ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಕರಾವಳಿಯಲ್ಲಿ ದೀಪಾವಳಿ ಹಬ್ಬಕ್ಕೆ ಈ ಬಾರಿ ಹಲಾಲ್ ಮುಕ್ತ ಅಭಿಯಾನವನ್ನು ಹಿಂದೂ ಜನಜಾಗೃತಿ ಸಮಿತಿ ಆರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳ ಮುಂದೆ ಭಿತ್ತಪತ್ರ ಮತ್ತು ಪೋಸ್ಟರ್ ಗಳನ್ನು ಹಂಚಲು ಸಮಿತಿಯು ಆರಂಭಿಸಿದೆ. ಹಲಾಲ್ ಚಿಹ್ನೆ ಇರುವ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಅಭಿಯಾನದ ಮೂಲಕ ಮನವಿ ಮಾಡುತ್ತಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಮತ್ತೆ ಮುಸ್ಲಿಂ ಷರಿಯಾ ಕಾನೂನಿನಡಿ ಬರುವ ಹಲಾಲ್ ವಿರುದ್ಧ ಅಭಿಯಾನ ಆರಂಭಗೊಂಡಿದೆ. ಈ ಬಾರಿಯ ದೀಪಾವಳಿಯಲ್ಲಿ ಹಲಾಲ್ ಮಾರ್ಕ್ ಇರುವ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರಾವಳಿಯಾದ್ಯಂತ ಅಭಿಯಾನ ಆರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಮುಂದೆ ಭಿತ್ತಿಪತ್ರ ಮತ್ತು ಪೋಸ್ಟರ್ ಗಳನ್ನು ಹಿಡಿದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಮನವಿ ಮಾಡುತ್ತಿದೆ.
ಕೇವಲ ತಿನ್ನುವ ಉತ್ಪನ್ನಗಳಲ್ಲಿ ಮಾತ್ರವಿದ್ದ ಹಲಾಲ್ ಮಾರ್ಕ್ ಇಂದು ಎಲ್ಲಾ ಉತ್ಪನ್ನಗಳ ಮೇಲೆ ಹಾಕಲಾಗುತ್ತಿದೆ. ಮುಸ್ಲಿಂ ಷರಿಯಾ ಕಾನೂನಿನಡಿ ಬರುವ ಈ ಹಲಾಲ್ ಪದ್ಧತಿಯನ್ನು ಬಲತ್ಕಾರವಾಗಿ ಹಿಂದೂಗಳ ಮೇಲೆ ಹೇರಲಾಗುತ್ತಿದೆ ಎನ್ನುವುದು ಸಂಘಟನೆಗಳ ಆರೋಪವಾಗಿದೆ.
ದೇಶದಲ್ಲಿ ಆಹಾರ ಮತ್ತು ಸುರಕ್ಷತೆಗೆ ಸಂಬಂಧಪಟ್ಟ ಸಂಸ್ಥೆಯೊಂದಿದ್ದು, ಈ ಸಂಸ್ಥೆ ನೀಡುವ ಸರ್ಟಿಫಿಕೇಟ್ ಹೊತತಾಗಿಯೂ ಬಹುತೇಕ ಎಲ್ಲಾ ಉತ್ಪನ್ನಗಳ ಮೇಲೆ ಹಲಾಲ್ ಸರ್ಟಿಫಿಕೇಟ್ ಮುದ್ರಿಸಲಾಗುತ್ತಿದೆ. ಮುಸ್ಲಿಂ ಮೂಲಭೂತ ಸಂಘಟನೆಗಳು ಈ ಅನಧಿಕೃತ ಕಾನೂನನ್ನು ದೇಶದ ಎಲ್ಲಾ ವರ್ಗದ ಜನರ ಮೇಲೆ ಹೇರುವ ಪ್ರಯತ್ನ ನಡೆಸುತ್ತಿರುವ ಹಿನ್ನಲೆಯಲ್ಲಿ ಹಿಂದೂಗಳು ಇಂತಹ ಉತ್ಪನ್ನಗಳಿಂದ ದೂರ ಉಳಿಯಬೇಕು. ಕೇವಲ ದೇಶದಲ್ಲೇ ತಯಾರಾಗುವ ಸ್ವದೇಶೀ ಉತ್ಪನ್ನಗಳನ್ನೇ ಈ ಬಾರಿ ದೀಪಾವಳಿಯಲ್ಲಿ ಉಪಯೋಗಿಸುವಂತೆ ಸಂಘಟನೆ ಮನವಿ ಮಾಡಲಾಗುತ್ತಿದೆ.
ಮುಖ್ಯವಾಗಿ ಮುಸ್ಲಿಂ ಷರಿಯಾ ಕಾನೂನಿನಡಿ ಬರುವ ಹಲಾಲ್ ಮೇಲೆ ಇದೀಗ ಹಿಂದೂ ಜನಜಾಗೃತಿ ಸಮಿತಿ ಮುಂದಾಗಿದೆ. ಈ ಬೆಳವಣಿಗೆ ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ ಗೆ ಚಾಲನೆ ದೊರೆತಿದೆ.