ಪುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರನ್ನು ದರ್ಬೆಯಲ್ಲಿ ಸ್ವಾಗತ.
ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಗಾಗಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ‘ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ’ಗೆ ಭಾಜನರಾದ ಎಸ್.ಆರ್.ಕೆ. ಲ್ಯಾಡರ್ಸ್‌ನ ಮಾಲಕ, ಉದ್ಯಮಿ ಕೇಶವ ಅಮೈ ಅವರಿಗೆ ಜೂ.29ರಂದು ಪುತ್ತೂರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಬಳಿಕ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಬಳಿಕ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.
ತಮಗೆ ದೊರೆತ ಕೆಂಪೇಗೌಡ ಪ್ರಶಸ್ತಿ ಫಲಕ, 100 ಗ್ರಾಂ ಬೆಳ್ಳಿ ಪದಕದೊಂದಿಗೆ ತೆರೆದ ವಾಹನದಲ್ಲಿ ಕೇಶವ ಅಮೈ ಅವರು ಮುಕ್ರಂಪಾಡಿಯಲ್ಲಿರುವ ತಮ್ಮ ಸಂಸ್ಥೆಗೆ ಆಗಮಿಸಿದರು.ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ಉದ್ಯಮಿಗಳು, ಸಿಬ್ಬಂದಿ ವರ್ಗ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.























