ಪುತ್ತೂರು: ಕೇಮ್ಮಾಯಿಯ ಆನಂದ ಕುಟೀರ ಬಳಿ ಕಾರು ಮತ್ತು ಬೈಕ್ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ರಾಧಾ ರೆಸಿಡೆನ್ಸಿ ಯಲ್ಲಿ ಇರುವ ವ್ಯಕ್ತಿಯೊರ್ವರು ಪುತ್ತೂರು ಕಡೆಯಿಂದ ಬಂದು ಆನಂದ ಕುಟೀರ ಬಳಿ ಕಾರನ್ನು ತಿರುಗಿಸುವ ಸಂದರ್ಭದಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ವಿವೇಕಾನಂದ ಕಾಲೇಜ್ ಗೆ ಬರುತ್ತಿರುವ ವಿದ್ಯಾರ್ಥಿಗಳಿಬ್ಬರ ಬೈಕ್ ಕಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಬಸಕ್ಕೆ ವಿದ್ಯಾರ್ಥಿಗಳಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವರದಿ ಇನ್ನಷ್ಟೇ ತಿಳಿದು ಬರಬೇಕಿದೆ.
ಚಾಲಕರ ನಿರ್ಲಕ್ಷ್ಯ:
ನಿನ್ನೆಯಷ್ಟೇ ಪಕ್ಕದಲ್ಲೇ ಕ್ರೇಟಾ ಕಾರೊಂದು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಬರುತ್ತಿರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಡಿವೈಡರಿನಿಂದ ಹಾರಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ನಿಂತಿದೆ. ಚಾಲಕನು ಅಪಾಯದಿಂದ ಪಾರಾಗಿದ್ದಾನೆ. ಈ ರಸ್ತೆಯು ಮೊದಲು ಚಿಕ್ಕದಾಕಿದ್ದು, ಈಗ ಅಗಲೀಕರಣವಾಗಿ ಚತುಷ್ಪಥವಾಗಿ ಮಾರ್ಪಟ್ಟಿದೆ.. ಆದರೆ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಚಾಲಕರಲ್ಲಿ ಹೆಚ್ಚಿನವರು ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದೇ ಇದಕ್ಕೆ ಕಾರಣ ಎನ್ನಬಹುದು. ರಸ್ತೆಯಲ್ಲಿ ಅತಿಯಾದ ವೇಗ ಮತ್ತು ಚತುಷ್ಪಥ ರಸ್ತೆಯಲ್ಲಿ ಹೋಗುವಾಗ ಎಡ, ಬಲ ಚಲಿಸುವಾಗ ಯಾವುದೇ ಸಿಗ್ನಲ್ ಕೊಡದೆ ಸಡನ್ ಆಗಿ ತಿರುಗಿಸುವುದು ಈ ಘಟನೆಗಳು ಆಗಲು ಕಾರಣ ವಾಗಿದೆ.