ಪುತ್ತೂರು: ರಂಗೇರಿದ ಚುನಾವಣಾ ಆಖಾಡದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 12 ಸದಸ್ಯರು ಪುತ್ತೂರು ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
ಒಂದು ಸೀಟು ಅವಿರೋಧ ಆಯ್ಕೆಯ ಬಳಿಕ ನಡೆದ ಚುನಾವಣೆಯಲ್ಲಿ 12 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.
ಹರೀಶ್ ಬಿಜತ್ರೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ಕಿಶೋರ್ ಕೊಳತ್ತಾಯ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಶ್ರೀಧರ್ ಪಟ್ಲ, ಸುಜೀಂದ್ರ ಪ್ರಭು, ಗಣೇಶ್ ಕೌಕ್ರಾಡಿ, ಮಲ್ಲೇಶ್, ವೀಣಾ, ಸೀಮಾ, ಕಿರಣ್ ಕುಮಾರ್, ಶ್ರೀಧರ್ ಗೌಡ ಚುನಾವಣೆಯಲ್ಲಿ ಜಯಭೇರು ಭಾರಿಸಿದ್ದಾರೆ.