತು ಹೆಚ್ಚು ದಿನವಾಗಿದ್ದರೆ ಕೊಳೆತಿರಬಹುದು, ಅಥವಾ ಕಯ(ಸುಳಿಗುಂಡಿ)ಗಳಲ್ಲಿ ಸಿಕ್ಕಿರಬಹುದು, ಕೊಳೆತಿದ್ದರೆ ಮೊಸಳೆಗಳಿದ್ದರೆ ತಿಂದಿರಬಹುದು. ಒಂದೊಮ್ಮೆ ದೇಹ ಸಿಕ್ಕಿದರೆ ಅದರದ್ದೆ ಆದ ನಿಯಮ ಕಾನೂನಿನ ಮೂಲಕ ದಫನ ಮಾಡಲಾಗುತ್ತದೆ. ಅಲ್ಲದೇ ನಿರಂತರ ಸುರಿದ ಮಳೆಯಿಂದ ಏರಿಕೆಯಾಗಿರುವ ನದಿ ನೀರಿನ ಮಟ್ಟದಿಂದ ಹುಡುಕಾಟ ಕಷ್ಟವಾಗಿದೆ ಅವರವರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಹುಡುಕಾಟ ನಡೆಸಿದೆ ಎಂದು ಅಧಿಕಾರಿಯೊರ್ವರು ತಿಳಿಸಿದ್ದಾರೆ. ಕಡೆಯದಾಗಿ ಈ ಆನೆಯ ಮೃತ ದೇಹ ಏನಾಗಿದೆ. ಸಂಪೂರ್ಣ ಮಳೆ ನಿಂತ ಮೇಲೆ ಸಿಗಬಹುದೇ ಇದರ ಕೇಸ್ ಯಾವ ರೀತಿ ಮುಗಿಸುತ್ತಾರೆ ಎಂಬುವುದು ಸಾರ್ವಜನಿಕರಿಗೆ ಬಹು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.