ಧರ್ಮಸ್ಥಳ: ಧರ್ಮಸ್ಥಳದ ಸ್ನಾನಘಟ್ಟವನ್ನು ಅಪವಿತ್ರಗೊಳಿಸಲು ಕೆಲ ಕಿಡಿಗೇಡಿಗಳು ಪ್ರಯತ್ನ ನಡೆಸಿದ್ದಾರೆ.
ನೇತ್ರಾವತಿ ನದಿಯನ್ನು ಸೇರುವ ಚಾರ್ಮಾಡಿಯ ಮೃತ್ಯುಂಜಯ ನದಿಗೆ ಕಿಡಿಗೇಡಿಗಳು ಗೋಮಾಂಸದ ತ್ಯಾಜ್ಯವನ್ನು ಸುರಿದಿದ್ದಾರೆ. ನದಿಯಲ್ಲಿ ದನದ ಚರ್ಮ, ಕೊಂಬು, ಇತ್ಯಾದಿ ತ್ಯಾಜ್ಯ ಹೊಂದಿರುವ 11 ಗೋಣಿಗಳು ಪತ್ತೆಯಾಗಿದೆ
ನೇತ್ರಾವತಿ ನದಿ ಸೇರುವ ಮೃತ್ಯುಂಜಯ ನದಿ ನೀರಿನಲ್ಲಿಯೇ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಸ್ನಾನ ಮಾಡುತ್ತಾರೆ. ಇಂತಹ ನೀರಲ್ಲಿ ಈ ಕೃತ್ಯ ಎಸಗಿರುವುದು ಸಾಕಷ್ಟು ಅನುಮಾನ, ಆಕ್ರೋಶಕ್ಕೆ ಕಾರಣವಾಗಿದೆ.
ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಬೇಕು ಎನ್ನುವುದು ದುಷ್ಟ ಮನಸ್ಥಿತಿಗಳ ಹುನ್ನಾರ. ಇದು ಮತಾಂಧತೆಯನ್ನು ತೋರಿಸುತ್ತದೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇದ್ಯೋ?.ಇಲ್ವೋ ಎಂದು ಪ್ರಶ್ನೆ ಮಾಡಿದ್ದಾರೆ.