ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಗುರುವಾರ ಮೂರು ಪ್ರಮುಖ ನಿರ್ಧಾರಗಳಿಗೆ ಅನುಮೋದನೆ ನೀಡಿದೆ. ಇವುಗಳಲ್ಲಿ ಬಲವರ್ಧಿತ ಅಕ್ಕಿ ವಿತರಣೆಗಾಗಿ ದೊಡ್ಡ ಪ್ರಮಾಣದ ಯೋಜನೆ, ಗುಜರಾತ್’ನಲ್ಲಿ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ಅಭಿವೃದ್ಧಿ ಮತ್ತು ರಾಜಸ್ಥಾನ ಮತ್ತು ಪಂಜಾಬ್ನ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆಗಳು ಸೇರಿವೆ.
17,082 ಕೋಟಿ ರೂ.ಗಳ ಬಲವರ್ಧಿತ ಅಕ್ಕಿ ಯೋಜನೆಗೆ ಸಂಪುಟದ ಅನುಮೋದನೆ.!
* ಭಾರತದಾದ್ಯಂತ ಪೌಷ್ಠಿಕಾಂಶದ ಕೊರತೆಯನ್ನ ನೀಗಿಸುವ ಮಹತ್ವದ ಕ್ರಮದಲ್ಲಿ, ಬಲವರ್ಧಿತ ಅಕ್ಕಿಯ ಸಾರ್ವತ್ರಿಕ ಪೂರೈಕೆಯನ್ನ ಮುಂದುವರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿತು.
* ಈ ಯೋಜನೆಯು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಸೇರಿದಂತೆ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳನ್ನ ಒಳಗೊಳ್ಳುತ್ತದೆ ಮತ್ತು ಜುಲೈ 2024 ರಿಂದ ಡಿಸೆಂಬರ್ 2028ರವರೆಗೆ ಕಾರ್ಯನಿರ್ವಹಿಸುತ್ತದೆ.
* ರಕ್ತಹೀನತೆ ಮತ್ತು ಪೋಷಕಾಂಶಗಳ ಕೊರತೆಯನ್ನ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಬಲವರ್ಧಿತ ಅಕ್ಕಿ ಉಪಕ್ರಮಕ್ಕೆ ಪಿಎಂಜಿಕೆಎವೈ ಅಡಿಯಲ್ಲಿ ಕೇಂದ್ರ ಸರ್ಕಾರವು 100% ಧನಸಹಾಯ ನೀಡಲಿದೆ.
* ಅಧಿಕೃತ ಹೇಳಿಕೆಯ ಪ್ರಕಾರ, ಈ ಪ್ರಯತ್ನವು ದೇಶಾದ್ಯಂತ ಅಕ್ಕಿ ಬಲವರ್ಧನೆಗೆ ಏಕೀಕೃತ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ, ಸುಮಾರು 80 ಕೋಟಿ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ.