ಬೆಳಗಾವಿ ಜಿಲ್ಲೆಯಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ. ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರೋ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರೋ ಶಿಕ್ಷಕಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮೂರು ಬಾರಿ ಮಾನಭಂಗ ಮಾಡಲು ಪ್ರಯತ್ನಿಸಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಘಟನೆ.
ನಿಡಗುಂದಿ ಗ್ರಾಮದ ಸಿದ್ರಾಯಿ ಕರ್ಲಟ್ಟಿ ಎಂಬುವವನು ಈ ನೀಚ ಕೃತ್ಯ ಎಸಗಿದ್ದಾನೆ. ದೀಪಾ ಮಾನ್ಸಿ ಎಂಬ ಅಂಗನವಾಡಿ ಕಾರ್ಯಕರ್ತೆಗೆ ಕಿರುಕುಳ ನೀಡಿದ್ದಾನೆ. ಜನವರಿ 8 ರಂದು ಕ್ಷುಲಕ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಸಿದ್ದ. ನಂತರ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿದು ಬಂದಿದೆ. ಈ ಒಂದು ಘಟನೆ ಜನವರಿ 8ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಿದ್ರಾಯಿ ಕರ್ಲಟ್ಟಿ ಪತ್ನಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ತಯಾರಕಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಳು. ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಒಂದೇ ಸ್ಥಳದಲ್ಲಿವೆ. ಅಡುಗೆ ಸಹಾಯಕಿಯಿಂದ ಶೌಚಾಲಯ ಕ್ಲೀನ್ ಮಾಡಿಸುವಂತೆ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ದೀಪಾ ಬಾನ್ಸಿ ತಿಳಿಸಿದ್ದರು. ದೀಪಾ ಮಾನ್ಸಿ ಮಾತನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡಿದ್ದಳು ಸಿದ್ರಾಯಿ ಕರ್ಲಟ್ಟಿ ಪತ್ನಿ. ಈ ವಿಷಯವನ್ನು ಪತಿ ಸಿದ್ರಾಯಿ ಕರ್ಲಟ್ಟಿಗೆ ಪತ್ನಿ ದೀಪ ಮಾನ್ಸಿ ತಿಳಿಸಿದ್ದಾಳೆ.
ಇದೇ ಸಿಟ್ಟನ್ನು ಮೈಮೇಲೆ ಏರಿಸಿಕೊಂಡ ಸಿದ್ರಾಯಿ ಅಂಗನವಾಡಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಶೌಚಾಲಯ ಕ್ಲೀನ್ ಮಾಡುವುದಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಕೂಡಲೇ ಅಂಗನವಾಡಿಗೆ ಆಗಮಿಸಿ ದೀಪಾ ಮಾನ್ಸಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಸಿದ್ರಾಯಿ ಕರ್ಲಟ್ಟಿ. ಇದನ್ನೆ ಬಂಡವಾಳ ಮಾಡಿಕೊಂಡ ಸಿದ್ದರಾಯಿ, ದೀಪಾ ಮಾನ್ಸಿಯ ಮೈಕೈ ಮುಟ್ಟಿ ಬೇಕಾದಲ್ಲಿ ಕೈಯಿಂದ ಸ್ಪರ್ಶ ಮಾಡಿದ್ದಾನೆಂದು ದೀಪಾ ಮಾನ್ಸಿ ಆರೋಪಿಸುತ್ತಿದ್ದಾರೆ. ಈ ಕುರಿತಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.